ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru Rains) ರಾತ್ರಿ ಸುರಿದ ಮಳೆಗೆ, ನಗರವಾಸಿಗಳು ಹೈರಾಣು ಅಗಿದ್ದಾರೆ. ರಾತ್ರಿ 10 ಗಂಟೆಯ ನಂತರ ಆರಂಭವಾದ ಮಳೆಯಿಂದಾಗಿ ನಗರದ ಬಹುತೇಕ ಅಂಡರ್ ಪಾಸ್ (Underpass)ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಎರಡು ಗಂಟೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಬಿಬಿಎಂಪಿ (BBMP) ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಓಕಳಿಪುರಂ, ವಿಂಡ್ಸರ್ ಮ್ಯಾನರ್, ರೇಸ್ ಕೋರ್ಸ್ ರಸ್ತೆಯ ಅಂಡರ್‌ಪಾಸ್ ಜಲಾವೃತವಾಗಿ ರಾತ್ರಿ ವಾಹನ ಸವಾರರ (Benglauru Traffic And Potholes)ಪರದಾಟ ನಡೆಸುವಂತಾಯ್ತು.
ಬೆಂಗಳೂರಿನ ಯಾವ ಏರಿಯಾದಲ್ಲಿ ಮಳೆ?
ಬೆಂಗಳೂರಿನ ಪೂರ್ವ ವಲಯ, ಆರ್.ಆರ್ ನಗರ ವಲಯ, ಪೂರ್ವ ವಲಯದಲ್ಲಿ ಹೆಚ್ಚು ಮಳೆಯಾಗಿದೆ. ಬಸವೇಶ್ವರ ನಗರ 79 mm, ಪ್ರಕಾಶ್ ನಗರ 79 mm, ಕಾಟನ್ ಪೇಟೆ 55 mm, ಬಿನ್ನಿಮಿಲ್ 55 mm, ಓಕಳಿಪುರಂ, ಕೆ.ಪಿ ಅಗ್ರಹಾರ 55 mm, ಆರ್.ಆರ್ ನಗರ 49 mm, ಸುಭಾಷ್ ನಗರ 48.5 mm, ಮಲ್ಲೇಶ್ವರಂ 38 mm ಮತ್ತು ಯಶವಂತಪುರದಲ್ಲಿ 38.5 mm ಮಳೆಯಾಗಿರುವ ಬಗ್ಗೆ ಬಿಬಿಎಂಪಿ ವರದಿ ಮಾಡಿದೆ.
ಗಾಯತ್ರಿನಗರ ವಾರ್ಡ್ ನ ಲಕ್ಷ್ಮೀ ನಾರಾಯಣ ಪುರ ಏರಿಯಾದ ಹಲವು ಏರಿಯಾಗಳ ಮನೆಗಳಿಗೆ ನೀರು ನುಗ್ಗಿದೆ. ರಾತ್ರಿಯೆಲ್ಲ ಜನರು ಜಾಗರಣೆ ಮಾಡುವಂತಾಯ್ತು. ಮಳೆ ಬಂದ ಪ್ರತೀ ಸಾರಿ ನೂ ಇದೇ ಗತಿ. ಅಧಿಕಾರಿಗಳಿಗೆ ಎಷ್ಟು ಹೇಳಿದ್ರೂ ಏನೂ ಪ್ರಯೋಜನೆ ಇಲ್ಲ. ಇಲ್ಲಿ ಚೇಂಬರ್ ಸಮಸ್ಯೆ ಇದೆ. ಹೊಸ ಚೇಂಬರ್ ಮಾಡಿದಾಗಿಂದ್ಲೂ ಮನೆಗಳಿಗೆ ನೀರು ನುಗ್ಗೋದು ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ್ಲೂ ಇದೇ ಸಮಸ್ಯೆ ಎದುರಿಸುತ್ತಿದ್ದೇವೆ. ಚುನಾವಣೆ ವೇಳೆ ಬಂದು ಮತ ಹಾಕಿಸಿಕೊಂಡು ಹೋಗುತ್ತಾರೆ. ಆದ್ರೆ ಯಾವ ಅಧಿಕಾರಿಗಳೂ ಸಮಸ್ಯೆ ಬಗೆಹರಿಸಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.