ರಾಜ್ಯಸುದ್ದಿ

ಈ 5 ಡೇಟಿಂಗ್ ಆ್ಯಪ್​ನಲ್ಲಿ ಪ್ರೀತಿ ಸಿಗೋದು ಪಕ್ಕಾ ಅಂತೆ, ಒಂದ್ಸಲ ಟ್ರೈ ಮಾಡಿ ನೋಡಿ..!

ಹದಿ ಹರೆಯದ ವಯಸ್ಸಿನಲ್ಲಿ ಪ್ರೀತಿ (Love) ಹುಟ್ಟುವುದು ಸಹಜ. ಸ್ಮಾರ್ಟ್​ಫೋನ್​ (Smartphone) ಬಂದ ಮೇಲಂತೂ ಇಂದು ಅಂತಹ ಪ್ರೀತಿ ಚಾಟಿಂಗ್​ನಿಂದ ಶುರುವಾಗಿ ಡೇಟಿಂಗ್​ವರೆಗೂ (Dating) ಹೋಗುವುದಿದೆ. ಇಷ್ಟಪಟ್ಟ ಸಂಗಾತಿಯ ಜೊತೆಗೆ ಅತಿ ಹೆಚ್ಚಿನ ಸಮಯ ಕಳೆಯುವವರು ಇರುತ್ತಾರೆ. ಯುವ ಜನಾಂಗವಿಂದು ಡೇಟಿಂಗ್​ ಆ್ಯಪ್​ ಮೂಲಕ  ಸಂಗಾತಿಯನ್ನು ಹುಡುಕುತ್ತಿದ್ದಾರೆ.  ಅವರೊಂದಿಗೆ ಡೇಟಿಂಗ್​ ಮಾಡಲು ಬಯಸುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಕಾಲ ಮುಂದುವರಿದಿದೆ. ಭಾರತದಲ್ಲೂ ಡೇಟಿಂಗ್​ ಆ್ಯಪ್ ಬಳಕೆ ಮಾಡುವವರ ಸಂಖ್ಯೆ ಅಧಿಕವಿದೆ. ಅದರಂತೆ ಪ್ರಸ್ತುತ ಹೆಚ್ಚು ಬಳಕೆಯಲ್ಲಿರುವ ಡೇಟಿಂಗ್​ ಆ್ಯಪ್​ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಟಿಂಡರ್ (Tinder):

ಭಾರತದಲ್ಲಿನ ಅತ್ಯಂತ ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ, ನಿಮ್ಮ ಫೇಸ್‌ಬುಕ್ ವಿವರಗಳನ್ನು ಬಳಸಿಕೊಂಡು ನೀವು ಟಿಂಡರ್‌ನಲ್ಲಿ ಸೈನ್ ಅಪ್ ಮಾಡಬಹುದು ಅಥವಾ ನಿಮ್ಮ ಸಂಪರ್ಕ ಸಂಖ್ಯೆಯನ್ನು ನಮೂದಿಸುವ ಮೂಲಕ ಹೊಸ ಖಾತೆಯನ್ನು ರಚಿಸಬಹುದು.

ಇಷ್ಟಪಡುವ ಪ್ರೊಫೈಲ್‌ಗಳ ಬಲಕ್ಕೆ ಸ್ವೈಪ್ ಮಾಡುವ ಮತ್ತು ಇಷ್ಟಪಡದವರಿಗೆ ಎಡಕ್ಕೆ ಸ್ವೈಪ್ ಮಾಡಬುದಾದ ಆಯ್ಕೆ ಇದರಲ್ಲಿ ನಿಡಲಾಗಿದೆ. ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ಇಷ್ಟಪಟ್ಟರೆ, ಹೊಂದಾಣಿಕೆಯಾದರೆ ಚಾಟ್ ಮಾಡಲು ಆಯ್ಕೆಯನ್ನು ಪಡೆಯುತ್ತೀರಿ.

ನಿಮ್ಮ ಪ್ರೊಫೈಲ್, ಹೆಸರು, ವಯಸ್ಸು, ಚಿತ್ರಗಳು ಮತ್ತು ನಿಮ್ಮ ಬಗ್ಗೆ ಚಿಕ್ಕ ವಿವರಣೆಯನ್ನು ಹೊಂದಿರುತ್ತದೆ. ಆ್ಯಪ್‌ನಲ್ಲಿ ನೀವು ಇತರ ಪ್ರೊಫೈಲ್‌ಗಳನ್ನು ಹೇಗೆ ನೋಡುತ್ತೀರಿ. ನಿಮ್ಮ ಗುರುತನ್ನು ವಿವೇಚನೆಯಿಂದ ಹೇಗೆ ಇರಿಸಿಕೊಳ್ಳಲು ಬಯಸುತ್ತೀರಿ ಇವೆಲ್ಲವು ಇದರಲ್ಲಿ ಮುಖ್ಯವಾಗುತ್ತದೆ.

ಟಿಂಡರ್‌ನಲ್ಲಿ ಉಚಿತ ಸೇವೆಯನ್ನು ಬಳಸುವಿರಾದರೆ, ಸಮೀಪದಲ್ಲಿ ಒಂದು ದಿನದಲ್ಲಿ ಸೀಮಿತ ಸಂಖ್ಯೆಯ ಪ್ರೊಫೈಲ್‌ಗಳಲ್ಲಿ ಎಡ ಅಥವಾ ಬಲಕ್ಕೆ ಸ್ವೈಪ್ ಮಾಡಬಹುದು.

ಟಿಂಡರ್ ಪ್ಲಸ್, ಪ್ರೀಮಿಯಂ ಉತ್ಪನ್ನವು ಅನಿಯಮಿತ ಸ್ವೈಪ್‌ಗಳನ್ನು ಒದಗಿಸುತ್ತದೆ, ಸ್ಥಳವನ್ನು ಬದಲಾಯಿಸುವ ಆಯ್ಕೆಗಳನ್ನು ಮತ್ತು ಅಪ್ಲಿಕೇಶನ್‌ನಲ್ಲಿ ನಿಮ್ಮ ಪ್ರೊಫೈಲ್ ಅನ್ನು ಯಾರು ಇಷ್ಟಪಟ್ಟಿದ್ದಾರೆ ಎಂಬುದನ್ನು ಸಹ ನೋಡುವ ಆಯ್ಕೆಯನ್ನು ನೀಡಿದೆ.

ಟಿಂಡರ್ ಗೋಲ್ಡ್ ಅಲ್ಲಿ ನೀವು ಅನಿಯಮಿತ ಸ್ವೈಪ್ ಆಯ್ಕೆಗಳನ್ನು ಮತ್ತು ದಿನಕ್ಕೆ ಐದು ಸೂಪರ್ ಲೈಕ್‌ಗಳನ್ನು ಪಡೆಯುತ್ತೀರಿ.

Related Articles

Leave a Reply

Your email address will not be published. Required fields are marked *

Back to top button