ಕ್ಯಾಮೆರಾಗೆ ಪೋಸ್ ಕೊಟ್ಟ ಮನಿಕೆ ಮಗೆ ಹಿತೆ ಖ್ಯಾತಿಯ Yohani-Jacqueline Fernandez..!
ಮನಿಕೆ ಮಗೆ ಹಿತೆ (Manike Mage Hithe) ಎನ್ನುವ ಆ ಒಂದು ಹಾಡು ಹಾಡಿ ಸಖತ್ ವೈರಲ್ ಆದ ಗಾಯಕಿ ಯೊಹಾನಿ ಡಿ ಸಿಲ್ವಾ (yohani de silva). ಶ್ರೀಲಂಕಾ ಮೂಲದ ಈ ಗಾಯಕಿ ಮತ್ತೋರ್ವ ಶ್ರೀಲಂಕಾದ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರನ್ನು ಭೇಟಿಯಾಗಿದ್ದಾರೆ. ಹೌದು, ಈ ಇಬ್ಬರೂ ಶ್ರೀಲಂಕಾದ ಸುಂದರಿಯರು ಫೋಟೋಗೆ ಒಟ್ಟಿಗೆ ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಯೊಹಾನಿ ಇನ್ಸ್ಟಾಗ್ರಾಂ ಖಾತೆ)
ಶ್ರೀಲಂಕಾ ಬ್ಯೂಟಿ ಕ್ವೀನ್ ಜಾಕ್ವೆಲಿನ್ ಫರ್ನಾಡಿಂಸ್ ಬಾಲಿವುಡ್ನಲ್ಲಿ ಸಿನಿಮಾ ಹಾಗೂ ಆಲ್ಬಂ ಹಾಡುಗಳಲ್ಲಿ ನಟಿಸುತ್ತಾ ಮಿಂಚುತ್ತಿದ್ದಾರೆ. ಈ ನಟಿಯನ್ನು ಈಗ ಮನಿಕೆ ಮಗೆ ಹಿತೆ ವೈರಲ್ ಹಾಡಿನ ಗಾಯಕಿ ಯೊಹಾನಿ ಭೇಟಿಯಾಗಿದ್ದಾರೆ.
ಸದ್ಯ ಭಾರತಕ್ಕೆ ಬಂದಿರುವ ಗಾಯಕಿ ಯೊಹಾನಿ ಅವರು ಇತ್ತೀಚೆಗಷ್ಟೆ ಹೈದರಾಬಾದಿನಲ್ಲಿ ಸ್ಟಾಜ್ ಶೋ ಕೊಟ್ಟಿದ್ದರು. Ig ಅವರು ಮುಂಬೈನಲ್ಲಿದ್ದಾರೆ. ಸೊಹೊ ಹೌಸ್ ಮುಂಬೈನಲ್ಲಿ ಯೊಹಾನಿ ಅವರು ನಟಿ ಜಾಕ್ವೆಲಿನ್ ಅವರನ್ನು ಭೇಟಿ ಮಾಡಿದ್ದಾರೆ.