90ರ ದಶಕದಲ್ಲಿ ಟಾಪ್ ನಟಿಯಾಗಿದ್ದ ರವೀನಾ ಟಂಡನ್ (Happy Birthday Raveena Tandon) ಅವರ ಹುಟ್ಟುಹಬ್ಬವಿಂದು. ಅಕ್ಟೋಬರ್ 26ರಂದು ಅಂದರೆ ಇಂದು ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿರುವ ನಟಿ ರವೀನಾ ಟಂಡನ್ ಅವರು ತಮ್ಮ ಸಿನಿ ಜೀವನದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮೋಹ್ರಾ (Mohra) ಸಿನಿಮಾದಲ್ಲಿ ಅವರಿಗೆ ಈ ಇಂಡಸ್ಟ್ರಿಯಲ್ಲಿ ಹೊಸ ಗುರುತು ಸಿಕ್ಕಿತ್ತು. ಜನರು ಈ ಸಿನಿಮಾದ ನಂತರ ಅವನ್ನು ಮಸ್ತ್ ಮಸ್ತ್ ಹುಡುಗಿ (Mast Mast Girl) ಎಂದೇ ಕರೆಯಲಾರಂಭಿಸಿದರು. ಸಿನಿ ಜೀವನದ ಆರಂಭದಲ್ಲಿ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದ್ದ ಈ ನಟಿ ನಂತರದಲ್ಲಿ ಪಾತ್ರಗಳಿಗೆ ಪ್ರಾಮುಖ್ಯತೆ ಇರುವ ಸಿನಿಮಾಗಳಲ್ಲಿ ನಟಿಸಲಾರಂಭಿಸಿದರು. ಈ ಮೂಲಕ ಅವರು ತಮ್ಮ ಅಭಿನಯಸಾಮರ್ಥ್ಯವನ್ನೂ ಸಾಬೀತು ಪಡಿಸಿದರು.

ಹಿಂದಿ, ತೆಲುಗು ಹಾಗೂ ಕನ್ನಡದಲ್ಲಿ ನಟಿಸಿರುವ ಈ ನಟಿ ಒಂದು ಕಾಲದಲ್ಲಿ ಟಾಪ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ರವೀನಾ ಟಂಡನ್ ಅವರು ತಮ್ಮ ಸಿನಿ ಜೀವನದ ಆರಂಭವನ್ನು 1991ರಲ್ಲಿ ಪತ್ಯಾರ್ ಕೆ ಫೂಲ್ ಚಿತ್ರದ ಮೂಲಕ ಮಾಡಿದ್ದರು. ಈ ಸಿನಿಮಾದಲ್ಲಿ ರವೀನ್ ಅವರು ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಮೊದಲ ಸಿನಿಮಾದ ಮೂಲಕವೇ ರವೀನಾ ಅಭಿಮಾನಿಗಳ ಹೃದಯದಲ್ಲಿ ಜಾಗ ಗಿಟ್ಟಿಸಿಕೊಂಡರು. ನಂತರ ಮೋಹ್ರಾ, ದಿಲ್ವಾಲೆ, ಅಂದಾಜ್ ಅಪ್ನಾ ಅಪ್ನಾ ಹಾಗೂ ದುಲ್ಹೆ ರಾಜ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ತಮಗಿಂತ ಹಿರಿಯ ಕಲಾವಿದರ ಜೊತೆ ಸಹ ಕೆಲಸ ಮಾಡಿದ್ದಾರೆ.