ಸುದ್ದಿ

ಶೀಘ್ರದಲ್ಲೇ ಸಿಬಿಎಸ್​ಇ ಕ್ಲಾಸ್​ 10 ಮತ್ತು 12 ಅಂತಿಮ ಪರೀಕ್ಷೆಗಳ ವೇಳಾಪಟ್ಟಿ!

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸೆಂಟ್ರಲ್​ ಬೋರ್ಡ್​​ ಆಫ್​​ ಸೆಕೆಂಡರಿ ಎಜುಕೇಶನ್​ 10 ಮತ್ತು 12 ನೇ ತರಗತಿಯ ಅಂತಿಮ ಪರೀಕ್ಷೆಗಳನ್ನು ಏಪ್ರಿಲ್​ 26 ರಿಂದ ನಡೆಸಲು ತೀರ್ಮಾನಿಸಿದೆ. ಮುಖ್ಯ ಸಂಗತಿಯೆಂದರೆ ಪರೀಕ್ಷೆಗಳು ಆಫ್​ಲೈನ್​ ಅಲ್ಲ, ಆಯಾ ಶಾಲಾ ಕಾಲೇಜುಗಳಲ್ಲಿಯೇ ಈ ಹಿಂದಿನ ವರ್ಷಗಳ ಮಾದರಿಯಲ್ಲಿ ನಡೆಯಲಿವೆ. ಇನ್ನು ಪ್ರಶ್ನೆ ಪತ್ರಿಕೆಗಳು ಈ ಹಿಂದೆ ಮಂಡಳಿ ಪ್ರಕಟಿಸಿದ್ದ ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ಅನುಗುಣವಾಗಿಯೇ ಜರುಗಲಿವೆ ಎಂದು ತಿಳಿದುಬಂದಿದೆ.

ಸಿಬಿಎಸ್​ಇಗೆ ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿದ ಬಳಿಕ ಮತ್ತು ದೇಶದಲ್ಲಿ ಕೊರೊನಾ ಸೋಂಕಿನ ಗತಿಯನ್ನು ಗಮನದಲ್ಲಿಟ್ಟುಕೊಂಡು CBSE ಕ್ಲಾಸ್​ 10 ಮತ್ತು 12 ಅಂತಿಮ ಪರೀಕ್ಷೆಗಳನ್ನು ಏಪ್ರಿಲ್​ 26 ರಿಂದ ಶಾಲೆಗಳಲ್ಲಿಯೇ ಪ್ರಾರಂಭಿಸಿಲು ನಿರ್ಧರಿಸಲಾಗಿದೆ ಎಂದು ಸಿಬಿಎಸ್​ಇ ಎಕ್ಸಾಮಿನೇಶನ್​ ಕಂಟ್ರೋಲರ್ ಸಾನ್ಯಂ ಭಾರದ್ವಾಜ್​ ತಿಳಿಸಿದ್ದಾರೆ. ​

CBSE ಕ್ಲಾಸ್​ 10 ಮತ್ತು 12 ವಿದ್ಯಾರ್ಥಿಗಳಗೆ ಥಿಯರಿ ಪರೀಕ್ಷೆಗಳು ಏಪ್ರಿಲ್​ 26 ರಿಂದ ಆರಂಭವಾಗಲಿದೆ. ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಘೋಷಣೆ: ಬೆಂಗಳೂರು: ಏಪ್ರಿಲ್ 16 ರಿಂದ ಮೇ 6ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿರುವ ಬಗ್ಗೆ ಘೋಷಣೆ ಮಾಡಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದಿನಾಂಕ ಘೋಷಣೆ ಮಾಡಲಾಗಿದೆ. ಪ್ರಕಟಣೆಯಂತೆ ಏಪ್ರಿಲ್​ 16 ರಂದು ಗಣಿತ ವಿಷಯದ ಪರೀಕ್ಷೆ, ಏಪ್ರಿಲ್ 18 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆ ನಡೆಯಲಿದೆ. ಏಪ್ರಿಲ್ 20 ರಂದು ಇತಿಹಾಸ, ಭೌತಶಾಸ್ತ್ರ ಪರೀಕ್ಷೆ, ಏಪ್ರಿಲ್ 22 ರಂದು ತರ್ಕಶಾಸ್ತ್ರ ಪರೀಕ್ಷೆ, ಏಪ್ರಿಲ್ 23 ರಂದು ಮನಃಶಾಸ್ತ್ರ, ಕೆಮಿಸ್ಟ್ರಿ ಪರೀಕ್ಷೆ ನಡೆಯಲಿದೆ ಎಂದು ಹೇಳಲಾಗಿದೆ.

ಏಪ್ರಿಲ್ 25 ರಂದು ಅರ್ಥಶಾಸ್ತ್ರ ಪರೀಕ್ಷೆ, ಏಪ್ರಿಲ್ 26 ರಂದು ಹಿಂದಿ ಭಾಷಾ ಪರೀಕ್ಷೆ, ಏಪ್ರಿಲ್​​ 28 ರಂದು ಕನ್ನಡ ಭಾಷಾ ಪರೀಕ್ಷೆ, ಏಪ್ರಿಲ್​​ 30 ರಂದು ಸಮಾಜಶಾಸ್ತ್ರ, ಕಂಪ್ಯೂಟರ್​​ ಸೈನ್ಸ್​ ಪರೀಕ್ಷೆ ನಡೆಯಲಿದೆ. ಮೇ 2 ರಂದು ಭೂಗೋಳ ಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ, ಮೇ 4 ರಂದು ಇಂಗ್ಲಿಷ್​​ ಭಾಷಾ ಪರೀಕ್ಷೆ, ಮೇ 6 ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ ಪರೀಕ್ಷೆ ನಡೆಯಲಿದೆ. ಏಪ್ರಿಲ್ 16 ರಿಂದ ಮೇ 6ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ವೇಳಾಪಟ್ಟಿ ಪ್ರಕಟ ಮಾಡಲಾಗಿದೆ.

ಎಸ್ಎಸ್​ಎಲ್​ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಜ.6 ಸಂಜೆ ಪ್ರಕಟಿಸಿತ್ತು. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಮಾರ್ಚ್​​ 28ರಿಂದ ಏಪ್ರಿಲ್​ 11ರವರೆಗೆ ಪರೀಕ್ಷೆ ನಡೆಯಲಿದೆ. ಜನವರಿ 14ರೊಳಗೆ ಪೋಷಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಮಾರ್ಚ್​ 28ರಂದು ಪ್ರಥಮ ಭಾಷೆ, ಮಾರ್ಚ್ 30ರಂದು ದ್ವಿತೀಯ ಭಾಷೆ, ಅರ್ಥಶಾಸ್ತ್ರ, ಕೋರ್ ಸಬ್ಜೆಕ್ಟ್, ಏಪ್ರಿಲ್ 4 ಗಣಿತ, ಸಮಾಜಶಾಸ್ತ್ರ, ಏಪ್ರಿಲ್ 6 ಸಮಾಜ ವಿಜ್ಞಾನ, ಏಪ್ರಿಲ್ 6 ತೃತೀಯ ಭಾಷೆ, ಏಪ್ರಿಲ್ 11 ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ / ಹಿಂದೂಸ್ತಾನಿ ಸಂಗೀತದ ಪರೀಕ್ಷೆಗಳು ನಡೆಯಲಿವೆ.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿಷಯಕ್ಕೂ ಪ್ರಶ್ನಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ನೀಡಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ. ವೇಳಾಪಟ್ಟಿಗೆ ಅಭ್ಯರ್ಥಿಗಳು / ಪೋಷಕರು ಆಕ್ಷೇಪಣೆ ಸಲ್ಲಿಸಲು ಜನವರಿ 6- 14 ರವರೆಗೆ ಅವಕಾಶ ಇದೆ. ಆಕ್ಷೇಪಣೆಗಳಿದ್ದಲ್ಲಿ ಮಂಡಳಿಯ ವೆಬ್​ಸೈಟ್​ನಲ್ಲಿ ಸಲ್ಲಿಸಬಹುದು.

Related Articles

Leave a Reply

Your email address will not be published. Required fields are marked *

Back to top button