ರಾಜ್ಯಸುದ್ದಿ

ತನ್ನ ಮರಿಯನ್ನು ಉಳಿಸಿಕೊಳ್ಳಲು ಈ ಆನೆ ಮಾಡಿದ್ದೇನು ಗೊತ್ತಾ? ನೀವು ನೋಡಿದರೆ ದಂಗಾಗ್ತೀರಾ!

Mother elephant killed crocodile: ಸಾಮಾನ್ಯವಾಗಿ ಕೆಲವೊಂದು ಪ್ರಾಣಿಗಳು(Animals) ಯಾವುದೇ ಪ್ರಾಣಿಗಳ ಮೇಲೆ ದಾಳಿ(Attack) ಮಾಡದೆ ಆರಾಮಾಗಿ ತಮ್ಮ ಪಾಡಿಗೆ ತಾವು ಆಹಾರ(Food) ತಿನ್ನುತ್ತಾ ತನ್ನ ಮರಿಗಳೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತೆ. ಹಾಗೂ ತಮ್ಮ ಮರಿಗಳನ್ನು ಸಂರಕ್ಷಿಸುತ್ತ ಜಾಗರೂಕತೆಯಿಂದ ಇರುವುದನ್ನು ನಾವು ನೋಡುತ್ತೇವೆ. ಅದರಲ್ಲೂ ಸಾಮಾನ್ಯವಾಗಿ ಆನೆಗಳು(Elephants) ಶಾಂತ ಪ್ರಾಣಿಯೇ ಆದರೂ, ಒಮ್ಮೊಮ್ಮೆ ಎಷ್ಟು ಶಾಂತವಾಗಿರುತ್ತವೆಯೋ ಅದರ ದುಪ್ಪಟ್ಟು ಅಪಾಯಕಾರಿ(Danger) ಆಗುವುದು ಅವುಗಳು ತಾಯಿಯಾದಾಗ ಎಂದು ಹೇಳಲಾಗುತ್ತದೆ.

ಈ ಆನೆಯ ಬಗ್ಗೆ ಇಲ್ಲಿ ಏಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಕಾಡಬಹುದು. ಇಲ್ಲೊಂದು 1 ನಿಮಿಷದ 41 ಸೆಕೆಂಡಿನ ವಿಡಿಯೋ(Video) ಸಾಮಾಜಿಕ ಮಾಧ್ಯಮ(Social media)ದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಮೊಸಳೆ(Crocodile)ಯನ್ನು ತಾಯಿ ಆನೆಯೊಂದು(Mother Elephant) ತನ್ನ ಕಾಲಿನಿಂದ ಹಿಸುಕಿ ಕೊಂದಿರುವ ವಿಡಿಯೋ ಅಂತರ್ಜಾಲದಲ್ಲಿ ಸಖತ್​ ವೈರಲ್​(Viral) ಆಗುತ್ತಿದೆ. ತಾಯಿ ಪ್ರೀತಿ ಅಂದರೆ ಏನು ಅರ್ಥವಾಗಬೇಕೆಂದರೆ ಈ ವಿಡಿಯೋ ನೋಡಿ ಅನ್ನುತ್ತಿದ್ದಾರೆ ನೆಟ್ಟಿಗರು

ಕಾಲಿನಿಂದ ತುಳಿದು ಮರಿಯಾನೆ ರಕ್ಷಿಸಿದ ಆನೆ

ಈ ಘಟನೆ ನಡೆದದ್ದು ನಮ್ಮ ದೇಶದಲ್ಲಿ ಅಲ್ಲ, ಇದು  ಆಫ್ರಿಕಾದ ಜಾಂಬಿಯಾದ ಸಫಾರಿಯಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದೆ. ಸಫಾರಿಗೆ ಬಂದಿರುವ ಒಬ್ಬ ವ್ಯಕ್ತಿ ಈ ಘಟನೆಯನ್ನು ಚಿತ್ರೀಕರಿಸಿ, ನಂತರ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಆಫ್ರಿಕಾದ ಹೆಣ್ಣು ಆನೆಯೊಂದು ತನ್ನ ಎಲ್ಲಾ ಶಕ್ತಿ ಬಳಸಿಕೊಂಡು ನೀರಿನಲ್ಲಿರುವ ಮೊಸಳೆಯನ್ನು ತನ್ನ ಸೊಂಡಿಲಿನಿಂದ ಎಳೆದು ಹಿಡಿದು ಕಾಲಿನಿಂದ ಮೊಸಳೆಯನ್ನು ತುಳಿಯುವುದನ್ನು ನೋಡಬಹುದು. ಈ ಘಟನೆಯ ಹಿಂದಿನ ಕಾರಣವೆಂದರೆ ಸರೀಸೃಪವು ತನ್ನ ಮರಿ ಆನೆಯ ಕಡೆಗೆ ಬರುತ್ತಿರುವುದನ್ನು ತಾಯಿ ಆನೆ ಸಹಿಸಲಿಲ್ಲ. ಹೀಗಾಗಿ ಮೊಸಳೆ ಮೇಲೆ ಆನೆ ಏಕಾಏಕಿ ದಾಳಿ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button