ಸರ್ಕಾರಿ ಯೋಜನೆಗಳ ಬಗ್ಗೆ ಸುಳ್ಳು ಮಾಹಿತಿ ಹಂಚುವ Youtube ಚಾನೆಲ್ಗಳ ಬಗ್ಗೆ ಎಚ್ಚರ! ಎಚ್ಚರ!
ಕೇಂದ್ರ ಸರ್ಕಾರದ ಹೆಸರಿನಲ್ಲಿ ನಕಲಿ ಮಾಹಿತಿ (Fake Information) ನೀಡುತ್ತಿರುವ ಯೂಟ್ಯೂಬ್ ಚಾನೆಲ್ಗಳ ( Youtube Channel) ಬಗ್ಗೆ ಜನಸಾಮಾನ್ಯರು ಎಚ್ಚರದಿಂದಿರಿ ಎಂದು ಕೇಂದ್ರ ಸರ್ಕಾರದ (Central Government) ಪತ್ರಿಕಾ ಘಟಕ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. 50 ಸೆಕೆಂಡುಗಳ ವಿಡಿಯೋದಲ್ಲಿ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ (PIB) ಫ್ಯಾಕ್ಟ್ ಚೆಕ್ ಯುನಿಟ್ ಜನ ಸಾಮಾನ್ಯರಿಗೆ ಎಚ್ಚರಿಕೆ ನೀಡಿದೆ.
YouTube ನಲ್ಲಿ ಸರ್ಕಾರದ ಹೆಸರನ್ನು ಬಳಸಿಕೊಂಡು ಕೆಲವು ನಕಲಿ ಯೋಜನೆಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಾರೆ. ಈ ಬಗ್ಗೆ ಎಚ್ಚರದಿಂದಿರಿ. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಅನೇಕ ಯೂಟ್ಯೂಬ್ ಚಾನೆಲ್ಗಳಲ್ಲಿ ಹೇಳಿಕೊಳ್ಳಲಾಗುತ್ತದೆ, ಆದರೆ ಅವುಗಳು ಜನರನ್ನು ಯಾಮಾರಿಸುವ ತಂತ್ರಗಾರಿಕೆ ಹೊಂದಿದೆ.
ಯೂಟ್ಯೂಬ್ ಚಾನೆಲ್ಗಳಲ್ಲಿ ಇಂತಹ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರೆ, ವಾಸ್ತವದಲ್ಲಿ ಅದು ನಡೆಯುವುದೇ ಇಲ್ಲ ಎಂದು ಪಿಐಬಿಯ ಫ್ಯಾಕ್ಟ್ಚೆಕ್ ಘಟಕ ಹೇಳಿದೆ. ‘ಪ್ರಧಾನ ಮಂತ್ರಿ ಕನ್ಯಾ ಸಮ್ಮಾನ್ ಯೋಜನೆ’ ಎಂದು ಹೇಳಿರುವ ಉದಾಹರಣೆಯನ್ನು ಗಮನಿಸಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರವು ಎಲ್ಲಾ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 2500 ರೂಪಾಯಿಗಳನ್ನು ನೇರವಾಗಿ ಬ್ಯಾಂಕ್ ಖಾತೆಗೆ ನೀಡುತ್ತಿದೆ ಎಂದು ನಕಲಿ ಯ್ಯೂಟೂಬ್ ಚಾನ್ಲ್ ಮಾಹಿತಿ ಹಬ್ಬಿಸುತ್ತಿವೆ. ಅಂತಹ ಮಾಹಿತಿಯಿಂದ ಜಾಗರೂಕರಾಗಿರಬೇಕು ಎಂದು ಪಿಐಬಿ ಹೇಳಿದೆ.
ವಂಚಕರು ತಪ್ಪು ಉದ್ದೇಶದಿಂದ ಇದನ್ನು ಮಾಡುತ್ತಾರೆ. ಪಿಐಬಿ ಇನ್ನೊಂದು ಉದಾಹರಣೆಯನ್ನೂ ನೀಡಿದೆ- ‘ಮಹಿಳಾ ಸ್ವಯಂ ಉದ್ಯೋಗ ಯೋಜನೆ- ಕೇಂದ್ರ ಸರ್ಕಾರವು ಈ ಯೋಜನೆಯಡಿ ಎಲ್ಲಾ ಮಹಿಳೆಯರ ಖಾತೆಯಲ್ಲಿ 1 ಲಕ್ಷ ರೂ.ನಗದು ಸಿಗುತ್ತದೆ ಎಂದಿದೆ. ಆದರೆ ಅಂತಹ ಯಾವುದೇ ಮಾಹಿತಿಯನ್ನು ಅಧಿಕಾರಿಗಳ ಮೂಲಕ ಮೊದಲು ಖಚಿತಪಡಿಸಿಕೊಳ್ಳಬೇಕು ಎಂದು ಪಿಐಬಿ ಹೇಳಿದೆ.