Southern Railway Recruitment 2021: ದಕ್ಷಿಣ ರೈಲ್ವೆ(Southern Railway)ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 21 ಕ್ರೀಡಾಪಟು(Sports Persons)ಗಳ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಪಿಯುಸಿ ಹಾಗೂ ಯಾವುದೇ ಪದವಿ ಆಗಿರುವ ಅಭ್ಯರ್ಥಿಗಳು ಸ್ಪೋರ್ಟ್ಸ್ ಪರ್ಸನ್(Sports Person) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಅಕ್ಟೋಬರ್ 30ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 30, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಫ್ಲೈನ್(Offline)(ಪೋಸ್ಟ್ ಮುಖಾಂತರ) ಮೂಲಕ ಅರ್ಹರು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ದಕ್ಷಿಣ ರೈಲ್ವೆ |
ಹುದ್ದೆಯ ಹೆಸರು | ಸ್ಪೋರ್ಟ್ಸ್ ಆಫೀಸರ್ |
ಒಟ್ಟು ಹುದ್ದೆಗಳು | 21 |
ವಿದ್ಯಾರ್ಹತೆ | ಯಾವುದೇ ಪದವಿ, 12ನೇ ತರಗತಿ |
ಉದ್ಯೋಗದ ಸ್ಥಳ | ಚೆನ್ನೈ |
ವೇತನ | ನಿಯಮಾನುಸಾರ |
ಅರ್ಜಿ ಸಲ್ಲಿಸುವ ವಿಧಾನ | ಆಫ್ಲೈನ್ |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ | 30/10/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 30/11/2021 |
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30/10/2021
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/11/2021
ಅರ್ಜಿ ಶುಲ್ಕ:
ಅಭ್ಯರ್ಥಿಗಳು ಡಿಡಿ(ಡಿಮ್ಯಾಂಡ್ ಡ್ರಾಫ್ಟ್) ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.
- ಸಾಮಾನ್ಯ/ OBC/ EWS ಅಭ್ಯರ್ಥಿಗಳಿಗೆ 500ರೂ. ಅರ್ಜಿ ಶುಲ್ಕ
- SC/ ST/ ಮಹಿಳಾ/ PWD/ Minortiy Community ಅಭ್ಯರ್ಥಿಗಳಿಗೆ- 250 ರೂ. ಅರ್ಜಿ ಶುಲ್ಕ
ಕ್ರೀಡೆಗೆ ಅನುಗುಣವಾಗಿ ದಕ್ಷಿಣ ರೈಲ್ವೆ ನೇಮಕಾತಿ 2021 ಹುದ್ದೆಯ ವಿವರಗಳು
ದಕ್ಷಿಣ ರೈಲ್ವೆಯು ಈ ಕೆಳಕಂಡ ಹುದ್ದೆಗಳಿಗೆ ಕ್ರೀಡಾಪಟುಗಳನ್ನು ನೇಮಿಸಿಕೊಳ್ಳುತ್ತದೆ.
ಅಥ್ಲೆಟಿಕ್ಸ್ (ಪುರುಷರು)- 2
ಅಥ್ಲೆಟಿಕ್ಸ್ (ಮಹಿಳೆಯರು) -2
ಬಾಸ್ಕೆಟ್ಬಾಲ್(ಪುರುಷರು) -4
ಬಾಸ್ಕೆಟ್ಬಾಲ್(ಮಹಿಳೆಯರು) -3
ಕ್ರಿಕೆಟ್(ಮಹಿಳೆಯರು) -3
ಪವರ್ಲಿಫ್ಟಿಂಗ್ (ಪುರುಷರು)- 1
ಸ್ವಿಮ್ಮಿಂಗ್ (ಪುರುಷರು) -1
ವಾಲಿಬಾಲ್(ಪುರುಷರು- 2
ವಾಲಿಬಾಲ್(ಮಹಿಳೆಯರು) -3