ಇತ್ತೀಚಿನ ಸುದ್ದಿ

ರಸ್ತೆ ನಿರ್ಮಾಣಕ್ಕೆ : ಅಕ್ರಮ ಮಣ್ಣು ಸಾಗಾಟ, ದಂಡ

ಯಳಂದೂರು : ತಾಲೂಕಿನ ವಡಗೆರೆ ಗ್ರಾಮದ ಸಮೀಪದ ಖಾಸಗಿ ವ್ಯಕ್ತಿಗೆ ಸೇರಿದ ಜಮೀನಿನಲ್ಲಿ ಅಕ್ರಮ ಮಣ್ಣು ಸಾಗಣೆ

ಖಚಿತ ಮಾಹಿತಿ ಅರಿತು ಸ್ಥಳಕ್ಕೆ ಅಧಿಕಾರಿಗಳ ದಾಳಿ

ಅನ್ನಪೂರ್ಣೇಶ್ವರಿ ಕನ್ಶಟ್ರಕ್ಷನ್ ಕಂಪನಿಗೆ ಸೇರಿದ ಟಿಪ್ಪರ್

ಕಂಪನಿಗೆ 35 ಸಾವಿರ ರೂ ದಂ ಹಾಕಿದ ಅಧಿಕಾರಿಗಳು

ಯಳಂದೂರು ತಾಲೂಕಿನ ವಡಗೆರೆ ಸಮೀಪದ ಗೌಡಹಳ್ಳಿ ಎಲ್ಲೆಗೆ ಸೇರಿದ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಿಂದ ಯಳಂದೂರಿನಿಂದ ಬಿಳಿಗಿರಿರಂಗನಬೆಟ್ಟದ ರಸ್ತೆ ಕಾಮಗಾರಿಗೆ ಹಾಕಲು ಶ್ರೀ ಅನ್ನಪೂರ್ಣೇಶ್ವರಿ ಕನ್ನಟಕ್ಷನ್‌ಗೆ ಸೇರಿದ ಟಿಪ್ಪರ್ (ಕೆ.ಎ.09, ಸಿ. 6187) ನಲ್ಲಿ ಅಕ್ರಮವಾಗಿ ಗ್ರಾವೆಲ್ ಮಣ್ಣನ್ನು ಸಾಗಿಸುತ್ತಿದ್ದ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಧಾಳಿ ನಡೆಸಿ ದಂಡ ವಿಧಿಸಿರುವ ಘಟನೆ ಜರುಗಿದೆ.

ವಡಗೆರೆ ಗ್ರಾಮದ ಗೌಡಹಳ್ಳಿ ಎಲ್ಲೆಗೆ – ಸೇರಿದ ಸರ್ವೇನಂ, 133 ಕ್ಕೆ ಸೇರಿದ ಖಾಸಗಿ – ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಎಕ್ಸವೇಟರ್ ಮೂಲಕ ಟಿಪ್ಪರ್‌ಗಳಲ್ಲಿ ಮಣ್ಣು ತುಂಬಲಾಗುತ್ತಿತ್ತು. ಈ ಮಣ್ಣನ್ನು ಯಳಂದೂರು ಪಟ್ಟಣದಿಂದ ಬಿಳಿಗಿರಿರಂಗನಬೆಟ್ಟದ ಚೆಕ್ ಪೋಸ್ಟ್ ರಸ್ತೆ ಕಾಮಗಾರಿಯನ್ನು ಮಾಡಲು ಶ್ರೀ ಅನ್ನಪೂರ್ಣೇಶ್ವರಿ ಕನ್ನಟ್ರಕ್ಷನ್‌ ಟಿಪ್ಟರ್‌ಗಳಲ್ಲಿ ತುಂಬಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿ ಡಾ. ಮಾಲತಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಡಗೆರೆ ಬಿದ್ವಾಂಜನೇಯ ದೇಗುಲದ ಬಳಿ ಬರುತ್ತಿದ್ದ ಟಿಪ್ಪರ್ ನ್ನು ವಿಚಾರಿಸಿದಾಗ ಇದಕ್ಕೆ ಇಲಾಖೆಯಿಂದ ಪೂರ್ವಾನುಮತಿ ಪಡೆದುಕೊಂಡಿಲ್ಲ ಎಂಬ ಮಾಹಿತಿ ಸಿಕ್ಕ ಮೇಲೆ 15 ಮೆಟ್ರಿಕ್ ಟನ್ ತೂಕವಿದ್ದ ಈ ಟಿಪ್ಪರ್‌ಗೆ 35.300 ರೂ. ದಂಡವನ್ನು ವಿಧಿಸಲಾಯಿತು. ಈ ಸಂದರ್ಭದಲ್ಲಿ ಭೂ ವಿಜ್ಞಾನಿ ಡಾ. ಮಾಲತಿ ಮಾಹಿತಿ ನೀಡಿ. ನಮ್ಮ ಇಲಾಖೆಯಿಂದ ಮಣ್ಣನ್ನು ಸಾಗಾಟ ಮಾಡಬೇಕಾದರೆ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕು. ಮೆಟ್ರಿಕ್ ಟನ್‌ ಗೆ ನಿಗಧಿತ ರಾಯಲ್ಲಿ ಹಣವನ್ನು ಕಟ್ಟಬೇಕು. ಆದರೆ ಇವರು ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ. ಹಾಗಾಗಿ ಇದಕ್ಕೆ ದಂಡ ಹಾಕಲಾಗಿದೆ. ಅಲ್ಲದೆ ಇಲ್ಲಿ ಮಣ್ಣೆತ್ತುವ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿಆಗರ ರಾಜ್ಯಸ್ವ ನಿರೀಕ್ಷಕ ರಮೇಶ, ಕಸಬಾ ಹೋಬಳಿbರಾಜ್ಯಸ್ವ ನಿರೀಕ್ಷಕ ಯದುಗಿರಿ, ಗ್ರಾಮ ಲೆಕ್ಕಾಧಿಕಾರಿ ರಮ್ಮಶ್ರೀ, ಸುಹಾಸ್ ನೇತೃತ್ವದ ದಾಳಿ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button