CHANNAPATNA PROGRAM : ಇಂದು ಸೈನಿಕನ ನೇತೃತ್ವದಲ್ಲಿ ಕಾಂಗ್ರೆಸ್ ಕೃತಜ್ಞತಾ ಸಮಾವೇಶ – ಚನ್ನಪಟ್ಟಣಕ್ಕೆ ವಿಶೇಷ ಘೋಷಣೆ?

ಚನ್ನಪಟ್ಟಣ : ಬೊಂಬೆನಾಡು ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಸಿಪಿ ಯೋಗೇಶ್ವರ್ ದಿಗ್ವಿಜಯ ಸಾಧಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೃಹತ್ ಕೃತಜ್ಞತಾ ಸಮಾವೇಶ ಅಯೋಜಿಸಿದೆ.
ಚನ್ನಪಟ್ಟಣದ ಮಹದೇಶ್ವರ ದೇಗುಲದ ಬಳಿ ಬೃಹತ್ ಕಾರ್ಯಕ್ರಮ ನಡೆಯಲಿದ್ದು , ಸುಮಾರು 10 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.
ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿಕೆಶಿ , ಶಾಸಕ ಸಿಪಿವೈ ಸೇರಿದಂತೆ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ವಿರುದ್ಧ ಪ್ರಚಂಡ ಬಹುಮತಗಳಿಂದ ಗೆದ್ದಿದ್ದ ಸಿಪಿವೈ ಗೆ ಸನ್ಮಾನ ಮಾಡಲಾಗುತ್ತದೆ. ಹಾಗೆಯೇ ಬೈ ಎಲೆಕ್ಷನ್ ಗೂ ಮುನ್ನ ನೀಡಿದ್ದ ಕೆಲ ಭರವಸೆಗಳನ್ನು ಈಡೇರಿಸುವ ಸಲುವಾಗಿ ದೊಡ್ಡ ಪ್ಯಾಕೇಜ್ ಘೋಷಣೆಯಾಗುವ ಸಾಧ್ಯತೆ ಇದೆ.
ಜೆಡಿಎಸ್ ಗೆ ಟಕ್ಕರ್ ಕೊಟ್ಟು ಬೈ ಎಲೆಕ್ಷನ್ ಗೆದ್ದಿದ್ದ ಕೈ ನಾಯಕರು ಅನೇಕ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದರು. ಇದರ ಮೊದಲ ಭಾಗವಾಗಿ ಚನ್ನಪಟ್ಟಣಕ್ಕೆ ಅನೇಕ ಕೊಡುಗೆಗಳನ್ನು ಘೋಷಿಸುವ ಸಾಧ್ಯತೆ ಇದೆ.