ಬಾಗಲಕೋಟೆ: ಸಚಿವ ಗೋವಿಂದ್ ಕಾರಜೋಳ (Minister Govind Karjol) ಮುಂದಿನ ಎರಡ್ಮೂರು ವರ್ಷಗಳಲ್ಲಿ ಕಾಂಗ್ರೆಸ್ (Congress) ಹೇಗಿರುತ್ತೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಯುಕೆಪಿ ಯೋಜನೆ (Upper Krishna Project) ಪೂರ್ಣ ಮಾಡಿ ನೀರು ಕೊಡಿಸುವೆ ಎಂದು ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಹೇಳಿದ್ದರು. 6336 ಕೋಟಿ ರೂಪಾಯಿ ಯುಕೆಪಿ ೩ನೇ ಹಂತದ ಕಾಮಗಾರಿಗೆ ಕಾಂಗ್ರೆಸ್ ಕೊಟ್ಟಿಲ್ಲ. ಕಾಂಗ್ರೆಸ್ ನವರು ಯುಕೆಪಿ ೩ನೇ ಹಂತದ ಕಾಮಗಾರಿ ಏನು ಮಾಡಿಲ್ಲ. ನಾವು 2012-13 ರಲ್ಲಿ ಯುಕೆಪಿ ೩ನೇ ಹಂತದ ಆರ್ ಆ್ಯಂಡ್ ಆರ್ ಅಭಿವೃದ್ಧಿಗೆ 17 ಸಾವಿರ 207 ಕೋಟಿ ರೂ ಅನುಮೋದನೆ ನೀಡಿದ್ದೇವೆ ಎಂದು ಹೇಳಿದರು.

ಮೂರನೇ ಹಂತದ ಕಾಮಗಾರಿಯಲ್ಲಿ ಕಾಲುವೆ ಕೆಲಸ ಹಾಗೂ ಯುಕೆಪಿ ೩ನೇ ಹಂತದ ಯೋಜನೆಗೆ ಅನುಮೋದನೆ ನೀಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇವುಗಳನ್ನ ಆವತ್ತು ಮಾಡಿದ್ರ ಇಂದು 60 ಸಾವಿರ ಕೋಟಿಗೆ ಹೋಗುತ್ತಿರಲಿಲ್ಲ. ಕಾಂಗ್ರೆಸ್ ನವರು ಕೆಲಸ ಮಾಡದಿರೋದ್ರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಗೋವಿಂದ್ ಕಾರಜೋಳ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕೈಯಲ್ಲಿ ಏನೂ ಮಾಡೋಕೆ ಆಗಿಲ್ಲ
ಪೆಟ್ರೋಲ್ ದರ ಇಳಿಕೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೋವಿಂದ್ ಕಾರಜೋಳ, ಕಾಂಗ್ರೆಸ್ ನವರಿಗೆ ೭೫ ವರ್ಷಗಳ ಆಡಳಿತದಲ್ಲಿ ಅವರ ಸಾಧನೆ ಶೂನ್ಯ. ಏನಾದ್ರೂ ಸಾಧನೆ ಮಾಡಿದ್ದೀವಿ ಅಂತ ಹೇಳೋದಕ್ಕೆ ಅವರಲ್ಲಿ ಏನೂ ಇಲ್ಲ. ಅದರಲ್ಲಿ ವಿಶೇಷವಾಗಿ ೧೦ ವರ್ಷಗಳ ಮನಮೋಹನ್ ಸಿಂಗ್ ಕಾಲದಲ್ಲಿ ಏನೂ ಮಾಡೋಕೆ ಆಗಿಲ್ಲ ಎಂದು ವ್ಯಂಗ್ಯ ಮಾಡಿದರು.