ಹಳೆ ಪ್ಲಾನ್ ಅನುಸರಿಸಿತಾ ಜೆಡಿಎಸ್ .?

ಒಂದು ಕಡೆ ಜೆಡಿಎಸ್ ಗೆಲುವು ಕುಮಾರಸ್ವಾಮಿ ಅವರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದ್ರೆ. ಮತ್ತೊಂದು ಕಡೆ ಸುಮಲತಾ ಅವರದ್ದು ಮಂಡ್ಯ ಜನರ ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಹಿಗಾಗಿ ಅಂದಿನ ಚುನಾವಣೆಯಲ್ಲಿ ತಂತ್ರ ಕುತಂತ್ರಗಳು ನಡೆದು ಸುಮಲತಾ ವಿರುದ್ದ ಮೂರು ಜನ ಡೂಪ್ಲಿಕೆಟ್ ಸುಮಲತಾರನ್ನ ಕಣಕ್ಕಿಳಿಸಲಾಗಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣ ಕೂಡ ಆಗಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇಳಿ ಬಂದ ಡೂಪ್ಲಿಕೆಟ್ ಸುಮಲತಾ ರೀತಿಯಲ್ಲೆ ಈ ಬಾರಿ ಎಂಎಲ್‌ಸಿ ಚುನಾವಣೆಯಲ್ಲಿ ಕೂಡ ಜೆಡಿಎಸ್ ಪಕ್ಷೇತರ ಅಭ್ಯರ್ಥಿಯೊಬ್ಭರನ್ನ ಕಣಕ್ಕಿಳಿಸಿದ್ದು, ಅದು ಬಿಜೆಪಿ ಅಭ್ಯರ್ಥಿಗೆ ಟಕ್ಕರ್ ಕೊಡಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಆರೋಪಿಸಿರುವ ಸಚಿವ ನಾರಾಯಣಗೌಡರು (Minister Narayangowda), ಮಂಡ್ಯ ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ಹೆಸರಿನ ಮತ್ತೊಬ್ಬ ಮಂಜುವನ್ನ ಜೆಡಿಎಸ್ ನವರು ತಂದು ನಿಲ್ಲಿಸಿದ್ದಾರೆ. ಇದು ಜೆಡಿಎಸ್ ಪಕ್ಷದ ಕುತಂತ್ರವಾಗಿದೆ. ಆದ್ರೆ ಈ ಕುತಂತ್ರಕ್ಕೆ ನಮ್ಮ ಮತದಾರರು ತಕ್ಕ ಉತ್ತರ ನೀಡ್ತಾರೆ ಅಂತ ನಾರಾಯಣಗೌಡ ಕಿಡಿಕಾರಿದ್ದಾರೆ.
ಮಂಡ್ಯ ಬಿಜೆಪಿ ಅಭ್ಯರ್ಥಿ ಹೇಳಿದ್ದೇನು?
ಇನ್ನು ಮಂಡ್ಯ ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು, ಇದು ಎದುರಾಳಿಗಳ ಕುತಂತ್ರ, ಕುತಂತ್ರಕ್ಕೆ ಬೆಲೆ ಸಿಗಲ್ಲ. ನಾನು ಮತದಾರರ ಮನೆಗಳಿಗೆ ನೇರ ಪರಿಚಯ ಇದ್ದೇನೆ. ಹಿಗಾಗಿ ಅವರ ಗಿಮಿಕ್ ನೋಡಿದ್ರೆ ಬಿಜೆಪಿ ಮೇಲಿನ ಅವರಿಗಿರುವ ಭಯ ಗೊತ್ತಗುತ್ತದೆ. ಅಲ್ಲದೆ ಮತದಾರರು ಬುದ್ದಿವಂತರು, ಇಂತ ಕುತಂತ್ರಗಳಿಗೆ ಬಲಿಯಾಗಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
