ಬೀದಿ ನಾಯಿಗಳ ದಾಳಿಗೆ ಮಹಿಳೆ ಸಾವು ನಗರಸಭೆ ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕರ ಆಕ್ರೋಶ;

ರಾಯಚೂರು: ನಗರದ ವಾರ್ಡ್ ನಂಬರ್ 23ರ ಮಡ್ಡಿಪೇಟೆ ಬಡಾವಣೆಯಲ್ಲಿ ಬೀದಿ ನಾಯಿ ಗಳ ದಾಳಿಯಿಂದ ತೀವ್ರ ಗಾಯ ಗೊಂಡು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಕೊನೆಗೆ ಸಾವನ್ನಪ್ಪಿದ್ದಾಳೆ.
ಮಡ್ಡಿಪೇಟೆಯ ಲಕ್ಷ್ಮಣಸ್ವಾಮಿ ಮಠದ ಹಿಂದೆ ವಾಸವಾಗಿದ್ದ ಮಹಾದೇವಿ ಮುನಿ ಯಪ್ಪ ಡಿ.7ರಂದು ಮನೆಯ ಮುಂದೆ ನಿಂತಾಗ ಬೀದಿ ನಾಯಿಗಳ ದಂಡು ದಾಳಿ ಮಾಡಿವೆ. ತಕ್ಷಣ ಕೆಳಗೆ ಬಿದ್ದು ತಲೆಗೆ ಗಂಭೀ ರ ಪೆಟ್ಟು ಬಿದ್ದಿತು. ನಂತರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಜೆಯವರೆ ಗೂ ಯುವತಿ ಎಚ್ಚರಿಕೆ ಆಗದ ಕಾರಣ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತ ಹೆಪ್ಪು ಗಟ್ಟಿದೆ ಕೋಮ ಸ್ಥಿತಿಗೆ ಹೋಗಿದ್ದಳು. ಹೆಚ್ಚಿನ ಚಿಕಿತ್ಸೆ ಗಾಗಿ ಬಳ್ಳಾರಿ ಆಸ್ಪತ್ರೆಗೆ ರವಾನಿಸಿದ್ದರು.
ಬಳ್ಳಾರಿಯಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರೆಫರ್ ಮಾಡಿದ್ದಾರೆ. ಆದರೆ ತೀವ್ರ ಬಡತನವಿರುವ ಕಾರಣ ಪುನಃ ರಾಯಚೂರು ಜಿಲ್ಲಾಸ್ಪತ್ರೆಗೆ ಕರೆತರಲಾಯಿತು, ಎಂದು ಪಾಲಕರು ತಿಳಿಸಿದ್ದಾರೆ. ತನ್ನದಲ್ಲದ ತಪ್ಪಿಗೆ ಬೀದಿ ನಾಯಿಗಳ ದಾಳಿಗೆ ಯುವತಿ ಸಾವನ್ನಪ್ಪಿದ್ದು, ನಗರಸಭೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ಪಾಲಕರು ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಹಿಂದೆಯೂ ಮೂವರು ಮಕ್ಕಳ ಬೀದಿನಾಯಿಗಳ ದಾಳಿಗೆ ಗುರಿಯಾಗಿ ಚಿಕಿತ್ಸೆ ಪಡೆದಿದ್ದರು.
ಬಹುತೇಕ ಎಲ್ಲ ಕಡೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನ ಸಾಮಾನ್ಯರು ನಗರದಲ್ಲಿ ಒಬ್ಬಂಟಿಯಾಗಿ ಓಡಾಡುವುದು ಕಷ್ಟವಾಗಿದೆ.
ವರದಿ: ವಿಶ್ವನಾಥ್ ಸಾಹುಕಾರ್ tv8newskannada ರಾಯಚೂರು