ದೇಶ
ನಂಬರ್ ಪ್ಲೇಟ್ ಇಲ್ಲದ ಓವೈಸಿ ಕಾರು, ಚಾಲಕನಿಗೆ ದಂಡ
ಮುಂಬೈ, ನ.24- ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರನ್ನು ಮಹಾರಾಷ್ಟ್ರದ ಸೊಲ್ಲಾಪುರ ನಗರಕ್ಕೆ ಕರೆದೊಯ್ಯುತ್ತಿದ್ದ ಸ್ವಂತ ಎಸ್‍ಯುವಿ ವಾಹನ ನಂಬರ್ ಪ್ಲೇಟ್ ಹೊಂದಿರದಿದ್ದ ಕಾರಣ ಕಾರಿನ ಚಾಲಕನಿಗೆ ಪೊಲೀಸರು 200 ರೂ. ದಂಡ ವಿಸಿದ್ದಾರೆ ಎಂದು ಓರ್ವ ಅಧಿಕಾರಿ ತಿಳಿಸಿದ್ದಾರೆ.
ಘಟನೆ ಮಂಗಳವಾರ ಸಂಭವಿಸಿದೆ. ನೆರೆಯ ತೆಲಂಗಾಣ ರಾಜ್ಯದ ಹೈದರಾಬಾದ್ ಲೋಕಸಭಾ ಕ್ಷೇತ್ರ ಪ್ರತಿನಿಸುವ ಓವೈಸಿ ಸೊಲ್ಲಾಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಳ್ಗೊಳ್ಳುವ ಸಲುವಾಗಿ ಪ್ರಯಾಣಿಸುತ್ತಿದ್ದರು. ವಾಹನದ ವಿರುದ್ಧ ಕ್ರಮ ಕೈಗೊಂಡ ಪೊಲೀಸ್ ಸಿಬ್ಬಂದಿಗೆ ಅನಂತರ ಸ್ಥಳೀಯ ಪೊಲೀಸ್ ಅಧಿಕಾರಿಗಳು 5000 ರೂ.? ನಗದು ಬಹುಮಾನ ನೀಡಿದ್ದಾರೆ ಎಂದು ಅಧಿಕಾರಿ ವಿವರಿಸಿದ್ದಾರೆ.