ಇತ್ತೀಚಿನ ಸುದ್ದಿ
ಕದಂಬ ಕನ್ನಡ ಸೇನೆ ವತಿಯಿಂದ ನಂಜುಂಡಯ್ಯ ಅವರಿಗೆ ಸನ್ಮಾನ

ಚಾಮರಾಜನಗರ: ಚಾಮರಾಜನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ನಂಜುಂಡಯ್ಯ ಅವರಿಗೆ ಕದಂಬ ಕನ್ನಡ ಸೇನೆಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕದಂಬ ಕನ್ನಡ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕದಂಬ ನಾ ಅಂಬರೀಶ್, ಡಾ.ಬಿ.ಆರ್.ಅಂಬೇಡ್ಕರ್ ಕ್ರಾಂತಿ ಸೇನೆ ಮಾಧ್ಯಮ ವಿಭಾಗದ ರಾಜ್ಯಾಧ್ಯಕ್ಷ ಇರಸವಾಡಿ ಸಿದ್ದಪ್ಪಾಜಿ, ಪತ್ರಕರ್ತರಾದ ಮಣಿಕಂಠನಾಯಕ, ಪುಟ್ಟಸ್ವಾಮಿ, ಮುಖಂಡರಾದ ಲಕ್ಷ್ಮಣ, ಚಂದ್ರು ಮನೋಜ್, ಮಹಿಳಾ ಕಲಾವಿದರು ಹಾಗೂ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ವರದಿ : ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ