ರಾಜ್ಯಸುದ್ದಿ

ಟಾಯ್ಲೆಟ್​ ನೀರನ್ನು ಕುಡಿಯಲು ಬಳಸುತ್ತಿದ್ದ ಆಸ್ಪತ್ರೆ: 30 ವರ್ಷಗಳ ಬಳಿಕ ಗುಟ್ಟು ರಟ್ಟು..!

ಸಾರ್ವಜನಿಕರು ತಾವು ಅನಾರೋಗ್ಯ(Illness)ದಿಂದ ಬಳಲುತ್ತಿರುವಾಗ ಆಸ್ಪತ್ರೆ(Hospitals)ಗಳನ್ನೇ ಹುಡುಕಿಕೊಂಡು ಬರುತ್ತಾರೆ. ಈ ನಿಟ್ಟಿನಲ್ಲಿ ಆಸ್ಪತ್ರೆಗೆ ಬಂದಂತಹ ರೋಗಿ(Patients)ಗಳಿಗೆ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಒದಗಿಸುವುದು ಇವರ ಆದ್ಯ ಕರ್ತವ್ಯವಾಗಿರುತ್ತದೆ. ದೇವಸ್ಥಾನ(Temples)ಗಳಿಂದ ಹೆಚ್ಚು ಪ್ರಾರ್ಥನೆ(Prayer) ಆಸ್ಪತ್ರೆಯಲ್ಲಿ ಮಾಡುತ್ತಾರೆ. ಆಸ್ಪತ್ರೆಗೆ ಬರುವ ಪ್ರತಿಯೊಬ್ಬರು ಹುಷಾರಾಗಿ ಇಲ್ಲಿಂದ ಹೋಗಬೇಕೆಂದು ಬಂದಿರುತ್ತಾರೆ. ರೋಗಿಗಳಿಗೆ ಅವರ ರೋಗವು ಬೇಗನೆ ವಾಸಿಯಾಗಲು ಈ ಆಸ್ಪತ್ರೆಗಳಲ್ಲಿರುವ ಮೂಲಭೂತ ಸೌಕರ್ಯಗಳು ಸಹ ಪ್ರಮುಖವಾದ ಪಾತ್ರ ವಹಿಸುತ್ತವೆ ಎಂದರೆ ತಪ್ಪಾಗುವುದಿಲ್ಲ.

ಆದರೆ ಇಲ್ಲೊಂದು ಆಸ್ಪತ್ರೆ ಇದೆ, ಇದು ಏನು ಎಡವಟ್ಟು ಮಾಡಿದೆ ಎಂದು ನೀವೇ ಓದಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ. ಈ ಆಸ್ಪತ್ರೆ ಇರುವುದು ಜಪಾನ್‌(Japan)ನಲ್ಲಿ ಮತ್ತು ಆಸ್ಪತ್ರೆ ಈ  ಎಡವಟ್ಟನ್ನು ಎಷ್ಟು ವರ್ಷಗಳಿಂದ ಮಾಡುತ್ತಾ ಬಂದಿದೆ ನೀವೇ ನೋಡಿ. ಈ ರೀತಿಯ ಬೇಜವಾಬ್ದಾರಿ(Careless)ಯಿಂದ ಅದೆಷ್ಟು ರೋಗಿಗಳಿಗೆ ತೊಂದರೆಯಾಗಿದೆಯೋ ಆ ದೇವರೆ ಬಲ್ಲ.
ಟಾಯ್ಲೆಟ್​ ನೀರು ಕುಡಿಯಲು ಬಳಕೆ!

ಯೋಮಿಯುರಿ ಶಿಂಬುನ್‌ನ ವರದಿಯ ಪ್ರಕಾರ, ಜಪಾನಿನ ಆಸ್ಪತ್ರೆಯೊಂದು ಗೊತ್ತಿರಲಾರದೇ ಶೌಚಾಲಯಗಳಿಗೆ ಮೀಸಲಾದ ಸಂಸ್ಕರಿಸಿದ ನೀರನ್ನು ಸುಮಾರು 30 ವರ್ಷಗಳ ಕಾಲ ಕುಡಿಯುವ ನೀರಿನಂತೆ ಬಳಸಿದೆ. ಕಳೆದ ತಿಂಗಳು ಈ ವಿಲಕ್ಷಣ ಘಟನೆ ಬೆಳಕಿಗೆ ಬಂದಿದ್ದು, ಇದು ಒಸಾಕಾ ವಿಶ್ವವಿದ್ಯಾಲಯದ ಸಂಶೋಧಕ ಮತ್ತು ಆಸ್ಪತ್ರೆಯ ಉಪಾಧ್ಯಕ್ಷರಾದ ಕಜುಹಿಕೊ ನಕತಾನಿ ಮುಕ್ತವಾಗಿ ಸಾರ್ವಜನಿಕರಲ್ಲಿ ಕ್ಷಮೆ ಕೇಳಲು ಕಾರಣವಾಯಿತು. ಜಪಾನಿನ ಸುದ್ದಿ ಮಾಧ್ಯಮದ ಪ್ರಕಾರ, ಆಸ್ಪತ್ರೆಯು ಒಸಾಕಾ ವಿಶ್ವವಿದ್ಯಾಲಯದಲ್ಲಿದ್ದು, ಕ್ಲಿನಿಕ್ ಕಟ್ಟಡವು ವೈದ್ಯಕೀಯ ಬೋಧಕ ವರ್ಗಕ್ಕೆ ಜೋಡಿಸಲ್ಪಟ್ಟಿದೆ.

Related Articles

Leave a Reply

Your email address will not be published. Required fields are marked *

Back to top button