ಭತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿ ಭಸ್ಮ ರೈತ ಕಂಗಲೂ

ಹೆಚ್ .ಡಿ.ಕೋಟೆ: ತಾಲೋಕಿನ ಹೆಚ್ ಮಟಕೆರೆಯಲ್ಲಿ ಘಟನೆ ದಿನಾಂಕ ಜನವರಿ 26ರಂದು ಸಮಯ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ಹೆಚ್. ಮಟಕೆರೆ ಗ್ರಾಮದ ರಾಮನಾಯಕ್ ಕೋಂ ಲೇಟ್ ಮರಿ ನಾಯಕ್ ರವರಿಗೆ ಸೇರಿದ ಎರಡು ದೊಡ್ಡದಾದ ಭತ್ತದ ಹುಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಬೂದಿಯಾಗಿ ಹೋಗಿರುತ್ತದೆ.

ಜೆಸಿಬಿ ವಾಹನವನ್ನು ಕರೆಸಿ ಸತತ ಆರು ಗಂಟೆಗಳ ಕಾಲ ಅಗ್ನಿಶಾಮಕ ಸಿಬ್ಬಂದಿಯವರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟು ಬೆಂಕಿ ನಂದಿಸಿದರು ಹುಲ್ಲಿನ ಮೆದೆ ಕಳೆದುಕೊಂಡ ರೈತನ ಕಣ್ಣೀರು ಕೋಡಿಯಾಗಿ ಹರಿಯುವುದನ್ನು ಕಂಡು ಜನರೂ ಸಂಕಟ ಪಟ್ಟರು ಹುಲ್ಲನ್ನು ಕಳೆದುಕೊಂಡ ರೈತನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಆತ ಚೇತರಿಸಿಕೊಳ್ಳಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು
ಕಾರ್ಯಚರಣೆಯಲ್ಲಿ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾದ ಎಂಜಿ ಸೋಮಣ್ಣ, ಸಿಬ್ಬಂದಿಯವರಾದ ಅಶೋಕ್,ರವಿಪ್ರಸಾದ್, ಮುನಿಸಿದ್ದ ನಾಯಕ, ಸಂಗಮೇಶ್ ಭಾಗಿಯಾಗಿದ್ದರು.
ವರದಿ : ಮಲಾರ ಮಹದೇವಸ್ವಾಮಿ tv8kannada ಹೆಚ್ ಡಿ ಕೋಟೆ