ಇತ್ತೀಚಿನ ಸುದ್ದಿ
ಒಳ ಮೀಸಲಾತಿ ಜಾರಿಯಾಗುವ ತನಕ ಸರ್ಕಾರವು ನೇಮಕಾತಿ ಹಾಗೂ ಮುಂಬಡ್ತಿ ಆದೇಶ ಹೊರಡಿಸಬಾರದು : ಮಾನಸಂದ್ರ ಮುನಿಯಪ್ಪ

ಚಾಮರಾಜನಗರ: ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಇಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮಾನಸಂದ್ರ ಮುನಿಯಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವ ತನಕ ಮುಂಬಡ್ತಿ ಹಾಗೂ ನೇಮಕಾತಿಯನ್ನು ಸರ್ಕಾರವು ಹೊರಡಿಸಬಾರದು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತು, ಅನ್ನದಾನಪ್ಪ, ಎಂ.ನಾಗೇಶ್, ಹೆಚ್ ಸಿಗನಾಯ್ಕ್, ಜಿಲ್ಲಾಧ್ಯಕ್ಷ ರಾಜೇಂದ್ರ ಸಿದ್ದಾರ್ಥ, ಉಪಾಧ್ಯಕ್ಷರಾದ ಪಿ.ಸುರೇಶ್, ಮಂಜು, ಕೊಳ್ಳೇಗಾಲ ವಿಧಾನಸಭಾ ಅಧ್ಯಕ್ಷ ಬಸವರಾಜಪ್ಪ, ಹನೂರು ವಿಧಾನಸಭಾ ಅಧ್ಯಕ್ಷ ಮಹೇಶ್ ಕುಮಾರ್ ಇದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada, ಚಾಮರಾಜನಗರ