ಸುದ್ದಿ
ನಾನು ಬಂದ್ಗೆ ಬೆಂಬಲ ನೀಡೋದಿಲ್ಲ-ಕರವೇ ನಾರಾಯಣ ಗೌಡ
ಬೆಂಗಳೂರು: ರಾಜ್ಯದಲ್ಲಿ ಎಂಇಎಸ್ ಬ್ಯಾನ್ಗೆ ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಾಳೆ ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದಾರೆ. ಆದರೆ ಕರವೇ ಬಣಗಳ ಮುಖ್ಯಸ್ಥರು ಬಂದ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕರವೇ ನಾರಾಯಣ ಗೌಡ ಮಾತನಾಡಿದ್ದು, ನಾನು ಬಂದ್ಗೆ ಬೆಂಬಲ ನೀಡೋದಿಲ್ಲ. ಯಾಕೆಂದರೆ ಜನಸಾಮಾನ್ಯರಿಗೆ ಅದು ತೊಂದರೆಯಾಗುತ್ತೆ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರ್ಯಾಲಿ ಮಾತ್ರ ಪ್ರತಿಭಟನೆ ಅಲ್ಲ. ರಾಜಭವನಕ್ಕೆ ಹೋಗಿ ಮನವಿ ಸಲ್ಲಿಸುತ್ತೆವೆ. ಇದು ಇಂದಿಗೆ ಮಾತ್ರ ಸೀಮಿತವಾದ ಪ್ರತಿಭಟನೆ ಅಲ್ಲ. ಎಂಇಎಸ್ ಬ್ಯಾನ್ ಆಗಲೇಬೇಕು. ನಾವು ಮನವಿ ಸಲ್ಲಿಸುತ್ತಲೇ ಇದ್ದೇವೆ . ಆದರೂ ಈ ಬಾರಿ ಮನವಿ ಸಲ್ಲಿಸಿ ಬ್ಯಾನ್ಗೆ ಒತ್ತಾಯಿಸುತ್ತೇವೆ. ಆದರೆ ನಾಳೆ ನಾವು ಯಾವುದೇ ಬಂದ್ ಮಾಡೋದಿಲ್ಲ ಎಂದರು.