ಅಮ್ಮನೇ ನನ್ನ ಬಾಯ್ಫ್ರೆಂಡ್ನ ಮೋಹಿಸಿದ್ದಳು!
ಆನೇಕಲ್: ಹೊಸೂರು ಮುಖ್ಯ ರಸ್ತೆ ಹೊಸರೋಡ್ ಜಂಕ್ಷನ್ ಬಳಿ ನಡೆದಿದ್ದ ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ (Archana Reddy Murder case) ಸ್ಪೋಟಕ ಟ್ವಿಸ್ಟ್ (Twist) ದೊರೆತಿದೆ. ಈಗಾಗಲೇ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಅರ್ಚನಾರೆಡ್ಡಿ ಪುತ್ರಿ ಯುವಿಕಾ ರೆಡ್ಡಿ (Daughter Yuvika Reddy) ಸ್ಪೋಟಕ ಟ್ವಿಸ್ಟ್ ನೀಡಿದ್ದಾಳೆ. ಈಗಾಗಲೇ ಅರ್ಚನಾರೆಡ್ಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅರ್ಚನಾರೆಡ್ಡಿ ಎರಡನೇ ಗಂಡ ನವೀನ, ಮಗಳು ಯುವಿಕಾ ರೆಡ್ಡಿ ಸೇರಿದಂತೆ ಏಳು ಮಂದಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ. ಇನ್ನೂ ಪ್ರಕರಣದ ಪ್ರಮುಖ ಆರೋಪಿ ಯುವಿಕಾ ರೆಡ್ಡಿ ಪೊಲೀಸರ ವಿಚಾರಣೆ ವೇಳೆ ಸ್ಪೋಟಕ ವಿಚಾರಗಳನ್ನು ಬಾಯಿ ಬಿಟ್ಟಿದ್ದಾಳೆ. ನನ್ನ ತಾಯಿ ನನಗೆ ಮೋಸ ಮಾಡಿದ್ದಾಳೆ. ನನ್ನ ಪ್ರೀತಿಗೆ ಪದೇ ಪದೇ ಅಡ್ಡಿಪಡಿಸುತ್ತಿದ್ದಳು. ನಮ್ಮ ತಾಯಿಗೂ ಮೊದಲು ನವೀನ ನನಗೆ ಪರಿಚಯವಿದ್ದ. ಜಿಮ್ ನಲ್ಲಿ ನವೀನ ಟ್ರೈನರ್ ಆಗಿದ್ದು, ತುಂಬಾ ಚೆನ್ನಾಗಿ ಜಿಮ್ ಟ್ರೈನ್ ಮಾಡ್ತಿದ್ದ ಎಂದು ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.
ತಾಯಿ-ಮಗಳಿಬ್ಬರ ಜೊತೆಗೂ ಲವ್ವಿಡವ್ವಿ..!
ಯುವಿಕಾ-ನವೀನ ಇಬ್ಬರ ಮೊಬೈಲ್ ನಂಬರ್ ಎಕ್ಸ್ಚೇಂಜ್ ಆಗಿತ್ತು. ಪೋನ್ ಕಾಲ್, ಚಾಟಿಂಗ್ ಶುರುವಿಟ್ಟುಕೊಂಡಿದ್ದರು. ಕೋಟಿ ಕೋಟಿ ಆಸ್ತಿ ಒಡತಿ ಯುವಿಕಾಳನ್ನು ಬಲೆಗೆ ಹಾಕಿಕೊಳ್ಳಲು ನವೀನ ಇನ್ನಿಲ್ಲದ ಕಸರತ್ತು ನಡೆಸಿದ್ದನು. ಯುವಿಕಾ ಸಹ ನವೀನನ ಜೊತೆ ತುಂಬಾ ಕ್ಲೋಸ್ ಆಗಿದ್ದಳು. ಬಳಿಕ ನವೀನನನ್ನು ತಾಯಿ ಅರ್ಚನಾರೆಡ್ಡಿಗೆ ಯುವಿಕಾ ಪರಿಚಯಿಸಿದ್ದಳು. ಮೊದಲೇ ಅವನ್ಬಿಟ್ ಇವನ್ಬಿಟ್ ಅವನ್ಯಾರು ಅಂತಿದ್ದಾ ಅರ್ಚನಾರೆಡ್ಡಿ, ನವೀನ ಕಟ್ಟುಮಸ್ತಾದ ದೇಹ ಕಂಡು ಕ್ಲೀನ್ ಬೋಲ್ಡ್ ಆಗಿದ್ದಳು. ಮಗಳಿಗೆ ಗಾಳ ಹಾಕಿದ್ದ ನವೀನನಿಗೆ ಅರ್ಚನಾ ರೆಡ್ಡಿ ಅಫರ್ ಬೋನಸ್ ಸಿಕ್ಕಂತಾಗಿತ್ತು. ನೋಡಲು ಥೇಟ್ ಹಿರೋಯಿನ್ ನಂತಿದ್ದ ಅರ್ಚನಾ ರೆಡ್ಡಿ ಮೊದಲೇ ಕೋಟಿ ಕೋಟಿ ಆಸ್ತಿ ಒಡತಿಯಾಗಿದ್ದಳು. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ ಅನ್ನೋ ಹಾಗೆ, ಅಮ್ಮ ಮಗಳ ಜೊತೆ ಒಬ್ಬರಿಗೊಬ್ಬರಿಗೆ ಗೊತ್ತಿಲ್ಲದಂತೆ ನವೀನ ಹಲ್ ಚಲ್ ಶುರುವಿಟ್ಟುಕೊಂಡಿದ್ದ ಎನ್ನಲಾಗಿದೆ.
ಐಷಾರಾಮಿ ಜೀವನ ತನ್ನದಾಗಿಸಿಕೊಂಡಿದ್ದ ನವೀನ
ಕಿಲಾಡಿ ನವೀನ ಮಾತ್ರ ಅಮ್ಮನ ಜೋತೆ ಅಫೇರ್ ಮಗಳ ಜೊತೆ ಲವ್ ಕಹಾನಿ ಮುಂದುವರಿಸಿದ್ದು, ಒಂದೂವರೆ ವರ್ಷ ಕಾಲ ಅಮ್ಮ-ಮಗಳ ಜೊತೆ ಕಣ್ಣಾಮುಚ್ಚಾಲೆ ಆಟವಾಡಿದ್ದಾನೆ. ಜೊತೆಗೆ ಕೋಟಿ ಕೋಟಿ ಆಸ್ತಿ ಲಪಟಾಯಿಸುವ ಸಂಚು ಮಾಡಿದ್ದ ಎನ್ನಲಾಗಿದೆ. ಅಂದಹಾಗೆ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಕಾಂ ಪ್ರಥಮ ವರ್ಷ ಓದುತ್ತಿದ್ದ ಯುವಿಕಾಗೆ ಫ್ಯಾಷನ್ ಲೋಕದ ಹುಚ್ಚಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ನವೀನ ಆಕೆಯನ್ನು ಮಾಡೆಲ್ ಮಾಡುವುದಾಗಿ ಬಣ್ಣ ಬಣ್ಣದ ಕಥೆ ಕಟ್ಟಿ ಕಾಗೆ ಹಾರಿಸಿ ಬಲೆಗೆ ಬೀಳಿಸಿಕೊಂಡಿದ್ದಾನೆ. ಅಮ್ಮ, ಮಗಳು ಬಲೆಗೆ ಬಿದ್ದಿದ್ದೇ ನವೀನನ ಲೈಫ್ ಸ್ಟೈಲ್ ಚೇಂಜ್ ಆಗಿತ್ತು. ಬೈಕ್ ಹೋಗಿ ಕಾರು ಬಂತು, ಬಣ್ಣ ಬಣ್ಣದ ಬಟ್ಟೆಗಳು, ಪದೇ ಪದೇ ಟೂರ್, ಪಾರ್ಟಿ, ಪಬ್ ಎನ್ನುವಂತಾಗಿತ್ತು. ಕೈ ತುಂಬಾ ಹಣ, ಮೈ ತುಂಬಾ ಒಡವೆ, ಬಿಂದಾಸ್ ಜೀವನ, ಒಟ್ನಲ್ಲಿ ಒಬ್ಬ ಕಾಮನ್ ಜಿಮ್ ಟ್ರೈನರ್ ಕೆಲವೇ ದಿನಗಳಲ್ಲಿ ಶ್ರೀಮಂತನಾಗಿದ್ದ ಬದಲಾಗಿದ್ದ.
ಮಗಳಿಗೆ ತನ್ನ ಸಂಬಂಧದ ಬಗ್ಗೆ ಬಾಯ್ಬಿಟ್ಟ ತಾಯಿ
ಆದ್ರೆ ನವೀನ ಕಳ್ಳಾಟ ಹೆಚ್ಚು ದಿನ ಉಳಿಯಲಿಲ್ಲ. ಮೂರು ತಿಂಗಳ ಹಿಂದೆ ನವೀನನ ನವರಂಗಿ ಆಟ ಅರ್ಚನಾಳಿಗೆ ತಿಳಿದುಬಿಡುತ್ತೆ. ವಿಚಾರ ತಿಳಿಯುತ್ತಿದ್ದಂತೆ ಗರಂ ಆದ ಆರ್ಚನಾ ಮಗಳ ತಂಟೆಗೆ ಹೋಗದಂತೆ ನವೀನನಿಗೆ ವಾರ್ನಿಂಗ್ ನೀಡಿದ್ದು, ಮಾತ್ರವಲ್ಲದೆ ತನ್ನ ಮತ್ತು ನವೀನ ಸಂಬಂಧದ ಬಗ್ಗೆ ಯುವಿಕಳಿಗೆ ತಿಳಿಸಿ ಅಂತರ ಕಾಯ್ದಕೊಳ್ಳುತ್ತಾಳೆ. ಆದ್ರೆ ನವೀನ ಮಾತ್ರ ನನ್ನದೇನು ತಪ್ಪಿಲ್ಲ ಎಲ್ಲಾ ನಿಮ್ಮ ಆಮ್ಮನದ್ದೇ ತಪ್ಪು ಎಂದು ಮೈಂಡ್ ವಾಷ್ ಮಾಡಿ ಯುವಿಕಾಳನ್ನು ಅಮ್ಮನ ವಿರುದ್ಧ ಎತ್ತಿಕಟ್ಟುತ್ತಾನೆ. ನಾನು ಮೊದಲು ನಿನಗೆ ಬಾಯ್ ಪ್ರೇಂಡ್, ನೀನು ನಿಮ್ಮ ಅಮ್ಮನಿಗಿಂತ ಮೊದಲು ನನ್ನನ್ನು ಇಷ್ಟಪಟ್ಟಿರುವೇ ಎಂದು ಮೈಂಡ್ ವಾಷ್ ಮಾಡುತ್ತಾನೆ. ಮಾತ್ರವಲ್ಲದೆ ನಿಮ್ಮ ಅಮ್ಮ ನಿನ್ನ ಕನಸು ನನಸಾಗುವುದಿಲ್ಲ. ಆದ್ರೆ ನಾನು ಮಾಡೆಲ್ ಲೋಕದಲ್ಲಿ ನಿನ್ನ ರಾಣಿ ಮಾಡುವುದಾಗಿ ನಂಬಿಸಿದ್ದ ಎನ್ನಲಾಗಿದೆ