ಆರೋಗ್ಯ

ಚಳಿಗಾಲದಲ್ಲಿ ಇವುಗಳನ್ನು ಸೇವನೆ ಮಾಡಿದ್ರೆ ಯಾವುದೇ ಆರೋಗ್ಯ ಸಮಸ್ಯೆ ಬರಲ್ವಂತೆ..

ನಾವು ಸಾಮಾನ್ಯವಾಗಿ ಚಳಿಗಾಲದ (Winter)  ಸಮಯದಲ್ಲಿ ವಿವಿಧ  ರೀತಿಯ ಆಹಾರಗಳನ್ನು (Food)  ತಿನ್ನಲು ಇಷ್ಟಪಡುತ್ತೇವೆ. ಆದರೆ ಈ ಸಮಯದಲ್ಲಿಯೇ ಹೆಚ್ಚಿನ ಆರೋಗ್ಯ ಸಮಸ್ಯೆಗಳು (Health Problems)  ಸಹ ಕಾಣಿಸಿಕೊಳ್ಳುತ್ತದೆ. ನಮ್ಮ ದೇಹವು ತನ್ನ ಕಾರ್ಯಚಟುವಟಿಕೆಯನ್ನು ಸ್ವಲ್ಪಮಟ್ಟಿಗೆ ಬದಲಾಯಿಸುವುದರಿಂದಲೂ ಈ ಸಮಸ್ಯೆಗಳು ಉಂಟಾಗುತ್ತದೆ. ಹೊರಗಿನ ತಾಪಮಾನದಲ್ಲಿನ ಕುಸಿತದಿಂದಾಗಿ, ನಮ್ಮ ಚಯಾಪಚಯವು ಬದಲಾಗುತ್ತದೆ ಮತ್ತು ಹೀಗಾಗಿ, ಶಕ್ತಿಯ ಮಟ್ಟ (energy Level) ಸಹ ಕಡಿಮೆಯಾಗುತ್ತದೆ. ಅದಕ್ಕಾಗಿಯೇ, ನಮ್ಮ ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಡಲು, ಕೆಲವು ಆಹಾರ ಪದಾರ್ಥಗಳನ್ನು ತಿನ್ನುವಂತೆ ಅಥವಾ ಕುಡಿಯುವಂತೆ ಈ ಸಮಯದಲ್ಲಿ ಹೆಚ್ಚು ಸಲಹೆ ನೀಡಲಾಗುತ್ತದೆ. ಈ ಸಮಯದಲ್ಲಿ ನೀವು ತಪ್ಪದೇ ಸೇವನೆ ಮಾಡಬೇಕಾಗಿರುವ ಕೆಲವು ಆಹಾರಗಳ ಪಟ್ಟಿ ಇಲ್ಲಿದೆ. ಇಲ್ಲಿರುವ ಪ್ರತಿಯೊಂದು ಆಹಾರ ಪದಾರ್ಥವು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.  


ಕಬ್ಬು.

ಕಬ್ಬು ನಮ್ಮ ಅತ್ಯಂತ ಹಳೆಯ ಡಿಟಾಕ್ಸ್ ಆಹಾರವಾಗಿದೆ, ಯಕೃತ್ತನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಚಳಿಗಾಲದ ಬಿಸಿಲಿನಲ್ಲಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ನೀವು ಕಬ್ಬನ್ನು ಜಗಿದು ತಿನ್ನಲು ಬಹುದು ಸಾಧ್ಯವಾಗದಿದ್ದರೆ ಕಬ್ಬಿನ ಹಾಲುಗಳು ಸಾಮಾನ್ಯವಾಗಿ ಎಲ್ಲಾ ಕಡೆ ಲಭ್ಯವಿರುತ್ತದೆ. ಅದನ್ನು ಕೂಡ ಸೇವನೆ ಮಾಡುವುದು ನಿಮ್ಮ ಆರೋಗ್ಯದ ದೃಷ್ಠಿಯಿಂದ ಉತ್ತಮ ಎನ್ನಲಾಗುತ್ತದೆ.

ಬೋರೆಹಣ್ಣು

ಈ ಹಣ್ಣು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುವ ಮಕ್ಕಳಿಗೆ ಉತ್ತಮವಾಗಿದೆ ಮತ್ತು ನಮ್ಮ ಆಹಾರದ ವೈವಿಧ್ಯತೆಯನ್ನು ಹೆಚ್ಚು ಮಾಡುತ್ತದೆ. ಇದರಲ್ಲಿ ನಾರಿನಾಂಶವಿರುವುದರಿಂದ ನಿಮಗೆ ಹಲವಾರು ರೀತಿಯಲ್ಲಿ ಪ್ರಯೋಜನ ನೀಡುತ್ತದೆ. ಮಲಬದ್ಧತೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಇದು ಪರಿಹಾರವನ್ನು ನೀಡುತ್ತದೆ. ಚಳಿಗಾಲದಲ್ಲಿ ಇದರ ಸೇವನೆ ಹೆಚ್ಚು ಉಪಯುಕ್ತ ಎನ್ನಲಾಗುತ್ತದೆ.

ಹುಣಸೆಹಣ್ಣು

ಇದು ಉತ್ತಮ ಜೀರ್ಣಕಾರಿ. ಇದರ ಬೀಜಗಳನ್ನು ಮಜ್ಜಿಗೆಯೊಂದಿಗೆ ಬೆರೆಸಿದಾಗ ಉತ್ತಮ ಪ್ರಯೋಜನವನ್ನು ನಿಡುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಹುಣಸೆಹಣ್ಣು ಇದ್ದೇ ಇರುತ್ತದೆ. ಪ್ರತಿಯೊಂದು ಅಡುಗೆಯಲ್ಲಿ ಇದನ್ನ ಬಳಕೆ ಮಾಡಲಾಗುತ್ತದೆ. ಇದು ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯವನ್ನು ಸಹ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ನೀವು ಒಂದು 2 ಹುಣಸೆಬೀಜಗಳನ್ನು ತೆಗೆದುಕೊಂಡು ಚನ್ನಾಗಿ ಹುರಿದು ಪುಡಿ ಮಾಡಿಕೊಳ್ಳಿ. ನಂತರ ಮಜ್ಜಿಗೆಗೆ ಸ್ವಲ್ಪ ಉಪ್ಪು ಹಾಕಿ ನಂತರ ಈ ಹುಣಸೆಬೀಜದ ಪುಡಿಯನ್ನು ಬೆರೆಸಿ ಸೇವನೆ ಮಾಡುವುದು ರುಚಿಕರ ಮಾತ್ರವಲ್ಲ ಚಳಿಗಾಲದ ಆರೋಗ್ಯ ಸಮಸ್ಯೆಯಿಂದ ನಿಮಗೆ ಮುಕ್ತಿ ನೀಡುತ್ತದೆ.

 ನೆಲ್ಲಿಕಾಯಿ

ಇದನ್ನ ಚಳಿಗಾಲದ ರಾಜ ಎಂದು ಕರೆಯಲಾಗುತ್ತದೆ. ಇದರ ಆರೋಗ್ಯ ಪ್ರಯೋಜನಗಳನ್ನು ಪಟ್ಟಿ ಮಾಡುತ್ತಾ ಹೋದಂತೆ ಬೆಳೆಯುತ್ತಲೇ ಇರುತ್ತದೆ. ಅಷ್ಟು ಪ್ರಯೋಜನಗಳನ್ನು ಇದು ನೀಡುತ್ತದೆ. ಇದನ್ನ ಹೆಚ್ಚಾಗಿ ಚಳಿಗಾಲದಲ್ಲಿ ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಬರದಂತೆ ತಡೆಯುತ್ತದೆ.  ಅಲ್ಲದೇ ನಿಮ್ಮನ್ನ ಕಾಡುವ ಹಲವಾರು ಸಮಸ್ಯೆಗೆ ಇದೇ ಪರಿಹಾರ ಎನನ್ಬಹುದು.

ಚರ್ಮದ ಸಮಸ್ಯೆಯಿಂದ ಹಿಡಿದು ಉಸಿರಾಟದ ಸಮಸ್ಯೆಯವರೆಗೆ ಈ ನೆಲ್ಲಿಕಾಯಿಯಲ್ಲಿದೆ ಪರಿಹಾರ. ನೀವು ಇದನ್ನ ಹಾಗೆಯೇ ತಿನ್ನಬಹುದು ಅಥವಾ ಉಪ್ಪಿನಕಾಯಿ, ಗೊಜ್ಜು, ಮುರಬ್ಬ ಹೀಗೆ ಇದರಿಂದ ಸಹ ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ನಿಮಗೆ ಬೇಕಾದ ಹಾಗೆಯ ಇದನ್ನ ಸೇವನೆ ಮಾಡುವುದು ಹೆಚ್ಚಿನ ಪ್ರಯೋಜನ ನೀಡುತ್ತದೆ. ಅಲ್ಲದೇ ಇದು ಕೂದಲು ಉದುರುವ ಸಮಸ್ಯೆಗೆ ಸಹ ಪರಿಹಾರ ನೀಡುತ್ತದೆ.

ಎಳ್ಳಿನ ಉಂಡೆ

ಈ ಎಳ್ಳಿನ ಉಂಡೆ ನಿಮ್ಮ ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚು ಮಾಡುವಲ್ಲಿ ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ದೆಹಕ್ಕೆ ಅಗತ್ಯವಾದ ಉಷ್ಣಾಂಶವನ್ನು ಇದು ನೀಡುತ್ತದೆ. ಅಲ್ಲದೇ ಎಳ್ಳು ಸ್ನಾಯು ನೋವು ಸೇರಿದಂತೆ ಬೊಜ್ಜು ಕರಗಿಸಲು ಸಹ ಇದು ಸಹಾಯ ಮಾಡುತ್ತದೆ.

Related Articles

Leave a Reply

Your email address will not be published. Required fields are marked *

Back to top button