ನೀಲಕಂಠೇಶ್ವರ ದೇವರ ಭಾವಚಿತ್ರ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ.

ಮಸ್ಕಿ: ಪಟ್ಟಣದ ಕುರುಹಿನ ಶೆಟ್ಟಿ ಸಮಾಜದ ವತಿಯಿಂದ
ಶ್ರೀ ನೀಲಕಂಠೇಶ್ವರ ದೇವಸ್ಥಾನದ 51ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾವಚಿತ್ರ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ದೇವರಿಗೆ ಬೆಳಗ್ಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ
ನೀಲಕಂಠೇಶ್ವರ ಭಾವಚಿತ್ರವನ್ನು ಹಾಗೂ
ದೇವರ ಉತ್ಸವ ಪಲ್ಲಕ್ಕಿ ಯನ್ನು
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳ ದೊಂದಿಗೆ
ಮೆರವಣಿಗೆ ಮೂಲಕ ಪುನಃ ದೇವಸ್ಥಾನಕ್ಕೆ ತರಲಾಯಿತು.
ಈ ವೇಳೆ, ಕುರುಹಿನ ಶೆಟ್ಟಿ ಸಮಾಜ ಅಧ್ಯಕ್ಷ ಈಶಪ್ಪ ಗಂಗಾವತಿ, ಉಪಾಧ್ಯಕ್ಷ ಬಸವರಾಜ ಕಲ್ಲೂರ್, ಅಮರೇಶ ಜೋತಾನ್, ಬಸವರಾಜ್ ಕಲ್ಲೂರ್ ರಾಚಪ್ಪ ಜೋತಾನ್, ಬಸವರಾಜ್ ದಿನ್ನಿ, ವಿರೂಪಾಕ್ಷಪ್ಪ ಪರಕಾಳಿ, ಚಂದ್ರಶೇಖರ ದಿನ್ನಿ, ಜಗದೀಶ್ ಗಡದ್, ಪಂಪಣ್ಣ ಮಾನ್ವಿ, ನಾಗರಾಜ್ ಕೆಂಭಾವಿ, ಚೆನ್ನವೀರ ಜೋತನ್,ಮಂಜುನಾಥ ಗಡದ್,ಪೂರ್ಣಚಂದ್ರ,ಚಂದ್ರಶೇಖರ ಜಗರಕಲ್ಲ್,ಸೇರಿದಂತೆ ನೇಕಾರ ಸಮಾಜದ ವಿವಿಧ ಮುಖಂಡರು,ಮಹಿಳೆಯರು,ಇದ್ದರೂ.
ವರದಿ : ಸಿದ್ದಯ್ಯ ಸ್ವಾಮಿ ಹೆಸರೂರು tv8kannada ಮಸ್ಕಿ