ಸುದ್ದಿ

ಕೆಲ ಜಿಲ್ಲೆಗಳಲ್ಲಿ ಕೈ ಕೊಟ್ಟ ಮತಯಂತ್ರ.!

ಬೈ ಎಲೆಕ್ಷನ್.. ಪರಿಷತ್ ಚುನಾವಣೆ ಫೈಟ್ ನಂತರ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಐದು ನಗರಸಭೆಗಳು ಸೇರಿದಂತೆ ಅವಧಿ ಪೂರ್ಣಗೊಂಡಿರುವ ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಓಮೈಕ್ರಾನ್ ಕೋವಿಡ್ ಪ್ರಕರಣದ ಭೀತಿಯಲ್ಲೂ ಇಂದು ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳಿಗೆ (Urban Local Bodies) ಚುನಾವಣೆ ನಡೆಯುತ್ತಿದೆ. 9 ವಾರ್ಡ್​ಗಳಿಗೆ ಉಪಚುನಾವಣೆಯೂ ಆಗುತ್ತಿದೆ. 19 ಜಿಲ್ಲೆಗಳ 58 ಸ್ಥಳೀಯ ನಗರ ಸಂಸ್ಥೆಗಳ 1185 ವಾರ್ಡ್​ಗಳಿಗೆ ಇಂದು ಮತದಾನ ನಡೆಯಲಿದೆ. ಬೆಳಗ್ಗೆ 7ರಿಂದ ಮತದಾನ ಆರಂಭವಾಗಿದೆ. ಬೆಳ್ಳಿಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ ಅಲ್ಲಲ್ಲಿ ಮತಯಂತ್ರಗಳು ಕೈಕೊಟ್ಟಿದೆ. ಇನ್ನೂ ಬಿಗಿ ಪೊಲೀಸ್​ ಬಂದೋ ಬಸ್ತ್​​ನಲ್ಲಿ ಮತದಾನ ನಡೆಯುತ್ತಿದೆ. ಗದಗದಲ್ಲಿ ಬೆಳಗ್ಗೆ 7 ಗಂಟೆಯಿಂದ ವೋಟಿಂಗ್(Voting) ಆರಂಭವಾಗಿದೆ. ಮತಗಟ್ಟೆಗಳತ್ತ ಮತದಾರರು ಮಂದಗತಿಯಲ್ಲಿ ಆಗಮಿಸುತ್ತಿದ್ದಾರೆ. ಇನ್ನೂವಿಜಯನಗರ ಜಿಲ್ಲೆಯಾದ ಬಳಿಕ ಮೊದಲ ಬಾರಿಗೆ  ಚುನಾವಣೆ. ನಡೆಯುತ್ತಿದೆ. ಸಚಿವ ಆನಂದ್ ಸಿಂಗ್​​ಗೆ  ನಗರಸಭೆ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಒದಗಿಸಲಾಗಿದೆ. 

ಮತಗಟ್ಟೆಯನ್ನು ಪರಿಶೀಲಿಸಿದ ತಹಸೀಲ್ದಾರ

ಇನ್ನೂ ಕೊಪ್ಪಳ ಜಿಲ್ಲೆಯಲ್ಲೂ ಬೆಳಗ್ಗೆ 7ರಿಂದ ಮತದಾನ ಆರಂಬವಾಗಿದೆ. ಮತದಾನ ಆರಂಭಕ್ಕೂ ಮುನ್ನ ಕೊಪ್ಪಳ ತಹಸೀಲ್ದಾರ ಅಮರೇಶ ಬಿರಾದಾ ಭಾಗ್ಯನಗರ ಪಟ್ಟಣ ಮತಗಟ್ಟೆಗೆ ಬಂದು ಪರಿಶೀಲನೆ ನಡೆಸಿದರು. ಚುಮು ಚುಮು ಚಳಿಯ ನಡುವೆಯೆ ಜನ ಬಂದು ವೋಟ್​ ಮಾಡುತ್ತಿದ್ದಾರೆ.

ಗದಗದಲ್ಲಿ ಕೈ ಕೊಟ್ಟ ಮತ ಯಂತ್ರ

ಗದಗ-ಬೆಟಗೇರಿ ಅವಳಿ ಚುನಾವಣೆ ಮತದಾನ ಹಿನ್ನಲೆ, ವಾರ್ಡ್ 15 ರಲ್ಲಿ ಕೈಕೊಟ್ಟ ಮತ ಯಂತ್ರ, 45 ನಿಮಿಷ ತಡವಾಗಿ ಮತದಾನ ಆರಂಭವಾಗಿದೆ.ನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ.೦೬ ರಲ್ಲಿ ಘಟನೆ ನಡೆದಿದೆ. ಮತಗಟ್ಟೆ ನಂಬರ್ 62 ರ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು, ವಿಷಯ ತಿಳಿದು ಚುನಾವಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿವಿ ಪ್ಯಾಟ್ ಬದಲಾಯಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಬಿಡದಿಯಲ್ಲಿ ಚುರುಕು ಒಡೆದ ಮತದಾನ!

ಬಿಡದಿ ಪುರಸಭೆಗೆ ಮತದಾನ ಹಿನ್ನೆಲೆ, ಚುರುಕು ಪಡೆದಿದೆ. ಮುಂಜಾನೇ 7ರಿಂದಲೇ  ಮತಗಟ್ಟೆಗಳ ಮುಂದೆ ಸಾಲುಗಟ್ಟಿ ನಿಂತು ಜನ ವೋಟ್​​ ಮಾಡುತ್ತಿದ್ದಾರೆ. 23 ವಾರ್ಡ್‌ ಹೊಂದಿರುವ ಬಿಡದಿ ಪುರಸಭೆ ಮತದಾನ ಬಿರುಸು ಪಡೆದುಕೊಂಡಿದೆ. ಶಾಂತಿಯುತ ಮತದಾನಕ್ಕೆ ರಾಮನಗರ ತಾಲೂಕು ಆಡಳಿತದ ಒತ್ತು ನೀಡಿದೆ.

ಮತದಾರರನ್ನು ಸೆಳೆಯಲು ಮಾಟ-ಮಂತ್ರದ ಮೊರೆ !

ಹೌದು, ಯಾದಗಿರಿ ಕಕ್ಕೇರಾ ಪುರಸಭೆಗೆ ಇಂದು ಮತದಾನ ಹಿನ್ನೆಲೆ, ಮತದಾರರನ್ನು ಸೆಳೆಯಲು ಮಾಟ-ಮಂತ್ರದ ಮೊರೆ ಹೋಗಿದ್ದಾರೆ. ಚುನಾವಣೆ ಗೆಲ್ಲಲು ಅಡ್ಡದಾರಿ ಹಿಡಿದಿದೆ.23 ನೇ ವಾರ್ಡ್-ಜಂಗಣ್ಣರದೊಡ್ಡಿ ಮತಗಟ್ಟೆಯ ಬಳಿ ನಿಂಬೆಹಣ್ಣು, ಇತರೆ ಮಾಟ-ಮಂತ್ರದ ವಸ್ತುಗಳು ಪತ್ತೆಯಾಗಿದೆ. ಇಂದು ಚುನಾವಣೆ ಹಿನ್ನೆಲೆ, ನಿನ್ನೆ ರಾತ್ರಿಯೇ ಕೆಲವು ಕೀಡಿಗೇಡಿಗಳು ಬಾನಾಮತಿ ಮಾಟ-ಮಂತ್ರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾಟ-ಮಂತ್ರದ ನಿಂಬೆಹಣ್ಣು, ಕೆಲವು ವಸ್ತುಗಳು ಕಂಡು  ಸ್ಥಳೀಯರು ಬೆರಗಾಗಿದ್ದಾರೆ.

ಡೊಳ್ಳು ಮೇಳದೊಂದಿಗೆ ಆಗಮಿಸಿದ ಅಭ್ಯರ್ಥಿ

ಗದಗ ನಗರದ ಖಾನ್ ತೋಟ ಬಡಾವಣೆಯಲ್ಲಿನ ಮತಗಟ್ಟೆಗೆ ಡೊಳ್ಳು ಮೇಳದೊಂದಿಗೆ ಪಕ್ಷೇತರ ಅಭ್ಯರ್ಥಿ ಆಗಮಿಸಿದ್ದರು. ಮತಗಟ್ಟೆಗೆ ಬೆಂಬಲಿಗರೊಂದಿಗೆ ಆಗಮಿಸಿದ ಅಭ್ಯರ್ಥಿ ಮುತ್ತು ಜಡಿಯನ್ನಯ ಆವರಣದಲ್ಲಿ ಬರದಂತೆ  ಪೊಲೀಸರು ತಡೆದಿದ್ದಾರೆ. ಬಳಿಕ ಅಭ್ಯರ್ಥಿಯನ್ನ ತಡೆದು ಮತಗಟ್ಟೆ ಸಿಬ್ಬಂದಿ ಮಾಸ್ಕ್​ ಹಾಕಿಸಿದ್ದಾರೆ.

ಸರತಿ ಸಾಲಿನಲ್ಲಿ ನಿಂತು ಮತದಾನ!

ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಇಂದು ಪಟ್ಟಣ ಪಂಚಾಯತಿ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್- ಬಿಜೆಪಿ ನಡುವೆ ಜಿದ್ದಾಜಿದ್ದಿಯ ಕಣವಾಗಿರುವ 16 ವಾರ್ಡ್ ಗಳಿಗೆಪಟ್ಟಣ ಪಂಚಾಯತಿ ಎಲೆಕ್ಷನ್ ನಡೆಯುತ್ತಿದೆ. ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವ ಮತದಾರರು. ಸಚಿವ ಶ್ರೀರಾಮುಲು ಸ್ವಕ್ಷೇತ್ರದಲ್ಲಿ ಈ ಚುನಾವಣೆ ಪ್ರತಿಷ್ಠೆಯಾಗಿದೆ.

Related Articles

Leave a Reply

Your email address will not be published. Required fields are marked *

Back to top button