ಸುದ್ದಿ

ಪಂಚರಾಜ್ಯ ಚುನಾವಣೆ ಹಿನ್ನಲೆ ಇಂದು ಚುನಾವಣಾ ಆಯೋಗದ ಮಹತ್ವದ ಸಭೆ..

Election Commission of India: 2022 ರ ಆರಂಭದಲ್ಲಿ 5 ರಾಜ್ಯಗಳಲ್ಲಿ (ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ) ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಆದರೆ ಕರೋನಾದ ಹೊಸ ರೂಪಾಂತರ ಓಮಿಕ್ರಾನ್  (Omicron) ಪ್ರಕರಣಗಳ ಹೆಚ್ಚಳ ಸರ್ಕಾರ ಹಾಗೂ ಚುನಾವಣಾ ಆಯೋಗದ ಕಳವಳವನ್ನು ಹೆಚ್ಚಿಸಿದೆ. ಇಂತಹ ಸಂದರ್ಭಗಳಲ್ಲಿ ಚುನಾವಣಾ ರ್ಯಾಲಿಗಳು ಕೊರೊನಾ ಸೋಂಕನ್ನು ಹೆಚ್ಚಿಸಬಹುದು ಎಂಬ ಆತಂಕ ಮನೆಮಾಡಿದೆ.

ಕೊರೊನಾ ಸ್ಥಿತಿಗತಿಗಳ ಕುರಿತು ಮಹತ್ವದ ಸಭೆ:
2022 ರ ಆರಂಭದಲ್ಲಿ 5 ರಾಜ್ಯಗಳಲ್ಲಿ ನಡೆಯಲಿರುವ ಪಂಚರಾಜ್ಯ ಚುನಾವಣೆಗಳ (Five States Assembly Elections) ಹಿನ್ನಲೆಯಲ್ಲಿ  ಭಾರತದ ಚುನಾವಣಾ ಆಯೋಗ ಇಂದು (ಡಿಸೆಂಬರ್ 27) ಬೆಳಿಗ್ಗೆ 11 ಗಂಟೆಗೆ ಮಹತ್ವದ ಸಭೆ ಕರೆದಿದ್ದು, ಈ ಸಭೆಯಲ್ಲಿ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ರಾಜೇಶ್ ಭೂಷಣ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ, 5 ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನಲೆಯಲ್ಲಿ ಪ್ರಸ್ತುತ ಕೋವಿಡ್-19 (COVID-19) ಪರಿಸ್ಥಿತಿಯನ್ನು ಚರ್ಚಿಸಲಾಗುವುದು.

ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಮೊದಲು ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಬಯಸುತ್ತದೆ:
ಕೆಲವು ದಿನಗಳ ಹಿಂದೆ, ಚುನಾವಣಾ ಆಯುಕ್ತರು ಉತ್ತರಪ್ರದೇಶ ರಾಜ್ಯಕ್ಕೆ ಭೇಟಿ ನೀಡುವುದಾಗಿ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿದ ನಂತರವೇ ಚುನಾವಣಾ ದಿನಾಂಕಗಳನ್ನು ಘೋಷಿಸುವುದಾಗಿ ಹೇಳಿದ್ದರು. 

ಇದಕ್ಕೂ ಮುನ್ನ ಏಪ್ರಿಲ್ 2021 ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆದವು. ಎಲ್ಲ ಪಕ್ಷಗಳು ಸೇರಿ ಆಯೋಜಿಸಿದ್ದ ಸಮಾವೇಶದಲ್ಲಿ ಜನಸಾಗರವೇ ನೆರೆದಿತ್ತು. 8 ಹಂತಗಳಲ್ಲಿ ನಡೆದ ಈ ವಿಧಾನಸಭಾ ಚುನಾವಣೆಯ ಆರನೇ ಹಂತದ ಚುನಾವಣೆ ಸಮೀಪಿಸುವ ಹೊತ್ತಿಗೆ ಬಂಗಾಳದಲ್ಲಿ ಕರೋನಾ ಸ್ಫೋಟ ಸಂಭವಿಸಲು ಪ್ರಾರಂಭಿಸಿತು. ಕೊರೊನಾ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದಕ್ಕೆ ಚುನಾವಣಾ ಆಯೋಗವನ್ನು (Election Commission of India) ತೀವ್ರವಾಗಿ ಟೀಕಿಸಲಾಗಿದೆ. ಟೀಕೆಗಳ ನಂತರ ಚುನಾವಣಾ ಆಯೋಗವು ಪ್ರಚಾರವನ್ನು ಮಿತಿಗೊಳಿಸಬೇಕಾಯಿತು. ಜೊತೆಗೆ ಚುನಾವಣಾ ರ್ಯಾಲಿಗಳನ್ನೂ ನಿಷೇಧಿಸಲಾಯಿತು. ಚುನಾವಣಾ ಆಯೋಗವು ಈ ಬಾರಿ ಮತ್ತೆ ಬಂಗಾಳ ಚುನಾವಣೆಯಂತೆ ಟೀಕೆಗಳನ್ನು ಎದುರಿಸಲು ಬಯಸುವುದಿಲ್ಲ. ಈ ಹಿನ್ನಲೆಯಲ್ಲಿ ಕರೋನಾ ಪರಿಸ್ಥಿತಿಯನ್ನು ಅವಲೋಕಿಸಿದ ನಂತರವೇ ಚುನಾವಣಾ ದಿನಾಂಕಗಳನ್ನು ಘೋಷಿಸುವ ಸಾಧ್ಯತೆ ಇದೆ.

ಇತ್ತೀಚಿಗೆ  ಅಲಹಾಬಾದ್ ಹೈಕೋರ್ಟ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡದಿದ್ದರೂ, ಕರೋನಾ ಹೊಸ ರೂಪಾಂತರ ಓಮಿಕ್ರಾನ್ ದೃಷ್ಟಿಯಿಂದ ವಿಧಾನಸಭೆ ಚುನಾವಣೆಯನ್ನು ಒಂದೆರಡು ತಿಂಗಳ ಕಾಲ ಮುಂದೂಡುವಂತೆ, ಹಾಗೆಯೇ ರಾಜ್ಯದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಸಮಾವೇಶಗಳನ್ನು ನಡೆಸುವುದನ್ನು ನಿಷೇಧಿಸುವಂತೆ ಹಾಗೂ ರಾಜ್ಯ ಚುನಾವಣೆಗಳನ್ನು ಮುಂದೂಡುವುದನ್ನು ಪರಿಗಣಿಸುವಂತೆ ಗುರುವಾರ (ಡಿ.23) ಕೇಂದ್ರ ಚುನಾವಣಾ ಆಯೋಗ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ.  ಈ ಹಿನ್ನಲೆಯಲ್ಲಿಯೂ ಕೇಂದ್ರ ಚುನಾವಣಾ ಆಯೋಗದ ಇಂದಿನ ಸಭೆ ಮಹತ್ವದ್ದಾಗಿದ್ದು, ಈಗ ಚುನಾವಣಾ ಆಯೋಗವು ಓಮಿಕ್ರಾನ್ ಬೆದರಿಕೆಯ ನಡುವೆ ಚುನಾವಣೆ ನಡೆಸಬೇಕಾದರೆ, ಅದನ್ನು ಹೇಗೆ ಮಾಡಬೇಕು ಎಂದು ನಿರ್ಧರಿಸಬೇಕಿದೆ.

ಚುನಾವಣಾ ಆಯೋಗದ ಉತ್ತರ ಪ್ರದೇಶ ಪ್ರವಾಸ – 28 ರಿಂದ 30 ಡಿಸೆಂಬರ್
28 ಡಿಸೆಂಬರ್:

* ಸಂಜೆ 4 ರಿಂದ ಸಂಜೆ 6 ರವರೆಗೆ – ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳೊಂದಿಗೆ ಸಭೆ 
* ಸಂಜೆ 6.15 ರಿಂದ 7.30ರವರೆಗೆ – ರಾಜ್ಯ ಪೊಲೀಸ್ ನೋಡಲ್ ಅಧಿಕಾರಿಗಳು / ಕೇಂದ್ರ ಪೊಲೀಸ್ ಪಡೆಯ ನೋಡಲ್ ಅಧಿಕಾರಿಗಳೊಂದಿಗೆ ಸಭೆ
* ಸಂಜೆ 7.30 ರಿಂದ 9 ರವರೆಗೆ – ವಿವಿಧ ಜಾರಿ ಸಂಸ್ಥೆಗಳೊಂದಿಗೆ ಸಭೆ
 
29 ಡಿಸೆಂಬರ್:
* ಬೆಳಿಗ್ಗೆ 9.30 ರಿಂದ 1.30 ರವರೆಗೆ – ಜಿಲ್ಲಾ ಚುನಾವಣಾ ಅಧಿಕಾರಿಗಳು/ಎಸ್‌ಪಿ/ಐಜಿಗಳೊಂದಿಗೆ (10 ವಲಯಗಳು) ಸಭೆ
* ಮಧ್ಯಾಹ್ನ 3 ರಿಂದ ರಾತ್ರಿ 9.30 ರವರೆಗೆ – ಜಿಲ್ಲಾ ಚುನಾವಣಾಧಿಕಾರಿಗಳು/ಎಸ್‌ಪಿ/ಆಯುಕ್ತರು/ಐಜಿಗಳೊಂದಿಗೆ ಸಭೆ

30 ಡಿಸೆಂಬರ್:
* ಬೆಳಿಗ್ಗೆ 10 ರಿಂದ 11 ರವರೆಗೆ – ಮುಖ್ಯ ಕಾರ್ಯದರ್ಶಿ / ಡಿಜಿಪಿ ಜೊತೆ ಸಭೆ 
* ಮಧ್ಯಾಹ್ನ 12 ರಿಂದ 12.45 ರವರೆಗೆ – ಪತ್ರಿಕಾಗೋಷ್ಠಿ

Related Articles

Leave a Reply

Your email address will not be published. Required fields are marked *

Back to top button