ಎಸ್.ಪಿ.ಬಾಲಸುಬ್ರಮಣ್ಯಂ ಸಂಘದಿಂದ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

ಚಾಮರಾಜನಗರ: ಫೆ.10; ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಸಂಘದ ಸದಸ್ಯರಾದ ಬಂಗಾರು ಅವರ ಹುಟ್ಟು ಹಬ್ಬದ ಪ್ರಯುಕ್ತ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಎದುರುಗಡೆ ಇರುವ, ಎ.ಜೆ. ಕಾಲೋನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು ಹಾಗೂ ಸಿಹಿ ವಿತರಿಸಲಾಯಿತು.

ಇದೇ ವೇಳೆ ಸಾಹಿತಿ ಸಿ.ಶಂಕರ್ ಅಂಕನಶೆಟ್ಟಿಪುರ ಮಾತನಾಡಿ, ಸಂಘದ ವತಿಯಿಂದ ಇಂತಹ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಇದೇ ರೀತಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವಂತಹ ಸಂಘಕ್ಕೆ ಶಕ್ತಿ ನೀಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಚ್.ಎಂ.ಶಿವಣ್ಣ ಮಂಗಲ ಹೊಸೂರು, ಖಜಾಂಚಿ ಸಿ.ಡಿ.ಪ್ರಕಾಶ್, ಜಂಟಿ ಕಾರ್ಯದರ್ಶಿ ಜೋಸೆಫ್.ಎನ್, ಸದಸ್ಯರಾದ ವಸಂತ ಬಂಗಾರು, ಮುಖ್ಯ ಶಿಕ್ಷಕರಾದ ಲೀಲಾವತಿ ನಿರ್ಮಲ,ಮೈತ್ರಿ, ಮಹಾಂತೇಶ್, ಮೌನ್ವೀತ್ ಹಾಜರಿದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ