ರಾಜ್ಯಸುದ್ದಿ

24 ಲಕ್ಷ ವೆಚ್ಚದಲ್ಲಿ ಕಟ್ಟಡ ನವೀಕರಣ ಹಾಗೂ ಹೊಸ ಸಭಾಂಗಣ ಉದ್ಘಾಟನೆ

ದೇವನಹಳ್ಳಿ : ತಾಲೂಕಿನ ಬೊಮ್ಮವಾರ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಟ್ಟಡ, ಗೋದಾಮು ನವೀಕರಣ, ಹಾಗೂ ನೂತನವಾಗಿ ನಿರ್ಮಿಸಿರುವ ಸಭಾಂಗಣವನ್ನು ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಬೊಮ್ಮವಾರ ಸಂಘದ ಕಟ್ಟಡ ತುಂಬಾ ಹಳೆಯದಾಗಿದ್ದು ಕಟ್ಟಡವನ್ನು ನವೀಕರಣ ಮಾಡಿದ್ದಾರೆ ಹಾಗೂ ಸದಸ್ಯರ ಸಬಾಂಗಣ ಸೇರಿದಂತೆ ಗೋದಾಮು ಸಹ ನವೀಕರಿಸಿದ್ದಾರೆ ರೈತರ ಅನುಕೂಲಕ್ಕಾಗಿ ಸಾವಕನಹಳ್ಳಿ ಬಳಿ ನೂತನ ರಸ ಗೊಬ್ಬರ ಮಳಿಗೆ ಪ್ರಾರಂಭಿಸಿದ್ದು ಸುತ್ತಮುತ್ತಲ ರೈತರು ಹತ್ತಿರದಲ್ಲೇ ರಸಗೊಬ್ಬರವನ್ನು ಖರೀದಿ ಮಾಡಲು ಅನುಕೂಲ ಮಾಡಿಕೊಟ್ಟಿದ್ದು ರೈತರು ಅದರ ಪ್ರಯೋಜನ ಪಡೆದುಕೊಳ್ಳಬೇಕು.

ಇದೆ ವೇಳೆ ಮಾಜಿ ಶಾಸಕ ಜಿ.ಚಂದ್ರಣ್ಣ, ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ,ಬಯಪ್ಪ ಮಾಜಿ ಅಧ್ಯಕ್ಷ ಅಶ್ವಥ್‌ನಾರಾಯಣ್, ಟಿಎಪಿಸಿಎಂ ಅಧ್ಯಕ್ಷ ಮುನಿರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹನುಮಪ್ಪ, ಎಪಿಎಂ.ಸಿ ಮಾಜಿ ಅಧ್ಯಕ್ಷ ಮಂಜುನಾಥ್, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಮಹೇಶ್, ವಿಜಯ್‌ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ತಾಲೂಕು ಅಧ್ಯಕ್ಷ ಸುಂದರೇಶ್, ಅಭಿ, ರವಿ ಬೊಮ್ಮವಾರ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷರಾದ ಪುಷ್ಪ, ಸದಸ್ಯರಾದ ಎನ್.ರಾಮಮೂರ್ತಿ, ಎಸ್.ನಾಗೇಶ್, ಟಿ.ರವಿ, ಎನ್.ನಾರಾಯಣಸ್ವಾಮಿ, ವಿ.ರಾಮಾಂಜನಪ್ಪ, ವಿ.ರಮೇಶ್, ಎನ್.ಮುನಿಯಪ್ಪ, ನವೀನ ಕುಮಾರ್.ಬಿ.ಆರ್, ಮುನಿಕೃಷ್ಣ, ಅಂಬಿಕ, ಮುನಿಆಂಜಿನಪ್ಪ, ಕಾರ್ಯನಿರ್ವಾಹಣಾಧಿಕಾರಿ ಚಂದ್ರು, ಶಿಲ್ಪ, ಸುರೇಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button