ಸುದ್ದಿ

ಸರ್​ ಸಿ.ವಿ.ರಾಮನ್​ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳು ಖಾಲಿ..

C.V.Raman General Hospital Recruitment 2021: ಸರ್ ಸಿ.ವಿ.ರಾಮನ್​ ಜನರಲ್ ಆಸ್ಪತ್ರೆ(Sir C.V.Raman General Hospital) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಫಾರ್ಮಾಸಿಸ್ಟ್(Pharmacist)​ ಮತ್ತು ಸ್ಟಾಫ್​ ನರ್ಸ್(Staff Nurse)​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಡಿಸೆಂಬರ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಜನವರಿ 5, 2022ರಂದು ನೇರ ಸಂದರ್ಶನ(Walk-in-Interview) ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ karnataka.gov.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಸರ್ ಸಿ.ವಿ.ರಾಮನ್​ ಜನರಲ್ ಆಸ್ಪತ್ರೆ
ಹುದ್ದೆಯ ಹೆಸರುಫಾರ್ಮಾಸಿಸ್ಟ್​ ಮತ್ತು ಸ್ಟಾಫ್​ ನರ್ಸ್
ಒಟ್ಟು ಹುದ್ದೆಗಳು02
ವಿದ್ಯಾರ್ಹತೆಡಿಪ್ಲೋಮಾ, ಬಿಎಸ್ಸಿ ನರ್ಸಿಂಗ್, ಬಿ ಫಾರ್ಮಾ, ಡಿ ಫಾರ್ಮಾ, GNM
ಉದ್ಯೋಗದ ಸ್ಥಳಬೆಂಗಳೂರು
ವೇತನಮಾಸಿಕ ₹ 13,000
ಅರ್ಜಿ ಸಲ್ಲಿಕೆ ಬಗೆಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ20/12/2021
ಸಂದರ್ಶನ ನಡೆಯುವ ದಿನಾಂಕ05/01/2022i

ಹುದ್ದೆ ಮಾಹಿತಿ:
ಫಾರ್ಮಾಸಿಸ್ಟ್​-1 ಹುದ್ದೆ
ಸ್ಟಾಫ್​ ನರ್ಸ್-1 ಹುದ್ದೆ

ವಿದ್ಯಾರ್ಹತೆ:
ಫಾರ್ಮಾಸಿಸ್ಟ್​- ಬಿ.ಫಾರ್ಮಾ, ಡಿ.ಫಾರ್ಮಾ
ಸ್ಟಾಫ್​ ನರ್ಸ್- ಡಿಪ್ಲೋಮಾ, ಬಿಎಸ್ಸಿ ನರ್ಸಿಂಗ್​, GNM

ಅನುಭವ:
ಫಾರ್ಮಾಸಿಸ್ಟ್​-ಕನಿಷ್ಠ 3 ವರ್ಷ ಅನುಭವ
ಸ್ಟಾಫ್​ ನರ್ಸ್- ಕನಿಷ್ಠ 2 ವರ್ಷ ಅನುಭವ

ಯೋಮಿತಿ:
ಫಾರ್ಮಾಸಿಸ್ಟ್​ ಮತ್ತು ಸ್ಟಾಫ್​ ನರ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 60 ವರ್ಷ ಮೀರಿರಬಾರದು.

ವೇತನ:
ಫಾರ್ಮಾಸಿಸ್ಟ್​ ಮತ್ತು ಸ್ಟಾಫ್​ ನರ್ಸ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 13,000 ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20/12/2021
ಸಂದರ್ಶನ ನಡೆಯುವ ದಿನಾಂಕ: 05/01/2022

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:
ಸರ್​ ಸಿ.ವಿ.ರಾಮನ್​ ಜನರಲ್ ಆಸ್ಪತ್ರೆ
ಇಂದಿರಾನಗರ
ಬೆಂಗಳೂರು-560038

Related Articles

Leave a Reply

Your email address will not be published. Required fields are marked *

Back to top button