ಯಾರಿಗೂ ಗೊತ್ತಿಲ್ಲದೇ ಎರಡನೇ ಮದುವೆ ಆಗಿದ್ದಾರಾ ಮಾಜಿ ಶಾಸಕ ಬಸವರಾಜ್ ದಡೆಸೂಗೂರ್!?

ವಿಜಯನಗರ: ಮಾಜಿ ಶಾಸಕ ಬಸವರಾಜ್ ದಡೆಸೂಗೂರ್ ನನ್ನ ಪತಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಹೇಳಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಉಪ ಲೋಕಾಯುಕ್ತ ಬಿ.ವೀರಪ್ಪ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯ ಡಿಡಿ ಅವರ ಮೊಬೈಲ್ ಪರಿಶೀಲಿಸಿದಾಗ ಶಾಕಿಂಗ್ ವಿಚಾರವೊಂದು ಬಹಿರಂಗಗೊಂಡಿದೆ.
ವಿಜಯನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಶ್ವೇತಾ ಅವರ ಖಾತೆಯಲ್ಲಿ ದುಡ್ಡು ಒಂದು ಬಾರಿ ಹೋಗಿದೆ. ಆದರೆ ಎರಡು ಬಾರಿ ಬಂದಿದೆ. ಈ ಹಿನ್ನೆಲೆ ಅವರ ಮೊಬೈಲ್ನ್ನು ಪರಿಶೀಲಿಸಿದ್ದಾರೆ. ಪೋನ್ ಪೇ ವಹಿವಾಟಿನ ಬಗ್ಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಪ್ರಶ್ನಿಸಿದ್ದಾರೆ. ಈ ವೇಳೆ ಯಾರಿಗೂ ತಿಳಿಯದ ಅಚ್ಚರಿಯ ಸಂಗತಿ ಬಯಲಾಗಿದೆ.
ಪೋನ್ ಪೇ ವಹಿವಾಟಿನ ಬಗ್ಗೆ ವಿಚಾರಿಸುವಾಗ ಹಣವನ್ನು ಮಕ್ಕಳಿಗೆ ಅಥವಾ ಯಜಮಾನನಿಗೆ ಕಳಿಸಿರಬೇಕು ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಡಿ ಶ್ವೇತಾ, ಹೌದು ಸರ್ ಹೇಳಿದ್ದಾರೆ.
ಆಗ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಯಜಮಾನರು ಏನ್ ಕೆಲಸ ಮಾಡುತ್ತಾರೆ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಡಿಡಿ ಶ್ವೇತಾ ನನ್ನ ಗಂಡ ಪೊಲಿಟಿಷಿಯನ್. ಮಾಜಿ ಶಾಸಕರು ಸರ್. ಬಸವರಾಜ್ ದಡೆಸೂಗೂರ್ ನನ್ನ ಪತಿ ಎಂದು ಶ್ವೇತಾ ಹೇಳಿದ್ದಾರೆ.
ಈ ಹಿಂದೆ ದಡೆಸೂಗೂರ್ ಮತ್ತು ಈ ಮಹಿಳಾ ಅಧಿಕಾರಿಯ ಮಾತುಗಳ ಆಡಿಯೋ ವೈರಲ್ ಆಗಿತ್ತು. ಇದು ಸಾಕಷ್ಟು ಚರ್ಚೆಯನ್ನು ಸಹ ಹುಟ್ಟು ಹಾಕಿತ್ತು. ಈಗ ಖುದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಶ್ವೇತಾ ಅವರೇ ನನ್ನ ಪತಿ Politician, ಕನಕಗಿರಿಯ ಮಾಜಿ ಶಾಸಕರು, ಬಸವರಾಜ್ ದಡೆಸೂಗೂರ್ ಅಂತ ಒಪ್ಪಿಕೊಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.