ಇತ್ತೀಚಿನ ಸುದ್ದಿ

ಶಾಸಕ ಯತ್ನಾಳರನ್ನು ಮರಳಿ ಬಿಜೆಪಿಗೆ ಕರೆ ತನ್ನಿ ರಾಜ್ಯ ಬಿಜೆಪಿ ನಾಯಕರಿಗೆ ಪ್ರಮೋದ ಮುತಾಲಿಕ್ ಒತ್ತಾಯ

ರಾಯಚೂರು (ಮುದಗಲ್): ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಒತ್ತಾಯಿಸಿದರು.

ಪಟ್ಟಣದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಶಾಸಕಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದು ಸರಿಯಾದ ಕ್ರಮವಲ್ಲ.

ಪಕ್ಷ ತಪ್ಪು ದಾರಿ ಕಡೆ ನಡೆಯುತ್ತಿದೆ. ಅವರನ್ನು ಕೂಡಲೇ ಬಿಜೆಪಿಗೆ ಮರುಸೇರ್ಪಡೆ ಮಾಡಿಕೊಳ್ಳಬೇಕು‌’ ಎಂದರು.

‌’ಕೇಂದ್ರ ಸರ್ಕಾರದ ವಕ್ಫ್‌ ತಿದ್ದುಪಡಿ ಕಾಯ್ದೆಗೆ ಮುಸ್ಲಿಮರು ವಿರೋಧ ಮಾಡುವುದು ಸರಿಯಲ್ಲ. ಮುಸ್ಲಿಂ ಸಮಾಜದ ಸುನ್ನಿ ಪಂಗಡದ ಅಧೀನದಲ್ಲಿದ್ದ ವಕ್ಪ್ ಬೋರ್ಡ್‌ನ 29 ಸಾವಿರ ಎಕರೆ ಆಸ್ತಿಯನ್ನು ಬಡವರಿಗೆ ಹಂಚದೇ ಶ್ರೀಮಂತರಿಗೆ ನೀಡಿ ವಂಚಿಸಲಾಗಿತ್ತು. ಇದರಿಂದ ಕೇಂದ್ರ ಸರ್ಕಾರ ಸುನ್ನಿ ಮತ್ತು ಶಿಯಾ ಸಮಾಜದ ಬಡವರಿಗೆ ಕಾನೂನು ಪ್ರಕಾರ ಹಂಚಿಕೆಯಾಗಲಿ ಎನ್ನುವ ಉದ್ದೇಶದಿಂದ ಈ ತಿದ್ದುಪಡಿ ಕಾಯ್ದೆ ತರಲಾಗಿದೆ’ ಎಂದು ಪ್ರತಿಪಾದಿಸಿದರು.

‘ಸರ್ಕಾರಗಳು ಹಿಂದೂ ಸಮಾಜವನ್ನು ಜಾತೀಕರಣಗೊಳಿಸಿ, ಸಮಾಜ ಒಡೆಯುವ ಕುತಂತ್ರ ಮಾಡುತ್ತಿವೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್ಸಿ, ಎಸ್ಸಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ’ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುರಾಜ ದೇಶಪಾಂಡೆ, ಮಹಾಂತೇಶ ಅಕ್ಷತಿ, ಹೇಮಂತ ನಾಗಲಾಪುರ ಸೇರಿದಂತೆ ಆರ್.ಎಸ್.ಎಸ್ ಕಾರ್ಯಕರ್ತರು ಇದ್ದರು.

ವರದಿ : ಮುಸ್ತಾಫಾ tv8kannada ಲಿಂಗಸುಗೂರು

Related Articles

Leave a Reply

Your email address will not be published. Required fields are marked *

Back to top button