ಬೆಂಗಳೂರು: ಇಂದಿನಿಂದ ಶಾಲೆಯಲ್ಲಿ ಪುಟಾಣಿ ಮಕ್ಕಳ ಕಲರವ ಕೇಳಿಸಲಿದೆ. ಇವತ್ತು ಅಂಗನವಾಡಿಗಳು, LKG ಮತ್ತು UKG ಭೌತಿಕ ತರಗತಿಗಳು ಆರಂಭಗೊಳ್ಳಲಿವೆ, ಕೊರೊನಾ ಹಿನ್ನೆಲೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಪುಟಾಣಿಗಳು ಶಾಲೆಗೆ ಬಂದಿರಲಿಲ್ಲ. ಸದ್ಯ ಕೊರೊನಾ (COVID Pandemic) ತೀವ್ರತೆ ಕಡಿಮೆಯಾದ ಹಿನ್ನೆಲೆ ಸರ್ಕಾರ LKG, UKG ಆರಂಭಕ್ಕೆ ಅನುಮತಿ ನೀಡಿದೆ, ಮೊದಲ ಬಾರಿಗೆ ಮಕ್ಕಳು ಶಾಲೆಗೆ ಹೋಗುತ್ತಿರುವ ಕಾರಣ ಪೋಷಕರಲ್ಲಿ (Parennts) ಸಂಭ್ರಮ ಮನೆ ಮಾಡಿದೆ,. ಜೂನ್ ತಿಂಗಳು ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಬೇಕಿತ್ತು. ಆದ್ರೆ ಮಹಾಮಾರಿಯಿಂದ ಈ ಅದ್ಭುತ ಕ್ಷಣ ಮುಂದೂಡಿಕೆಯಾಗುತ್ತಾ ಬಂದಿತ್ತು,. ಸದ್ಯ ಸರ್ಕಾರ ಶಾಲೆ ಆರಂಭಕ್ಕೆ ಮಾರ್ಗಸೂಚಿ ಸಹ ಪ್ರಕಟಿಸಿದೆ.
ವಾರದಲ್ಲಿ ಎರಡು ದಿನ ಮಕ್ಕಳಿಗೆ ರಜೆ ನೀಡಬೇಕು. ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ರವರೆಗೆ ಅವಧಿಗೆ ವೇಳಾಪಟ್ಟಿ ನಿಗಧಿ ಮಾಡಿಕೊಳ್ಳುವಂತೆ ಹೇಳಲಾಗಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಕಂಡು ಬಂದಲ್ಲಿ ಶಾಲೆಯನ್ನು ಮುಚ್ಚಿ ಸ್ಯಾನಿಟೈಸ್ ಮಾಡಿ ಸ್ಥಳೀಯ ಆರೋಗ್ಯಾಧಿಕಾರಿಗಳ ಮಾರ್ಗದರ್ಶನದಂತೆ ಶಾಲೆ ಆರಂಭಿಸಬೇಕು.
ಶಾಲೆಗೆ ಹಾಜರಾಗುವ ಪ್ರತಿ ಮಗುವಿನ ಆರೋಗ್ಯದ ಬಗ್ಗೆ ಶಿಕ್ಷಕರು ಕಡ್ಡಾಯವಾಗಿ ಗಮನ ನೀಡಬೇಕು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ. ಆದೇಶದ ಜೊತೆ ಶಾಲೆಗಳು ಮತ್ತು ಪೋಷಕರು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಸಹ ಸರ್ಕಾರ ಬಿಡುಗಡೆಗೊಳಿಸಿದೆ.