Airbag in Scooter-Bike: ವಾಹನ ಚಲಾಯಿಸವಾಗ ಸುರಕ್ಷತೆ ಅವಶ್ಯಕ. ಹಾಗಾಗಿ ಕಾರುಗಳಲ್ಲಿ ಏರ್‌ಬ್ಯಾಗ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗಾಗಿ ನೂತನ ನಾಲ್ಕುಚಕ್ರ (4 wheel) ವಾಹನದಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ಏರ್ಬ್ಯಾಗ್ಗಳನ್ನು ಜೋಡಿಸಲಾಗುತ್ತಿದೆ. ಈಗಾಗಲೇ ಹಲವಾರು ಕಾರುಗಳನ್ನು ಏರ್ಬ್ಯಾಗ್ಗಳನ್ನು ನೋಡಿರುತ್ತೀರಿ. ಇದರಿಂದ ಅನೇಕ ಸಾವು-ನೋವುಗಳು ತಪ್ಪಿದೆ ಮತ್ತು ಅಪಘಾತ ಸಮಯದಲ್ಲಿ ಜೀವ ಉಳಿದ ಹಲವರು ಘಟನೆಗಳಿಗೆ ಏರ್‌ಬ್ಯಾಗ್ ಸಾಕ್ಷಿಯಾಗಿದ್ದನ್ನು ಕಾಣಬಹುದಾಗಿದೆ. ಆದರೆ ದ್ವಿಚಕ್ರ ವಾಹನದಲ್ಲಿ ಏರ್ ಬ್ಯಾಗ್ ಬರುದಿಲ್ಲವೇ? ಸ್ಕೂಟರ್ (Scooter), ಬೈಕ್ನಲ್ಲಿ (Bike) ಏರ್‌ಬ್ಯಾಗ್ ನೀಡಿದರೆ ಹೇಗಿರಬಹುದು? ಎಂಬ ಪ್ರಶ್ನೆ ಬಹುತೇಕರನ್ನು ಕಾಡಿರಬಹುದು. ಆದರೆ ಅದಕ್ಕೆ ಉತ್ತರವೆಂಬಂತೆ ಇನ್ಮುಂದೆ ದ್ವಿಚಕ್ರ ವಾಹನದಲ್ಲೂ ಏರ್‌ಬ್ಯಾಗ್ ಬರುತ್ತಂತೆ!.

Piaggio ಆಟೋ ಕಂಪನಿಯು ದ್ವಿಚಕ್ರ ವಾಹನ ಚಾಲಕರ ಸುರಕ್ಷತೆಗಾಗಿ ಸ್ಕೂಟರ್ ಮತ್ತು ಬೈಕ್‌ಗಳಲ್ಲಿ ಏರ್‌ಬ್ಯಾಗ್ ವೈಶಿಷ್ಟ್ಯಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ. ಇದಕ್ಕಾಗಿ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಗಳನ್ನು ಒದಗಿಸುವ ಕಂಪನಿಯಾದ ಆಟೋಲಿವ್ (ಆಟೋಲಿವ್) ನೊಂದಿಗೆ ಕಂಪನಿಯು ಪಾಲುದಾರಿಕೆಯನ್ನು ಹೊಂದಿದೆ. ಈ ವ್ಯವಸ್ಥೆಯಿಂದ ಷ್ಟು ಪ್ರಯೋಜನ ಸಿಗಲಿದೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೋಡೋಣ..
ಏರ್‌ಬ್ಯಾಗ್ ಸೆಕೆಂಡುಗಳಲ್ಲಿ ತೆರೆಯುತ್ತದೆ
ವರದಿಯ ಪ್ರಕಾರ, ಎರಡೂ ಕಂಪನಿಗಳು ಈ ತಂತ್ರಜ್ಞಾನದಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ದ್ವಿಚಕ್ರ ವಾಹನದ ಚೌಕಟ್ಟಿನಲ್ಲಿ ಏರ್‌ಬ್ಯಾಗ್ ಅಳವಡಿಸಲಾಗುವುದು. ಅಪಘಾತದ ಸಂದರ್ಭದಲ್ಲಿ, ಈ ಏರ್‌ಬ್ಯಾಗ್ ಸೆಕೆಂಡುಗಳಲ್ಲಿ ತೆರೆಯುತ್ತದೆ ಮತ್ತು ಅದರ ಪ್ರಯಾಣಿಕರು ಇದರಿಂದ ಸಾಕಷ್ಟು ಸುರಕ್ಷತೆಯನ್ನು ಪಡೆಯುತ್ತಾರೆ.