ಸಾಮಾನ್ಯವಾಗಿ ನಾವೆಲ್ಲಾ ನಮ್ಮ ಆರೋಗ್ಯಕ್ಕೆ(Health) ಬಾಳೆಹಣ್ಣು(Banana) ತಿನ್ನುವುದು ಒಳ್ಳೆಯದು ಎಂದು ತಿಳಿದು ತಿನ್ನುತ್ತಿರುತ್ತೇವೆ. ಹಾಗೆ ಬಾಳೆಹಣ್ಣನ್ನು ತಿಂದ ನಂತರ ಅದರ ಸಿಪ್ಪೆಯನ್ನು(Banana Peel) ಹಾಗೆಯೇ ಬಿಸಾಡುತ್ತೇವೆ. ಆದರೆ ನಾವು ಹಾಗೆ ಬಿಸಾಡುವ ಬಾಳೆಹಣ್ಣಿನ ಸಿಪ್ಪೆಗೂ ಸಹ ನಮ್ಮ ಮುಖದ ಚರ್ಮದ(Skin) ಆರೋಗ್ಯ ಕಾಪಾಡುವ ಶಕ್ತಿ ಇದೆ ಎಂದರೆ ನೀವು ನಂಬಲಿಕ್ಕಿಲ್ಲ.

ಹೌದು.. ಇತ್ತೀಚೆಗೆ ಅನೇಕ ಮಹಿಳೆಯರು ಮತ್ತು ಯುವತಿಯರು ತಮ್ಮ ಮುಖದ ಮೇಲೆ ಆಗುವ ಪಿಗ್ಮೆಂಟೇಶನ್ (Pigmentation)ಮತ್ತು ಮೊಡವೆಗಳಿಂದ(Pimples) ಬೇಸತ್ತು, ಇದಕ್ಕೆ ಮನೆಯಲ್ಲಿಯೇ ಇದಕ್ಕೆಲ್ಲಾ ಸೂಕ್ತವಾದ ಪರಿಹಾರ ಹುಡುಕುತ್ತಿದ್ದಾರೆ.

ಅನೇಕ ಜನಪ್ರಿಯ ನಟಿಯರು ಚರ್ಮಕ್ಕೆ ಸುಲಭ ಮತ್ತು ರಾಸಾಯನಿಕ ಮುಕ್ತ ಮನೆ ಮದ್ದುಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ಬಾಲಿವುಡ್ ನಟಿ ಭಾಗ್ಯಶ್ರೀ ಮುಖದ ಚರ್ಮದ ಸಮಸ್ಯೆಗಳಾಗಿರುವ ಪಿಗ್ಮೆಂಟೇಶನ್ ಮತ್ತು ಮೊಡವೆಗಳಿಗೆ ಚಿಕಿತ್ಸೆಯನ್ನು ಮನೆಯಲ್ಲಿಯೇ ಮಾಡಿಕೊಳ್ಳುವಂತಹ ಒಂದು ಸರಳವಾದ ಟಿಪ್ಸ್ ಹಂಚಿಕೊಂಡಿದ್ದಾರೆ.