ಟೆರೇಸ್ ಮೇಲೆ ವಿದ್ಯಾರ್ಥಿನಿಯ ಶವ ಪತ್ತೆ.!
ಚೆನ್ನೈ: ಚೆನ್ನೈನಲ್ಲಿ ಪ್ರತಿಯೊಬ್ಬರನ್ನೂ ದಿಗ್ಭ್ರಮೆಗೊಳಿಸುವ ಆತ್ಮಹತ್ಯೆ ಪ್ರಕರಣ(TamilNadu Student Suicide)ವೊಂದು ನಡೆದಿದೆ. ಅಪ್ರಾಪ್ತ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್ನೋಟ್ ಓದಿದರೆ ನಿಮಗೆ ನಿಜಕ್ಕೂ ಕಣ್ಣೀರು ಬರುತ್ತದೆ. ತಾಯಿಯ ಗರ್ಭ ಮತ್ತು ಸ್ಮಶಾನ ಇವು ಎರಡೇ ಸುರಕ್ಷಿತ ಸ್ಥಳಗಳು ಎಂದು ಡೆತ್ನೋಟ್ ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಮಿಳುನಾಡಿನ ಚೆನ್ನೈ(Chennai)ನ ಪೂನಂ ಪ್ರದೇಶದಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ.
‘ಶಿಕ್ಷಕರನ್ನಾಗಲಿ, ಸಂಬಂಧಿಕರನ್ನಾಗಲಿ ನಂಬಬೇಡಿ… ಹೆಣ್ಣುಮಕ್ಕಳು ತಾಯಿಯ ಗರ್ಭ ಅಥವಾ ಸಮಾಧಿಯಲ್ಲಿ ಮಾತ್ರ ಸುರಕ್ಷಿತವಾಗಿರುತ್ತಾರೆ’ ಎಂದು ಬರೆದಿರುವ ವಿದ್ಯಾರ್ಥಿನಿ ತನ್ನ ಆತ್ಮಹತ್ಯೆ ಪತ್ರದ ಆರಂಭದಲ್ಲಿ ‘ಲೈಂಗಿಕ ಕಿರುಕುಳ ನಿಲ್ಲಿಸಿ’ ಎಂದು ಉಲ್ಲೇಖಿಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ!
ಪ್ರತಿದಿನವೂ ತಪ್ಪದೇ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಈ ಸೂಸೈಡ್ ನೋಟ್(Chennai Girl Student Suicide) ಆಕೆಯ ಕುಟುಂಬಸ್ಥರು ಮತ್ತು ಪೊಲೀಸರಿಗೆ ಹಲವು ಬಗೆಹರಿಯದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿದ್ಯಾರ್ಥಿನಿ ಆತ್ಮಹತ್ಯೆಯಂತಹ ಭಯಾನಕ ಹೆಜ್ಜೆ ಇಟ್ಟಿದ್ದು ಏಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೂಲಗಳ ಪ್ರಕಾರ ಲೈಂಗಿಕ ಕಿರುಕುಳ ತಾಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ತಾಯಿ ಕೆಲಸಕ್ಕಾಗಿ ಮನೆಯಿಂದ ಹೊರಹೋದಾಗ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಟೆರೇಸ್ ಮೇಲೆ ವಿದ್ಯಾರ್ಥಿನಿಯ ಶವ ಪತ್ತೆ
ಪೊಲೀಸರ ಪ್ರಕಾರ, 11ನೇ ತರಗತಿಯ ವಿದ್ಯಾರ್ಥಿನಿ ತನ್ನ ಹೆತ್ತವರೊಂದಿಗೆ ಚೆನ್ನೈ ಹೊರವಲಯದಲ್ಲಿ ವಾಸಿಸುತ್ತಿದ್ದಳು. ಶನಿವಾರ ಅವರ ಮೃತದೇಹ ಮನೆಯ ಮೇಲ್ಛಾವಣಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ವಿದ್ಯಾರ್ಥಿನಿಯ ಬರೆದಿರುವ ಡೆತ್ನೋಟ್ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಡೆತ್‌ನೋಟ್‌ನಲ್ಲಿ ಭಾವುಕ ಸಾಲುಗಳನ್ನು ವಿದ್ಯಾರ್ಥಿನಿ ಬರೆದಿದ್ದಾಳೆ. ಈ ಜಗತ್ತಿನಲ್ಲಿ ತಾಯಿಯ ಗರ್ಭ ಹಾಗೂ ಸ್ಮಶಾನವನ್ನು ಬಿಟ್ಟರೆ ಬೇರೆ ಯಾವ ಸ್ಥಳವೂ ಹೆಣ್ಣಿಗೆ ಸುರಕ್ಷಿತವಲ್ಲ ಎಂದು ಬರೆದಿದ್ದಾಳೆ. ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.