ಜಿಟಿ ದೇವೇಗೌಡ್ರು ಕಾಂಗ್ರೆಸ್ಗೆ
ಶಾಸಕ ಜಿ.ಟಿ. ದೇವೇಗೌಡ ನಮ್ಮ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಬರುವುದಾದರೆ ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಜಿಟಿಡಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ಗೊತ್ತಿಲ್ಲ, ರಾಜಕಾರಣ ನಿಂತ ನೀರಲ್ಲ. ಅದು ಹರಿಯುತ್ತಿರಬೇಕು. ನಾನು ಹಿಂದೆಯೇ ಹೇಳಿದ್ದೇನೆ, ಜಿಟಿ ದೇವೇಗೌಡರು ಮನಸ್ಸು ಮಾಡಿ, ನಮ್ಮ ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಬರುವುದಾದರೆ, ಅವರನ್ನ ನಾನು ಅತ್ಯಂತ ನಮ್ರತೆಯಿಂದ ಸ್ವಾಗತ ಮಾಡುತ್ತೇನೆ. ಆದರೆ ಇದರ ಅಂತಿಮ ನಿರ್ಧಾರ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಅವರು ಬಂದರೆ ಕಾಂಗ್ರೆಸ್ ಸೇರಿದರೆ ಪಕ್ಷಕ್ಕೆ ಬಲ ಬರಲಿದೆ ಎಂದರು. ಜಿಟಿಡಿ ಮತ್ತು ತಮ್ಮ ನಡುವಿನ ಬಾಂಧವ್ಯದ ಬಗ್ಗೆ ಬಗ್ಗೆ ಮಾತನಾಡಿದ ಅವರು, ದೇವೇಗೌಡ್ರು ನಾನು ರಾಜಕಾರಣಕ್ಕೆ ಬರುವ ಮುನ್ನವೇ ಸ್ನೇಹಿತರು. ಅವರು ಯಾವುದೇ ಪಕ್ಷದಲ್ಲಿದ್ದರೂ ನಮ್ಮ ಅವರ ನಡುವಿನ ಬಾಂಧವ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇನ್ಮುಂದೆಯೂ ಬರಲ್ಲ, ಅವರೂ ನಮ್ಮ ಜೊತೆ ಬಂದರೆ ಇನ್ನೂ ಖುಷಿಯಾಗಲಿದೆ ಎಂದು ಹೇಳಿದರು.