ಸಿದ್ದರಾಮೇಶ್ವರರ 853 ನೇ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು

ಹೆಚ್ ಡಿ ಕೋಟೆ : ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಿದ್ದರಾಮೇಶ್ವರರ 853 ನೇ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಷ್ಪರ್ಚನೆಯನ್ನೂ ಮಾಡುವ ಮೂಲಕ ಹೆಚ್ ಡಿ ಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಹಾಗೂ ವೇದಿಕೆಯ ಗಣ್ಯರು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಕುರಿತು ಪ್ರಸ್ತವಿಕವಾಗಿ ಮಾತನಾಡಿದ ಹೆಚ್ ಡಿ ಕೋಟೆ ಸರಗೂರು ತಾಲೋಕಿನ ಬೋವಿ ಸಮಾಜದ ಅಧ್ಯಕ್ಷ ಐಡಿಯಾ ವೆಂಕಟೇಶ್ ಮಾತನಾಡಿ ಈ ಕಾರ್ಯಕ್ರಮವನ್ನು ಮಾಡಲು ಸತತವಾಗಿ ಊರೂರು ತಿರುಗಿ ಸಮುದಾಯದ ಜನರನ್ನು ಒಗ್ಗೂಡಿಸಿ ನಾವು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಈ ಕಾರ್ಯಕ್ರಮಕ್ಕೆ ಶಾಸಕರು ಹಾಗೂ ಅಧಿಕಾರಿ ಮಿತ್ರರು ಸಹಕಾರ ನೀಡಿದ್ದಾರೆ
ಹಾಗೂ ನಮ್ಮ ಸಮುದಾಯದ ಮಕ್ಕಳು ಹೆಚ್ಚು ವಿದ್ಯಾಭ್ಯಾಸ ಮಾಡಬೇಕು ಅವರಿಗೆ ಸ್ಫೂರ್ತಿ ನೀಡಲು ಹತ್ತನೇಯ ತರಗತಿ ಮತ್ತು ದ್ವಿತೀಯ ಪಿ ಯು ಸಿ ಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ಮಕ್ಕಳಿಗೆ ಅಭಿನಂದನೆ ಕಾರ್ಯಮವನ್ನು ಆಯೋಜನೆ ಮಾಡಲಾಗಿದೆ
ಯಾವುದೇ ಸಂದರ್ಭ ಬಂದರು ನಾವೆಲ್ಲ ಒಗ್ಗಟ್ಟಾಗಿ ಮುಂದೆ ಸಾಗೋಣ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸೋಣ ಎಂದು ಕರೆ ನೀಡಿದರು
ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಕಾರ್ಯಕ್ರಮದ ಅದ್ಯಾಕ್ಷಿಯಾ ಮಾತನಾಡಿ. ನಾನು ನನ್ನ ಕ್ಷೇತ್ರದ ಎಲ್ಲಾ ದಾರ್ಷಾನಿಕರ ಜಯಂತಿಗಳನ್ನು ಬಹಳ ಅರ್ಥಪೂರ್ಣವಾಗಿ ತಾಲೋಕು ಮಟ್ಟದಲ್ಲಿ ಅದ್ದೂರಿಯಾಗಿ ಆಯೋಜನೆ ಮಾಡುತ್ತ ಬಂದಿದ್ದೇವೆ ಹಾಗೆಯೇ ಇಂದು ಸಿದ್ದರಾಮೇಶ್ವರ ಜಯಂತಿಯನ್ನೂ ಬೋವಿ ಸಮುದಾಯದ ಅದ್ಯಕ್ಷತೆಯಲ್ಲಿ ಎಲ್ಲಾ ಸಮುದಾಯದ ಸಹಕಾರದಿಂದ ಬಹಳ ಅರ್ಥಪೂರ್ಣವಾಗಿ ಆಯೋಜನೆ ಮಾಡಲಾಗಿದೆ
ಸಿದ್ದರಾಮೇಶ್ವರ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗುಡಿಸಿ ಕೊಂಡು ಹೋಗಬೇಕು
ನಾನು ತಾಲೋಕು ಮಟ್ಟದಲ್ಲಿ ಸಿದ್ದರಾಮೇಶ್ವರ ಭವನ ನಿರ್ಮಾಣ ಮಾಡಲು ಸಾಕಷ್ಟು ಅನುದಾನ ಬಿಡುಗಡೆ ಯಾಗಿದೆ ತಾಂತ್ರಿಕ ದೋಷದಿಂದ ಗುತ್ತಿಗೆದಾರರು ಕಾಮಗಾರಿ ಪ್ರಾರಂಬಿಸಲು ಸಾಧ್ಯವಾಗಿಲ್ಲ
ಹಾಗೂ ಬೋವಿ ಸಮುದಾಯದ ಮುಖಂಡರು ಕೆಲವು ಸಮಾಜಮುಖಿ ಕಾರ್ಯಗಳಿಗೆ ಮನವಿ ನೀಡಿದ್ದಾರೆ ಅದನ್ನು ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು ದೇಶದಲ್ಲಿ ಕೆರೆ ಕಟ್ಟೆ ಬಾವಿ ನಿರ್ಮಾಣ ಮಾಡಲು ಸೈಜುಗಲ್ಲು ಒಡೆಯುವ ಶಕ್ತಿ ಇರುವುದು ನನ್ನ ಪ್ರಕಾರ ಬೋವಿ ಸಮಾಜಕ್ಕೆ ಮಾತ್ರ ಎಂದು ತಿಳಿಸಿದರು
ಕಾರ್ಯಕ್ರಮಕ್ಕೆ ಆಗಮಿಸಿದ ಚಿತ್ರದುರ್ಗ ಸಿದ್ದರಾಮೇಶ್ವರ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರಿಗೂ ಆಶೀರ್ವಾಚನ ನೀಡಿದರು
ಕಾರ್ಯಕ್ರಮದಲ್ಲಿ ಬಿಡುಗಲು ವಿರಕ್ತ ಮಠದ ಮಹದೇವಸ್ವಾಮಿ ಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ, ಶಾಸಕ ಅನಿಲ್ ಚಿಕ್ಕಮಾದು, ತಹಶೀಲ್ದಾರ್ ಶ್ರೀನಿವಾಸ್,ಬೋವಿನಿಗಮದ ಮಾಜಿ ಅಧ್ಯಕ್ಷ ಸೀತಾರಾಮ್, ಬೋವಿ ಸಮುದಾಯದ ಅಧ್ಯಕ್ಷ ಐಡಿಯಾ ವೆಂಕಟೇಶ್, ಮುಖಂಡರಾದ ದೊಡ್ಡನಾಯಕ, ಸಮಾಜ ಸೇವಕ ಶಂಕರೇಗೌಡ, ಪುರಸಭೆ ಸದಸ್ಯರುಗಳಾದ ಕುಲುಮೆ ರಾಜು, ಸೋಮಶೇಖರ್,ನಾಗಮ್ಮ,ಪ್ರೇಮಸಾಗರ್, ಶಾಂತಮ್ಮ ಗೋವಿಂದರಾಜು, ಬಿದರಹಳ್ಳಿ ರಾಜು ಮುಖಂಡ ಪ್ರದೀಪ್,ಬೋವಿಸಮುದಾಯದ ಕಾರ್ಯಕಾರಿ ಸಮಿತಿ ಗೌರವ ಅಧ್ಯಕ್ಷ
ಶ್ರೀ ರಾಜು,ಉಪಾಧ್ಯಕ್ಷ ರವಿ, ಕಾರ್ಯದರ್ಶಿ ಕಂಡಸ್ವಾಮಿ, ಖಜಾಂಚಿ ರಾಮಕೃಷ್ಣ, ಬಸಪ್ಪ ನಂದಿನಾಥಪುರ, ವೆಂಕಟರಮಾ, ಗುತ್ತಿಗೆದಾರ ರಘು, ಶೇಖರ್, ನಾಗೇಂದ್ರ, ನಾಗರಾಜಣ್ಣ ಗ್ರಾ ಸದಸ್ಯ ಪ್ರದೀಪ್ ಶ್ರೀನಿವಾಸ್ ಎಲ್ಲಾ ಗ್ರಾಮದ ಯಜಮಾನರು, ಮುಖಂಡರು, ಗ್ರಾಮಸ್ಥರು ಎಲ್ಲಾ ಪಕ್ಷದ ಕಾರ್ಯ ಕರ್ತರು
ಹಾಜರಿದ್ದರು