ಸಹೋದ್ಯೋಗಿಯಿಂದ ಅತ್ಯಾಚಾರ ಮಾಡಿಸಿದ ಪತಿ! ಕಾರಣ ಬೆಚ್ಚಿಬೀಳಿಸುವಂತಿದೆ..
ತನ್ನ ಪತ್ನಿ ತನ್ನ ಮುಂದೆಯೇ ಬೇರೆಯವರೊಂದಿಗೆ ರಾತ್ರಿ ಕಳೆಯುತ್ತಿರುವುದನ್ನು ಪತಿಯೊಬ್ಬ ತನ್ನ ಕನಸಿನಲ್ಲಿ ನೋಡುತ್ತಾನೆ. ಆತ ತನ್ನ ಈ ಕಲ್ಪನೆಯನ್ನು ಪೂರೈಸಲು, ತನ್ನ ಆಫೀಸ್ ಮೇಟ್ ನನ್ನು ಬಳಸಿಕೊಳ್ಳುತ್ತಾನೆ ಮತ್ತು ತನ್ನ ಪತ್ನಿಯ ಮೇಲೆ ಅತ್ಯಾಚಾರ ಮಾಡಿಸುವ ಪ್ರಯತ್ನ ಮಾಡುತ್ತಾನೆ. ಈ ಅಪರಾಧದಲ್ಲಿ ಆತನ ಸ್ನೇಹಿತನಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗಿದೆ.
ಅತ್ಯಾಚಾರಕ್ಕಾಗಿ 3 ವರ್ಷಗಳ ಜೈಲು ಶಿಕ್ಷೆ
ಡೈಲಿ ಸ್ಟಾರ್‌ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ತನ್ನ ಉದ್ಯೋಗಿಯ ಹೆಂಡತಿಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ವ್ಯಕ್ತಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರಲ್ಲಿ ಅಚ್ಚರಿಯ ಸಂಗತಿ ಎಂದರೆ ಆಕೆಯ ಪತಿಯೇ ಆಕೆಯ ಮೇಲೆ ಅತ್ಯಾಚಾರ ಎಸಗಲು ಕರೆಯಿಸಿದ್ದ ಎಂಬುದು. ಈ ವಿಷಯ (Weired News) ಸಿಂಗಾಪುರದ ಸುಪ್ರೀಂ ಕೋರ್ಟ್‌ನಲ್ಲಿ ಈ ವಾರ ಕೇಳಿಬಂದಿದೆ. ಈ ಅಪರಾಧದ ಸ್ವರೂಪ ಗಮನಿಸಿದರೆ, ಯಾವುದೇ ಆರೋಪಿಗಳ ಹೆಸರು ಹೊರಬಂದಿಲ್ಲ.
ತನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಲು ಸಹೋದ್ಯೋಗಿಯನ್ನು ಒಪ್ಪಿಸಿದ
ಈ ಘಟನೆಯು 2017 ರಲ್ಲಿ ನಡೆದಿದ್ದು, 47 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಅತ್ಯಾಚಾರ ಮಾಡಲು ತನ್ನ ಕಚೇರಿಯ ಸಹೋದ್ಯೋಗಿಯೊಬ್ಬನ ಮನವೊಲಿಸಿದ್ದಾನೆ ಮತ್ತು ಆತನನ್ನು ತನ್ನ ಮನೆಗೆ ಆಹ್ವಾನಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಳಿಕ ಪತ್ನಿಗೆ ಮತ್ತೇರಿಸುವ ಪದಾರ್ಥ ನೀಡಿ, ಕಣ್ಣಿಗೆ ಬಟ್ಟೆ ಕಟ್ಟಿದ್ದಾನೆ
ಮನೆಯಲ್ಲಿ ಪತ್ನಿಗೆ ಮತ್ತೆರಿಸಲು ಆತ ಮಾದಕ ದ್ರವ್ಯ ಹಾಗೂ ಮದ್ಯ ನೀಡಿದ್ದಾನೆ. ಆಕೆಯ ಕಣ್ಣಿಗೆ ಪಟ್ಟಿ ಕೂಡ ಕಟ್ಟಿದ್ದಾನೆ. ಬಳಿಕ ಅವನ ಕಚೇರಿ ಸಹೋದ್ಯೋಗಿ ಪತ್ನಿಯ ಮೇಲೆ ಅತ್ಯಾಚಾರವೆಸಗಿದಂತೆ ಆಡಿ, ದೈಹಿಕವಾಗಿ ಕೇವಲ ಇಂಟಿಮೆಟ್ ಆಗಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಪ್ರಕರಣದ ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಪ್ರಕರಣ ನಡೆಯುತ್ತಿದ್ದ ವೇಳೆ ಮಹಿಳೆಯ ಮೂವರು ಮಕ್ಕಳು ಮತ್ತು ಆಕೆಯ ಮನೆ ಕೆಲಸದಾಳು ಅದೇ ಮನೆಯಲ್ಲಿನ ಮೂರು ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದರು ಎನ್ನಲಾಗಿದೆ.
ಈಗ ಸಂಪೂರ್ಣ ಸತ್ಯ ಬಯಲಿಗೆ ಬಂದಿದೆ
ಆತನ ಪತ್ನಿಗೆ ಪ್ರಜ್ಞೆ ಬಂದಾಗ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂದರ್ಭದಲ್ಲಿ ಪತಿ ತನ್ನ ಪತ್ನಿಯ ಮುಂದೆ ಸತ್ಯ ಒಪ್ಪಿಕೊಳ್ಳದ ಕಾರಣ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆತನ ಸ್ನೇಹಿತನಿಗೆ ಮೂರು ವರ್ಷ ಶಿಕ್ಷೆಯಾಗಿದೆ. ಆ ರಾತ್ರಿ ನಿಜವಾಗಿ ನಡೆದಿದ್ದನ್ನು ಇದೀಗ ಪತಿ ಒಪ್ಪಿಕೊಂಡಿದ್ದಾನೆ.