ಬೆಂಗಳೂರು ಗ್ರಾಮಾಂತರ(bangalore rural): ಅವರಿಬ್ಬರದ್ದು ವರ್ಷಗಳ ಪ್ರೀತಿ. ಪ್ರೇಮಿಗಳ(lovers) ಇಬ್ಬರ ಮಧ್ಯೆ ಅದೇನಾಯಿತೋ ಗೊತ್ತಿಲ್ಲ. ಪ್ರಿಯತಮೆಗೆ ಇತ್ತೀಚೆಗೆ ಬೇರೊಬ್ಬ ಯುವಕನೊಂದಿಗೆ ಮದುವೆ (marriage) ನಿಶ್ಚಯವಾಗಿತ್ತು. ಇದರಿಂದ ಕನಲಿ ಹೋಗಿದ್ದ ಪ್ರಿಯಕರ ಮಾಡಿದ್ದು ಮಾತ್ರ ಅನಾಹುತ.

ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರೇಮಿಗಳ ಹೆಣ ಬಿದ್ದಿದೆ. ಜೊತೆಯಾಗಿ ಬಾಳಬೇಕಿದ್ದವರಲ್ಲಿ ಒಬ್ಬರು ಕೊಲೆಯಾದರೆ, ಮತ್ತೊಬ್ಬರು ಕೊಲೆಗಾರನಾಗಿದ್ದಾರೆ. ದುರಂತ ಪ್ರೇಮ ಕಥೆ ಇಬ್ಬರ ಸಾವಿನಲ್ಲಿ ಅಂತ್ಯವಾಗಿದೆ.
ಪ್ರೇಯಸಿಯನ್ನ ಹತ್ಯೆಗೈದು ಪ್ರಿಯಕರ ಆತ್ಮಹತ್ಯೆಗೆ ಶರಣಾನಾಗಿದ್ದಾರೆ. ಹೊಸಕೋಟೆ ತಾಲ್ಲೂಕಿನ ಲಿಂಗಧೀರಮಲ್ಲಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಅಂಕೋಲಾ ಮೂಲದ ಯುವತಿ ಉಷಾಗೌಡ(24) ಹತ್ಯೆಯಾದ ಯುವತಿ. ಪ್ರೇಯಸಿಯ ಹತ್ಯೆ ಬಳಿಕ ಪ್ರಿಯಕರ ಗೋಪಾಲಕೃಷ್ಣ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.