ದೀಪಾವಳಿ(Deepavali)) ಹಬ್ಬವೆಂದರೆ ದೀಪಗಳು, ಸಿಹಿ ತಿಂಡಿಗಳು, ಉಡುಗೆ ತೊಡುಗೆಗಳು. ಒಟ್ಟಿನಲ್ಲಿ ದೀಪಾವಳಿ ಎಂದರೆ ಸಂಭ್ರಮ. ಸಾಮಾನ್ಯವಾಗಿ ಲಕ್ಮೀಪೂಜೆ, ಅಂಗಡಿಗಳ ಪೂಜೆಗಳಲ್ಲಿ ಸೋನ್ ಪಾಪ್ಡಿ, ಮೋತಿಚೂರ್ ಲಡ್ಡೂ ಮತ್ತು ಕಾಜು ಕಟ್ಲಿಯಂತಹ ಸಿಹಿತಿಂಡಿಗಳನ್ನು ನೀಡುತ್ತಾರೆ. ಆದರೆ ಈ ಬಾರಿ ಬೆಂಗಳೂರಿಗರು(Bengaluru) ಬೇರೆ ರೀತಿಯ ಉಡುಗೊರೆಗಳ ಆಯ್ಕೆಗೆ ಒಲವು ತೋರಿದ್ದಾರೆ.ಹೌದು ಈ ವರ್ಷದ ದೀಪಾವಳಿಗೆ ಲಾಡು, ಬಾದುಷಾ, ಸೋನ್ ಪಾಪ್ಡಿ, ಬರ್ಫಿಗೆ ಪರ್ಯಾಯವಾಗಿ ಮಿಠಾಯಿ ಕೇಕ್‍ಗಳು, ಜಿಲೇಬಿ-ಸುವಾಸನೆಯ ಮಾರ್ಷ್‌ಮ್ಯಾಲೋ, ವಿಶೇಷ ದೀಪಾವಳಿ ಕಪ್‍ಕೇಕ್‍ಗಳಿಂದ ಹಿಡಿದು ವೇಗನ್ ಸಿಹಿತಿಂಡಿಗಳು ಉಡುಗೊರೆಯಾಗಿ ಆಯ್ಕೆಯಾಗಿರುವುದು ವಿಶೇಷ.
ಗೃಹಿಣಿಯಾದ ಸಾನ್ವಿ ಜೈನ್, ಕುಟುಂಬ ಮತ್ತು ಸ್ನೇಹಿತರಿಗೆ ಎರಡು ರೀತಿಯ ಉಡುಗೊರೆ ನೀಡಲು ಯೋಚಿಸಿದ್ದಾರೆ. ಒಂದು ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಇನ್ನೊಂದು ವಿಶೇಷ ರುಚಿಯ ಕಪ್‍ಕೇಕ್‍ಗಳು ಹಾಗೂ ಗ್ರಾನೋಲಾ ಹ್ಯಾಂಪರ್‌ಗಳು.
ನನ್ನ ಉಡುಗೊರೆಗಳು ಸ್ಮರಣೀಯ, ಮನೋರಂಜನಾತ್ಮಕವಾದುದು ಮತ್ತು ಇತರ ಉಡುಗೊರೆಗಳು ಬಾಕ್ಸ್‌ಗಳಲ್ಲಿ ಕೊನೆಯಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ” ಎಂದು ಇಂದಿರಾನಗರ ನಿವಾಸಿ ಹೇಳಿದರು.