ಸರ್ಕಾರ ಎಲ್ಲಾ ವಿಷಯಗಳ ಚರ್ಚೆಗೆ ಸಿದ್ಧ, ಉತ್ತರಿಸಲು ಬದ್ಧ: ಪ್ರಧಾನಿ ಮೋದಿ
ನವದೆಹಲಿ, ನ.29- ಸಂಸತ್‍ನಲ್ಲಿ ಫಲಪ್ರದ ಚರ್ಚೆಗಳಾಗಬೇಕು ಎಂದು ಪ್ರತಿಪಾದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಕೇಂದ್ರ ಸರ್ಕಾರ ಎಲ್ಲಾ ವಿಷಗಳ ಚರ್ಚೆಗೆ ಸಿದ್ದವಿದೆ. ಪ್ರತಿಪಕ್ಷಗಳು ಕೇಳುವ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ತಯಾರಿದ್ದೇವೆ. ಸಂಸತ್ ಫಲಪ್ರದವಾಗಿ ನಡೆಯಲಿದೆ ಎಂದು ಹೇಳಿದ್ದಾರೆ.
ಸಂಸತ್ ಅಧಿವೇಶದಲ್ಲಿ ಭಾಗವಹಿಸಲು ಆಗಮಿಸಿದ ಅವರು ಹೊರಗಡೆ ಸುದ್ದಿಗಾರರ ಬಳಿ ಬಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆಯಲ್ಲಿದೆ. ಈ ಸಂದರ್ಭಕ್ಕೆ ಪೂರಕವಾಗಿ ನಮ್ಮ ಸರ್ಕಾರ ಜನಹಿತ, ರಾಷ್ಟ್ರಹಿತ, ಸಾಮಾನ್ಯ ನಾಗರಿಕರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಅವುಗಳ ಮೇಲೆ ಚರ್ಚೆಯಾಗಬೇಕಿದೆ ಎಂದರು.
ದೇಶದ ಸ್ವಾತಂತ್ರ್ಯದ ಆಶಯಗಳನ್ನು ಈಡೇರಿಸಲು ಸಾಮಾನ್ಯ ನಾಗರಿಕರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಅದೇ ರೀತಿ ಸಂಸತ್‍ನಲ್ಲಿರುವ ಎಲ್ಲರೂ ತಮ್ಮ ಉತ್ತರದಾಯಿತ್ವವನ್ನು ಪೂರ್ಣಗೊಳಿಸಬೇಕು. ಭಾರತದ ಭವ್ಯ ಭವಿಷ್ಯಕ್ಕಾಗಿ ಫಲಪ್ರದ ಚರ್ಚೆಗಳು ನಡೆಯಬೇಕು. ಚಲಿಗಾಲದ ಈ ಅವೇಶನ ಮಹತ್ವದ್ದಾಗಿದೆ.
ಇಲ್ಲಿ ಎಲ್ಲಾ ರೀತಿಯ ಚರ್ಚೆಗಳಾಗಳಾಗಬೇಕು. ದೂರದೃಷ್ಠಿಯಲ್ಲಿ ದೇಶ ನಿರ್ಮಾಣದ ನಿಲ್ಲಿನಲ್ಲಿ ಸಂಸದರು ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದರು.ಇತ್ತೀಚೆಗಷ್ಟೆ ನಾವು ಸಂವಿಧಾನ ದಿನಾಚರಣೆಯನ್ನು ಆಚರಿಸಿದ್ದೇವೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಂಸತ್‍ಗೆ ಹಾಗೂ ಸ್ಪೀಕರ್ ಕುರ್ಚಿಗೆ ಗೌರವ ನೀಡಬೇಕು ಎಂದು ಕಳೆದ ಅವೇಶನದ ಕಹಿ ಘಟನೆಯನ್ನು ಪ್ರಸ್ತಾಪಿಸದೆ ಪ್ರಧಾನಿ ಹೇಳಿದರು.
ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಮೇಲೆ ಯಾವುದೇ ಸವಾಲನ್ನು ಎತ್ತಿದರೂ ಅದಕ್ಕೆ ಸಮಜಾಯಿಷಿ ನೀಡಲು ನಾವು ಸಿದ್ಧರಿದ್ದೇವೆ. ಸಂವಿಧಾನಿಕ ಹುದ್ದೆಗಳಿಗೆ ಗೌರವ ಸೂಚಿಸುವ ಮೂಲಕ ನಾವು ಮುಂದಿನ ಪೀಳಿಗೆಗೆ ಮಾದರಿಯಾಗಬೇಕಿದೆ ಎಂದು ಅವರು ಕರೆ ನೀಡಿದರು.
ಸಂಸತ್‍ನಲ್ಲಿ ನಡೆಯುವ ಉತ್ತಮ ಚರ್ಚೆಗಳು ಸರ್ಕಾರದ ಉತ್ತಮ ಆಡಳಿತಕ್ಕೆ ಮಾನದಂಡಗಳಾಗಲಿವೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಶಾಂತಿ ಹಾಗೂ ಅರ್ಥಪೂರ್ಣ ಚರ್ಚೆಗಳಾಗಬೇಕು ಎಂದು ಪ್ರಧಾನಿ ಪ್ರತಿಪಾದಿಸಿದ್ದರು.
ಕೊರೊನಾ ನಿಯಂತ್ರಣಕ್ಕೆ ನಮ್ಮ ಸರ್ಕಾರ ಉತ್ತಮ ಕೆಲಸ ಮಾಡಿದೆ. 100 ಕೋಟಿಗೂ ಅಕವಾದ ಡೋಸ್‍ಗಳನ್ನು ಉಚಿತವಾಗಿ ನೀಡಿದ್ದೇವೆ. ಈಗ ಹೊಸ ರೂಪಾಂತರಿ ಸೋಂಕಿನ ಸುದ್ದಿಗಳು ಕೇಳಿ ಬರುತ್ತಿವೆ. ಅದನ್ನು ನಿಯಂತ್ರಿಸಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ.
ಪ್ರತಿ ಹಂತದಲೂ ರೂಪಾಂತರಿಯ ಮೇಲೆ ನಿಗಾ ಇರಿಸಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಬಡವರು ಹಸಿದು ಇರಬಾರದು ಎಂಬ ಕಾರಣಕ್ಕೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ನೀಡುವ ಉಚಿತ ಅಕ್ಕಿ ಯೋಜನೆಯನ್ನು ಮುಂದಿನ ವರ್ಷದ ಮಾರ್ಚ್‍ವರೆಗೂ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು.