Kannada New Movies:ಲಾಕ್ಡೌನ್ನಿಂದ ಹೆಚ್ಚು ಕಡಿಮೆ ಎರಡು ವರ್ಷಗಳ ಕಾಲ ಚಿತ್ರಮಂದಿರಗಳು ಮುಚ್ಚುವ ಅನಿವಾರ್ಯತೆ ಎದುರಾಗಿತ್ತು. ಹಾಗಾಗಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗದೇ ಹಾಗೇಯೆ ಉಳಿದು ಬಿಟ್ಟಿವೆ. ಇದೀಗ ನವೆಂಬರ್ ತಿಂಗಳಲ್ಲಿ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿದೆ.

ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಸಿನಿಮಾ ನವೆಂಬರ್ 12ಕ್ಕೆ ತೆರೆಗೆ ಬರುತ್ತಿದೆ. ಪ್ರೇಮಂ ಪೂಜ್ಯಂ ಹಲವು ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ. ಇದು ನಟ ಪ್ರೇಮ್ ಅಭಿನಯದ 25ನೇ ಸಿನಿಮಾ. ಟೀಸರ್ ಮತ್ತು ಹಾಡುಗಳಿಂದ ಪ್ರೇಮಂ ಪೂಜ್ಯಂ ಭಾರೀ ನಿರೀಕ್ಷೆ ಹುಟ್ಟಿಸಿದೆ.
ಈಗಾಗಲೇ ನವೆಂಬರ್ 5 ಕ್ಕೆ ಬಿ ಗ್ ಬಾಸ್ನಲ್ಲಿ ಸ್ಫರ್ಧಿಯಾಗಿದ್ದ ದಿವಾಕರ್ ಅಭಿನಯದ ಗುಲಾಲ್ ಡಾಟ್ ಕಾಮ್ ಚಿತ್ರ ರಿಲೀಸ್ ಆಗಿದೆ. ಬಿಡುಗಡೆಯಾದ ದಿನ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನೂ ನವೆಂಬರ್ 19ಕ್ಕೆ ಮನೋರಂಜನ್ ಅಭಿನಯದ ಮುಗಿಲ್ ಪೇಟೆ ಸಿನಿಮಾ ಕೂಡ ತೆರೆಕಾಣುತ್ತಿದೆ. ಭರತ್ ಎಸ್ ನಾವುಂಡ ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಮತ್ತು ಕೌಟುಂಬಿಕ ಕಥಾ ವಂಸ್ತು ಹೊಂದಿರುವ ರೋಮ್ಯಾಂಟಿಕ್ ಎಂಟರ್ಟೈನರ್ನಲ್ಲಿ ಕಯಾಡು ಲೋಹರ್ ನಾಯಕಿಯಾಗಿದ್ದಾರೆ.