ಆಗಸದಲ್ಲಿ ಅಮೆರಿಕದ 52 ಪುಟಾಣಿ ಉಪಗ್ರಹಗಳ ಗೋಚರ..!
ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಬಾಗಲಕೋಟೆ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಅಮೆರಿಕದ 52 ಉಪಗ್ರಹಗಳು ಗೋಚರಿಸಿವೆ. ಆಗಸದಲ್ಲಿಯ ಕೌತುಕ ಕಂಡು ಜನರು ಚಕಿತರಾಗಿದ್ದು, ಈ ದೃಶ್ಯವನ್ನು ಮೊಬೈಲ್ ಗಳಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.
ಡಿಸೆಂಬರ್ 18ರಂದು ಅಮೆರಿಕ ಕ್ಯಾಲಿಫೋರ್ನಿಯಾದಲ್ಲಿ ಉದ್ಯಮಿ ಎಲನ್ ಮಸ್ಕ್ ಒಡೆತನದ ಸ್ಟಾರ್ ಲಿಂಕ್ ಕಂಪನಿ 52 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಲಾಗಿತ್ತು. ನಿನ್ನೆ ಈ ಅಚ್ಚರಿ ದೃಶ್ಯ ಬರಿಗಣ್ಣಿಗೆ ಕಾಣಿಸಿದೆ.
ಈ ಉಪಗ್ರಹಗಳ ಒಂದೇ ಕಕ್ಷೆಯಲ್ಲಿದ್ದು, ಭೂಮಿಯಿಂದ ಒಂದೇ ಎತ್ತರದಲ್ಲಿವೆ. ಈ ಉಪಗ್ರಹಗಳು ಯಾವ ದೇಶದ ಮೇಲೆ ಹಾದು ಹೋಗುತ್ತವೆಯೋ ಅಲ್ಲಿ ಈ ದೃಶ್ಯ ಕಾಣಬಹುದು. ಈ 52 ಉಪಗ್ರಹಗಳು ಭೂಮಿಯಿಂದ ಸುಮಾರು 540 ಕಿಲೋ ಮೀಟರ್ ದೂರದಲ್ಲಿವೆ ಎಂದು ಖಗೋಳ ತಜ್ಱರು ಹೇಳುತ್ತಾರೆ.

ಉಪಗ್ರಹದ ಮೇಲೆ ಅಳವಡಿಸಿದ್ದ ಸೌರ ಫಲಕಗಳು ದೀಪಗಳಂತೆ ಗೋಚರಿಸಿದ್ದರಿಂದ ಜನರು ಮೊದಲಿಗೆ ನಕ್ಷತ್ರಗಳು ಎಂದು ತಿಳಿದಿದ್ದರು.ಅಮೆರಿಕ ಮುಂದೆ ಸುಮಾರು 1800 ಇಂಟರ್‌ನೆಟ್ ಉಪಗ್ರಹಗಳನ್ನು ಗಗನಕ್ಕೆ ಕಳುಹಿಸುವ ತಯಾರಿ ನಡೆಸಿದೆ. ಈ ಉಪಗ್ರಹಗಳ ಮೂಲಕ ಇಂಟರ್ ನೆಟ್ ಸೇವೆ ಒದಗಿಸುವ ನಿಟ್ಟಿನಲ್ಲಿ ಇವುಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಲಾಗಿದೆ.

ಈ ಉಪಗ್ರಹಗಳಿಂದಲೇ ಮುಂದಿನ ಉಚಿತ ಇಂಟರ್ ನೆಟ್ ಸಿಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಇಂಟರ್ ನೆಟ್ ವೇಗವೂ ಹೆಚ್ಚಾಗಲಿದೆ. ಇಂದು ಸಹ ಸಂಜೆ ಏಳು ಗಂಟೆ ನಂತರ ಈ ಉಪಗ್ರಹಗಳು ಗೋಚರಿಸಲಿವೆ. ಆದ್ರೆ ಇಷ್ಟೊಂದು ಪ್ರಜ್ವಲವಾಗಿ ಕಾಣಿಸಿಕೊಳ್ಳೋದು ಕಡಿಮೆ ಎಂದು ಎನ್ನಲಾಗುತ್ತಿದೆ.