ಕ್ರೈಂ

ಬ್ಯಾಡರಹಳ್ಳಿಯ ಒಂದೇ ಕುಟಂಬದ ಐವರ ಸಾವು ಪ್ರಕರಣ: ಮಗುವನ್ನು ತಾಯಿಯೇ ಹತ್ಯೆಗೈದಿರೋದು ದೃಢ

ಸಿಲಿಕಾನ್ ಸಿಟಿಯ ಬ್ಯಾಡರಹಳ್ಳಿಯ ಒಂದೇ ಕುಟಂಬದ ಐವರು ಸಾವು ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, 9 ತಿಂಗಳ ಮಗುವನ್ನು ತಾಯಿಯೇ ಹತ್ಯೆಗೈದಿರೋದಾಗಿ ವರದಿಯಿಂದ ದೃಢಪಟ್ಟಿದೆ. ಇನ್ನು ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ ಐವರು ಸಾವು ಪ್ರಕರಣ ಸಂಬಂಧ ಮೃತದೇಹಗಳ ವೈದ್ಯಕೀಯ ಪರೀಕ್ಷೆಯ ವರದಿ, ಪೊಲೀಸರ ಕೈಸೇರಿದ್ದು, ಇದರಲ್ಲಿ ತಾಯಿ ಸಿಂಧೂರಾಣಿಯೇ 9 ತಿಂಗಳ ಮಗುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರೋದಾಗಿ ತಿಳಿದು ಬಂದಿದೆ. ಅದಲ್ಲದೆ ಮಗುವಿನ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಹತ್ಯೆ ಮಾಡಿ, ಮಗು ಸಾವನ್ನಪ್ಪಿದ ನಂತರ ತಾಯಿ ಸಿಂಧೂರಾಣಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದಾಗಿ ತಿಳಿದು ಬಂದಿದೆ. ಈ ಮೂಲಕ ಒಂಭತ್ತು ತಿಂಗಳ ಹಸುಗೂಸನ್ನೇ ತಾಯಿ ಹತ್ಯೆಗೈದಿರೋದು ಮೆಡಿಕಲ್ ವರದಿಯಿಂದ ಸಾಭೀತಾಗಿದೆ.

Related Articles

Leave a Reply

Your email address will not be published. Required fields are marked *

Back to top button