ದೇಶ

ATMಗಳಿಂದ ಕ್ಯಾಶ್ ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ, ನೀವೂ ತಿಳಿದುಕೊಳ್ಳಿ

ನವದೆಹಲಿ: SBI New Rule – ಎಟಿಎಂಗಳಿಂದ ನಗದು ಹಿಂಪಡೆಯುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಎಟಿಎಂ ವಹಿವಾಟುಗಳನ್ನು (SBI Transaction) ಹೆಚ್ಚು ಸುರಕ್ಷಿತಗೊಳಿಸಲು ಎಸ್‌ಬಿಐ ಹೊಸ ಕ್ರಮವನ್ನು ಕೈಗೊಂಡಿದೆ. ಈಗ ನೀವು SBI ATM ನಿಂದ ಹಣವನ್ನು ಹಿಂಪಡೆಯಲು OTP (SBI Offers OTP) ಅನ್ನು ನಮೂದಿಸಬೇಕಾಗಲಿದೆ. ಈ ಹೊಸ ನಿಯಮದಲ್ಲಿ ಗ್ರಾಹಕರು ಒಟಿಪಿ ಇಲ್ಲದೆ ನಗದು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ನಗದು ಹಿಂಪಡೆಯುವ ಸಮಯದಲ್ಲಿ, ಗ್ರಾಹಕರು ತಮ್ಮ ಅಧಿಕೃತ ಮೊಬೈಲ್ ಫೋನ್‌ನಲ್ಲಿ OTP ಅನ್ನು ಪಡೆಯಲಿದ್ದಾರೆ. ಅದನ್ನು ನಮೂದಿಸಿದ ನಂತರವೇ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.

ನಿಯಮ ಏನು ಗೊತ್ತಾ? (SBI Transaction Rule)
10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯುವಾಗ  ಈ  ನಿಯಮ ಅನ್ವಯಿಸಲಿದೆ ಎಂಬುದು ಇಲ್ಲಿ ಗಮನಾರ್ಹ. SBI ಗ್ರಾಹಕರಿಗೆ ಅವರ ಬ್ಯಾಂಕ್ ಖಾತೆಯಿಂದ ಹಣ ಪಡೆಯಲು ಅವರ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಹಾಗೂ ಅವರ ಡೆಬಿಟ್ ಕಾರ್ಡ್ ಪಿನ್ ನಮೂದಿಸಿದ ಬಳಿಕವೇ ಅವರು ATM ನಿಂದ ರೂ.10,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಅನುಮತಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.

ಪ್ರಕ್ರಿಯೆ
>> SBI ATM ನಿಂದ ಹಣವನ್ನು ಹಿಂಪಡೆಯಲು ನಿಮಗೆ OTP ಅಗತ್ಯವಿರುತ್ತದೆ.
>> ಇದಕ್ಕಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
>> ಈ OTP ನಾಲ್ಕು ಅಂಕಿಗಳ ಸಂಖ್ಯೆಯಾಗಿದ್ದು, ಇದನ್ನು ಗ್ರಾಹಕರಿಗೆ ಸಿಂಗಲ್ ವಹಿವಾಟಿಗೆ ನೀಡಲಾಗುವುದು.
>> ಒಂದೊಮ್ಮೆ ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿದ ನಂತರ, ATM ಪರದೆಯಲ್ಲಿ OTP ಅನ್ನು ನಮೂದಿಸಲು ನಿಮ್ಮನ್ನು ಕೇಳಲಾಗುವುದು.
>> ನಗದು ಹಿಂಪಡೆಯಲು ಈ ಪರದೆಯಲ್ಲಿ ಬ್ಯಾಂಕ್‌ನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ನೀವು ಸ್ವೀಕರಿಸಿದ OTP ಅನ್ನು ನಮೂದಿಸಬೇಕು.

ಇದರ ಅವಶ್ಯಕತೆ ಏನು?
ಗ್ರಾಹಕರನ್ನು ವಂಚನೆಯಿಂದ ರಕ್ಷಿಸಲು ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI ಭಾರತದಲ್ಲಿ 71,705 BC ಔಟ್‌ಲೆಟ್‌ಗಳೊಂದಿಗೆ 22,224 ಶಾಖೆಗಳು ಮತ್ತು 63,906 ATM/CDMಗಳ ದೊಡ್ಡ ಜಾಲವನ್ನು ಹೊಂದಿದೆ. ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುವ ಗ್ರಾಹಕರ ಸಂಖ್ಯೆ ಕ್ರಮೇಣವಾಗಿ ಸರಿಸುಮಾರು 9.1 ಕೋಟಿ  ಮತ್ತು 2 ಕೋಟಿಗಳಷ್ಟಾಗಿದೆ. 

Related Articles

Leave a Reply

Your email address will not be published. Required fields are marked *

Back to top button