ಗೆಳೆತನದ ಕಮಾಲ್: 5 ತಿಂಗಳಲ್ಲಿ 4,300 ಕೋಟಿಯ ಕಂಪನಿಯ ಮಾಲೀಕರಾದ 19 ವರ್ಷದ ಹುಡುಗರು..!
ಪ್ರತಿಷ್ಠಿತ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ (Stanford University) ಓದುವುದು ಜನರ ಕನಸು, ಆದರೆ ಬಾಲ್ಯದ ಗೆಳೆಯರಾದ ಆದಿತ್ ಪಲಿಚಾ (Aadit Palicha) ಮತ್ತು ಕೈವಲ್ಯ ವೋಹ್ರಾ (Kaivalya Vohra) ಅವರು ವಿಭಿನ್ನವಾಗಿ ಏನನ್ನಾದರೂ ಮಾಡಬೇಕೆಂದು ಕನಸು ಕಂಡಿದ್ದರು. ಇದೇ ಕಾರಣಕ್ಕೆ ಕೇವಲ 19 ವರ್ಷದ ಆದಿತ್ ಪಲಿಚಾ ತನ್ನ ಕನಸನ್ನು ನನಸಾಗಿಸಲು ಸ್ಟ್ಯಾನ್ಫೋರ್ಡ್ನ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟು ಕೈವಲ್ಯ ಜೊತೆ ವ್ಯವಹಾರಕ್ಕೆ ತೊಡಗಿದರು. ಈ ಹಾದಿಯಲ್ಲಿ ಇಬ್ಬರೂ ಯಶಸ್ಸನ್ನು ಪಡೆದುಕೊಂಡಿದ್ದಾರೆ ಮತ್ತು ತ್ವರಿತ ದಿನಸಿಯನ್ನು (Grocery Delivery) ತಲುಪಿಸುವ ಅವರ ಸ್ಟಾರ್ಟಪ್ ಕಂಪನಿ Zepto ಕೇವಲ ಐದು ತಿಂಗಳಲ್ಲಿ 43 ನೂರು ಕೋಟಿ ರೂಪಾಯಿಗಳ ಕಂಪನಿಯಾಗಿ ಬದಲಾಗಿದೆ.
ಒಂದೂವರೆ ತಿಂಗಳಲ್ಲಿ ಕಂಪನಿಯ ಮೌಲ್ಯವು ದ್ವಿಗುಣಗೊಂಡಿದೆ, Zepto ಇತ್ತೀಚಿನ ಫಂಡಿಂಗ್ ಸುತ್ತಿ(Funding Round)ನಲ್ಲಿ $ 570 ಮಿಲಿಯನ್ ಅಂದರೆ ಸುಮಾರು 4,300 ಕೋಟಿ ಮೌಲ್ಯವನ್ನು ಪಡೆದುಕೊಂಡಿದೆ. Y ಕಾಂಬಿನೇಟರ್ ನೇತೃತ್ವದಲ್ಲಿ Zepto ಈ ಸುತ್ತಿನಲ್ಲಿ $100 ಮಿಲಿಯನ್ ಹಣವನ್ನು ಪಡೆದುಕೊಂಡಿತ್ತು. ಕೇವಲ ಒಂದೂವರೆ ತಿಂಗಳ ಹಿಂದೆ Zepto ಮೌಲ್ಯವನ್ನು $ 225 ಮಿಲಿಯನ್ ಎಂದು ಅಂದಾಜಿಸಲಾಗಿದೆ. ನಂತರ ಸ್ಟಾರ್ಟಪ್ $ 60 ಮಿಲಿಯನ್ ಹಣವನ್ನು ಪಡೆದುಕೊಂಡಿತ್ತು.
ಬಂಡವಾಳ ಹೂಡಿಕೆಗೆ ಮುಂದಾಗುತ್ತಿರುವ ಕಂಪನಿಗಳು
Y ಕಾಂಬಿನೇಟರ್ನ ಕಂಟಿನ್ಯೂಟಿ ಫಂಡ್ನ ಇತ್ತೀಚಿನ ಸುತ್ತಿನಲ್ಲಿ ಈ ಹೂಡಿಕೆದಾರರು Zepto ಮೇಲೆ ಬಂಡವಾಳ ಹೂಡಿಕೆಗೆ ಮುಂದಾಗುತ್ತಿದ್ದಾರೆ. ಜೊತೆಗೆ ಗ್ಲೇಡ್ ಬ್ರೂಕ್ ಕ್ಯಾಪಿಟಲ್ ಪಾಲುದಾರರು, Nexus ವೆಂಚರ್ಸ್ ಪಾಲುದಾರರು, ಬ್ರೇಯರ್ ಕ್ಯಾಪಿಟಲ್ ಮತ್ತು ಸಿಲಿಕಾನ್ ವ್ಯಾಲಿ ಹೂಡಿಕೆದಾರರಾದ Lachy Groom. ನಿಂದ ಹೂಡಿಕೆಯನ್ನು ಸ್ವೀಕರಿಸಿದ್ದಾರೆ .ವೈ ಕಾಂಬಿನೇಟರ್, ಗ್ಲೇಡ್ ಬ್ರೂಕ್ ಕ್ಯಾಪಿಟಲ್, ನೆಕ್ಸಸ್ ವೆಂಚರ್ಸ್, ಗ್ಲೋಬಲ್ ಫೌಂಡರ್ಸ್ ಮತ್ತು ಲಾಚೆ ಗ್ರೂಮ್ನಂತಹ ಹೂಡಿಕೆದಾರರು ಈಗಾಗಲೇ ಜೆಪ್ಟೊದಲ್ಲಿ ಹೂಡಿಕೆ ಮಾಡಿದ್ದಾರೆ.
10 ನಿಮಿಷಗಳಲ್ಲಿ ದಿನಸಿ ಪೂರೈಸುವ ಕಂಪನಿ
ಈ ಕಂಪನಿಯು ದಿನಸಿ ಪದಾರ್ತಗಳನ್ನು 10 ನಿಮಿಷಗಳಲ್ಲಿ ತಲುಪಿಸುತ್ತದೆ ಎಂದು ಹೇಳುತ್ತದೆ. ಝೆಪ್ಟೋ ಈ ವರ್ಷ ಮುಂಬೈನಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತು ಮತ್ತು ಪ್ರಸ್ತುತ ಬೆಂಗಳೂರು, ದೆಹಲಿ, ಗುರುಗ್ರಾಮ್, ಚೆನ್ನೈನಲ್ಲಿಯೂ ಸೇವೆ ಸಲ್ಲಿಸುತ್ತಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಹೈದರಾಬಾದ್, ಪುಣೆ, ಕೋಲ್ಕತ್ತಾದಂತಹ ನಗರಗಳಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.
ಕಂಪನಿಯು ಪ್ರಸ್ತುತ 100 ಮೈಕ್ರೋ ವೇರ್ಹೌಸ್ಗಳನ್ನು ಹೊಂದಿದೆ. ಪ್ರಸ್ತುತ, Zepto ತಾಜಾ ಉತ್ಪನ್ನಗಳು, ಪಡಿತರ ವಸ್ತುಗಳು, ತಿಂಡಿಗಳು, ವೈಯಕ್ತಿಕ ಆರೈಕೆಯಂತಹ ವಿಭಾಗಗಳಲ್ಲಿ 2,500 ಕ್ಕೂ ಹೆಚ್ಚು ವಸ್ತುಗಳನ್ನು ತಲುಪಿಸುತ್ತಿದೆ.
ಸಾಫ್ಟ್ಬ್ಯಾಂಕ್ನಿಂದ ಹೂಡಿಕೆ
ಈ ಕಂಪನಿಗಳು ತ್ವರಿತ ವಿತರಣಾ ಮಾರುಕಟ್ಟೆಯಲ್ಲಿ ಸ್ಪರ್ಧಿಸುತ್ತವೆ, Zepto Grofers ಮತ್ತು Dunzo ನಂತಹ ಕಂಪನಿಗಳೊಂದಿಗೆ ಸ್ಪರ್ಧಿಸುತ್ತದೆ. ಗ್ರೋಫರ್ಸ್ ಇತ್ತೀಚೆಗೆ ಬ್ರ್ಯಾಂಡ್ನ ಹೆಸರನ್ನು ಬ್ಲಿಂಕಿಟ್ ಎಂದು ಬದಲಾಯಿಸಿದ್ದಾರೆ. ಈಗ ಈ ಕಂಪನಿಯೂ ಆರ್ಡರ್ ಪಡೆದ ಕೆಲವೇ ನಿಮಿಷಗಳಲ್ಲಿ ಡೆಲಿವರಿ ಮಾಡುತ್ತಿದೆ. ಇದು ಸಾಫ್ಟ್ಬ್ಯಾಂಕ್ನಿಂದ ಹೂಡಿಕೆಯನ್ನು ಪಡೆದುಕೊಂಡಿದೆ. Google-ಬೆಂಬಲಿತ Dunzo ತ್ವರಿತ ವಿತರಣಾ ವಿಭಾಗದಲ್ಲಿ ಸಹ ಕಾರ್ಯನಿರ್ವಹಿಸುತ್ತದೆ.