ದೇಶಸುದ್ದಿ

ಉಪ್ರ. ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ ಲಖೀಂಪುರ್​ ರೈತ ಹತ್ಯಾಕಾಂಡ: ಬಿಜೆಪಿಯಲ್ಲಿ ತಳಮಳ..!

ನವ ದೆಹಲಿ (ಅಕ್ಟೋಬರ್​ 12); “ಉತ್ತರಪ್ರದೇಶವನ್ನು (UttaraPradesh) ಗೆದ್ದವರು ಇಡೀ ದೇಶವನ್ನೇ ಗೆದ್ದಂತೆ” ಎಂಬ ನಾಡ್ನುಡಿ ರಾಜಕೀಯ ವಲಯದಲ್ಲಿ ಯಾವಾಗಲೂ ಚಾಲ್ತಿಯಲ್ಲಿರುವ ಅಂಶ. ರಾಜ್ಯದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರಪ್ರದೇಶ ನಿಜಕ್ಕೂ ಈ ದೇಶದ ಪ್ರಧಾನಿ ಯಾರಾಗಬೇಕು? ಎಂಬುದನ್ನು ನಿರ್ಧರಿಸುತ್ತದೆ. ಇದೇ ಕಾರಣಕ್ಕೆ ಕಳೆದ 70 ವರ್ಷಗಳಿಂದ ಎಲ್ಲಾ ಪ್ರಧಾನಿ ಅಭ್ಯರ್ಥಿಗಳು ಉತ್ತರಪ್ರದೇಶದ ಯಾವುದಾದರೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವುದು ವಾಡಿಕೆಯಾಗಿದೆ.

ಇದೇ ಕಾರಣಕ್ಕೆ ಇಲ್ಲಿನ ಗೆಲುವಿನ ಮೇಲೆ ಎಲ್ಲಾ ಪಕ್ಷಗಳೂ ಕಣ್ಣಿಟ್ಟಿರುತ್ತವೆ. ಈ ರಾಜ್ಯದಲ್ಲಿ ಕಳೆದ ಎರಡೂ ಚುನಾವಣೆಯಲ್ಲಿ ಬಿಜೆಪಿ ಅಭುತಪೂರ್ವ ಗೆಲುವು ದಾಖಲಿಸಿದ್ದ ಕಾರಣದಿಂದಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಕೇಂದ್ರದಲ್ಲಿ ಬಹುಮತದ ಸರ್ಕಾರವನ್ನು ರಚಿಸಲು ಸಾಧ್ಯವಾಗಿತ್ತು. ಆದರೆ, ಇದೀಗ ಉತ್ತರಪ್ರದೇಶದ ಲಖೀಂಪುರ್​ ಖೇರಿ (Lakhimpur Kheri Massacre) ರೈತ ಹತ್ಯಾಕಾಂಡ ಬಿಜೆಪಿ ಸರ್ಕಾರಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಈ ಬೆಳವಣಿಗೆ ಚುನಾವಣೆ (UttaraPradesh Assembly Election) ಮೇಲೆ ಪರಿಣಾಮ ಬೀರಲಿದೆಯೇ? ಎಂದು ಬಿಜೆಪಿ ಚಿಂತಿಸುತ್ತಿದೆ. ಅಲ್ಲದೆ, ಈ ಬಗ್ಗೆ ಚರ್ಚಿಸಲು ದೆಹಲಿಯ ಕಚೇರಿಯಲ್ಲಿ 4 ಗಂಟೆಗಳ ಸಭೆಯನ್ನು ಏರ್ಪಡಿಸಿದೆ ಎಂದು ತಿಳಿದುಬಂದಿದೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಹಿರಿಯ ನಾಯಕರ ಸಭೆಯಲ್ಲಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಅಕ್ಟೋಬರ್​ 03 ರಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್​ ಮಿಶ್ರಾ ರೈತ ಮೇಲೆ ಕಾರು ಹತ್ತಿಸಿ ನಾಲ್ಕು ಜನರ ಸಾವಿಗೆ ಕಾರಣನಾಗಿದ್ದ ಮತ್ತು ಈ ಮೂಲಕ ಹಿಂಸಾಚಾರಕ್ಕೆ ನಾಂದಿ ಹಾಡಿದ್ದ ವಿಚಾರವನ್ನು ಉಲ್ಲೇಖಿಸಿ ಅಜಯ್ ಮಿಶ್ರಾ ಅವರ ರಾಜೀನಾಮೆಗೂ ಆಗ್ರಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button