ದೇಶ
ನೈಟ್ ಕರ್ಫ್ಯೂ ವೇಳೆ ಡ್ರಿಂಕ್ & ಲಾಂಗ್ ಡ್ರೈವ್: ಚಾಲಕನಿಗೆ ಬಿಸಿ ಮುಟ್ಟಿಸಿದ ಪೊಲೀಸರು..
ಬೆಂಗಳೂರು: ನೈಟ್ ಕರ್ಫ್ಯೂ ವೇಳೆ ಲಾಂಗ್ಡ್ರೈವ್ ಹೊರಟಿದ್ದವನ ಕಾರನ್ನು ಉಪ್ಪಾರಪೇಟೆ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುಜರಾತ್ ಮೂಲದ ರಾಶೀಷ್ ಕುಮಾರ್ ಎನ್ನುವವರು ಮದ್ಯಪಾನ ಮಾಡಿ ಹೆಚ್.ಎಸ್.ಆರ್ ಲೇಔಟ್ ನಿಂದ ಮೆಜೆಸ್ಟಿಕ್ಗೆ ಬಂದಿದ್ದು, ಅಲ್ಲಿಂದ ನಂದಿಬೆಟ್ಟಕ್ಕೆ ನೈಟ್ ಔಟ್ ಹೋಗಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.
ನೈಟ್ ಕರ್ಫ್ಯೂ ಹಿನ್ನಲೆಯಲ್ಲಿ ಮೆಜೆಸ್ಟಿಕ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಉಪ್ಪಾರಪೇಟೆ ಸಂಚಾರಿ ಪೊಲೀಸರು ಕಾರು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಡ್ರಂಕ್ & ಡ್ರೈವ್ ದೃಢವಾಗಿದ್ದು, ಪೊಲೀಸರು ಕಾರು ಸೀಜ್ ಮಾಡಿದ್ದಾರೆ.