ಇತ್ತೀಚಿನ ಸುದ್ದಿ

ಕರುನಾಡಿನ ಕನ್ನಡ ಶಾಸನಗಳಿಗೆ ಇಲ್ಲದೆ ಕಿಮ್ಮತ್ತು..!

ತಮಿಳರಿಗಿರುವ ಭಾಷೆ ಕಾಳಜಿ
ಕರ್ನಾಟಕ ಸರಕಾರಕ್ಕೆ ಏಕಿಲ್ಲ? ದುಗರಾಜ ವಟಗಲ್

ಮಸ್ಕಿ : ಬಜೆಟ್‌ನಲ್ಲಿ ರುಪಾಯಿ ಚಿಹ್ನೆಯನ್ನು ಮಾತೃಭಾಷೆಯಲ್ಲೇ ನಮೂದಿಸುವ ಮೂಲಕ ಭಾಷಾಪ್ರೇಮ ಮೆರೆದಿದ್ದ ತಮಿಳುನಾಡಿನ ಸರ್ಕಾರ, ಅದೇ ಬಜೆಟ್‌ನಲ್ಲಿ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿರುವ ಏಳು ಸಾಲಿನ ಶಾಸನದ ಅಧ್ಯಯನಕ್ಕೂ ಹಣ ಮೀಸಲಿರಿಸಿ ಭಾಷಾ ಪ್ರೀತಿ ಮೆರೆದಿದೆ.

ಪಟ್ಟಣದ ಸರ್ಕಾರಿ ಪ್ರಥಮ ಕಾಲೇಜು ಪಕ್ಕದಲ್ಲಿ ಇರುವ
ಸುಳ್ಳಿ ದಿಬ್ಬ ಬಂಡೆಗಲ್ಲಿನಲ್ಲಿ ತಮಿಳು ಲಿಪಿ ಸಂಸ್ಕೃತಿ ಭಾಷೆಯ ಶಾಸನವಿದೆ.

ಇದು ಕ್ರಿಶ ೧೦೨೦ರಲ್ಲ ಎಡೆದೊರೆ ೨,000 ಸಾವಿರ ನಾಡಿನ ರಾಜಧಾನಿ ಯಾದ ಮೊಸಗೆ ಯಲ್ಲಿ (ಈಗಿನ ಮಸ್ಕಿ) ಕಲ್ಯಾಣ ಚಾಳುಕ್ಯರ ಇಮ್ಮಡಿ ಜಯಸಿಂಹ ಹಾಗೂ ತಮಿಳುನಾಡಿನ ಮೂರು ರಾಜಮನತೆನಗಳಾದ ಚೋಳರು, ಪಾಂಡ್ಯರು ಹಾಗೂ ಚೇರರ ಒಕ್ಕೂಟದ ಸೈನ್ಯವು ರಾಜೇಂದ್ರ ವರ್ಮಾ ನ ನೇತೃತ್ವ ದಲ್ಲಿ ನಡೆದ ಯುದ್ಧದಲ್ಲಿ ಕಲ್ಯಾಣ ಚಾಳುಕ್ಯರ ಅರಸ
ಸೋಲನುಭವಿಸುತ್ತಾನೆ.ಇದರ ನೆನಪಿಗಾಗಿ ಸಂಸ್ಕೃತ ಭಾಷೆಯಲ್ಲಿ ತಮಿಳು ಲಿಪಿಯಲ್ಲಿ ಈ ಶಾಸನವನ್ನು ಕೆತ್ತಿಸಲಾಗಿದೆ.

ತಮಿಳುನಾಡು ಸರ್ಕಾರ ಈ ಮಹತ್ವದ ಶಾಸನವನ್ನು ಅರಿತು . ತಮಿಳು ಭಾಷೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಅಲ್ಲಿನ ಸರ್ಕಾರ ಭಾಷೆಗೆ ಸಂಬಂಧಿಸಿದ ಪ್ರತಿ ಸಂಗತಿಗೂ ವಿಶೇಷ ಒತ್ತು
ನೀಡುತ್ತಿದೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ.

ಆದರೆ ಮಸ್ಕಿ ಪಟ್ಟಣದ ಹಳೆ ಪ್ರವಾಸಿ ಮಂದಿರ ದಲ್ಲಿ ಕೆಲವು ಕನ್ನಡ ಶಾಸನಗಳು ದೊರೆತಿವೆ.ಆದರೆ ಅವುಗಳನ್ನು ರಕ್ಷಣೆ ಮಾಡುವಲ್ಲಿ ಸರಕಾರ ಹಾಗೂ ಪುರಾತತ್ವ ಇಲಾಖೆ ವಿಫಲವಾಗಿದೆ.

ಮಸ್ಕಿ ತಾಲ್ಲೂಕು ಸೇರಿದಂತೆ ರಾಯಚೂರು ಜಿಲ್ಲೆಯಾದ್ಯಂತ ಸಾವಿರಾರು ಕನ್ನಡ ಶಾಸನಗಳು ದೊರೆತಿವೆ.ಆದರೆ ತಮಿಳುನಾಡಿನ ಸರಕಾರ ಭಾಷೆಯ ಮೇಲೆ ತೋರುವ ಪ್ರೀತಿ ನಮ್ಮ ಕನಡ ನಾಡಿನ ಶಾಸನದ ಮೇಲೆ ಕರ್ನಾಟಕ ಸರಕಾರ ಯಾಕೊ ಭಾಷಾಭಿಮಾನ ಕಾಣುತ್ತಿಲ್ಲ.

ಕರುನಾಡಿನಲ್ಲಿ ಇರುವ ಶಾಸನ ಸ್ಮಾರಕಗಳ ರಕ್ಷಣೆಗೆ ಕರುನಾಡಿನ ಕನ್ನಡದ ಮನಸ್ಸುಗಳು
ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ.

ನಮ್ಮ ರಾಯಚೂರು
ಜಿಲ್ಲೆಯಲ್ಲಿ ಅನೇಕ ಇತಿಸಗಾರರು
ಕನ್ನಡ ಶಾಸನಗಳನ್ನು ಹಲವಾರು ಇತಿಹಾಸಗಾರರು ಪತ್ತೆ ಹಚ್ವಿದ್ದು
ಸಂಬಂಧಿಸಿದ ಇಲಾಖೆ ಸಂರಕ್ಷಣೆ ಮಾಡಿ ದೇಶದಂತ್ಯ ತಿಳಿಸು ಪ್ರಯತ್ನ ಮಾಡಬೇಕು ಕನ್ನಡ ಶಾಸನಗಳ ಬಗ್ಗೆ
ಸ್ಥಳೀಯ ಕನ್ನಡ ಮತ್ತು ಸಂಸೃತಿ ಇಲಾಖೆ ಅಧಿಕಾರಿಗಳು ಹಾಗೂ ಸಚಿವರು ಅಳಿವಿನ ಅಂಚಿನಲ್ಲಿರುವ ಕನ್ನಡ ಶಾಸನಗಳಿಗೆ ಸರಕಾರ ವಿಶೇಷ ಅನುದಾನವನ್ನು ನೀಡಿ ಅಭಿವೃದ್ಧಿ ಪಡಿಸಬೇಕು.
ದುಗರಾಜ ವಟಗಲ್
ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಮಸ್ಕಿ.

ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ

Related Articles

Leave a Reply

Your email address will not be published. Required fields are marked *

Back to top button