ರಾಜ್ಯಸುದ್ದಿ

ಶಾಸಕ ರಾಯರಡ್ಡಿ ದೌರ್ಜನ್ಯ ಮಿತಿ ಮೀರಿದೆ : ಶಿವಶರಣಪ್ಪಗೌಡ ಪಾಟೀಲ್

ಯಲಬುರ್ಗಾ: ಕ್ಷೇತ್ರದಲ್ಲಿ ಶಾಸಕ ಬಸವರಾಜ ರಾಯರಡ್ಡಿಯವರ ದೌರ್ಜನ್ಯ ಮೀತಿ ಮೀರಿದೆ, ನನ್ನ ಮಗ ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ ಅವರು ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆಯಾಗುತ್ತಿರುವದನ್ನು ಸಹಿಸುತ್ತಿಲ್ಲ ಎಂದು
ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ಹಿಂದೆ ಕ್ಷೇತ್ರದ ಶಾಸಕನಾಗಿ ಜನಪರ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ, ಕ್ಷೇತ್ರದಲ್ಲಿ ಶಾಸಕ ರಾಯರಡ್ಡಿ ಹಾಗೂ ಅವರ ಸಹೋದರರು, ಮತ್ತು ಎಸ್.ಆರ್.ನವಲಿ ಹಿರೇಮಠ ಅವರು ಕ್ಷೇತ್ರದಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದರು.

ರಾಯರಡ್ಡಿ ಬೇರೆ ಯಾರು ಶಾಸಕರಾಗಬಾರದು ಎಂಬ ನೀಚ ಮನಸ್ಸಿನವರು ಎಂದರು. ಕ್ಷೇತ್ರದಲ್ಲಿ ವಿಂಡ್ ಮೀಲ್ ಮಾಲೀಕರು ಹಾಗೂ ರೈತರು ಜಮೀನು ಖರೀದಿಸಬೇಕಾದರೇ ಸಬ್ ರಿಜಸ್ಟರ್ ಕಚೇರಿಗೆ ಹೊಗೋಕು ಮುಂಚೆ ರಾಯರಡ್ಡಿವರಿಗೆ ಹಣ ತಲುಪಿಸಿದಾಗ ಮಾತ್ರ ಖರೀದಿಯಾಗುತ್ತಿವೆ ಎಂದರು.

ಶೀಘ್ರದಲ್ಲಿಯೇ ರಾಯರಡ್ಡಿಯ ಭ್ರಷ್ಟಚಾರದ ದಾಖಲೆಗಳನ್ನು ಬಹಿರಂಗ ಪಡೆಸುತ್ತೇನೆ ಎಂದರು.
ರಾಯರಡ್ಡಿಯವರು ತಮ್ಮ ಸಹೋದರರ ಕ್ರಷರ ನಿಂದ ಕಡಿ ಪಡೆಯಬೇಕು ಎಂದು ಗುತ್ತಿಗೆದಾರರಿಗೆ ಕಟ್ಟಪ್ಪಣೆ ಮಾಡಿದ್ದಾರೆ, ಅದನ್ನು ಮೀರಿ ಕಡಿ,ಜಲ್ಲಿ ತೆಗೆದುಕೊಂಡರೇ ಬಿಲ್ ತಡೆ ಹಿಡಿಯುವ ಸಣ್ಣತನದ ಕೆಲಸ ಮಾಡುತ್ತಿದ್ದಾರೆ ಎಂದರು.

ಕ್ರಷರನಲ್ಲಿ ಸಣ್ಣ ಘಟನೆ ನಡೆದಿದೆ, ಯಾರಿಗೂ ಅಪಾಯವಾಗಿಲ್ಲ ಅವರ ಕಡೆಯಿಂದ ದೂರು ಕೊಡಿಸಿದ್ದಾರೆ. ಶಾಸಕ ರಾಯರಡ್ಡಿ ಹಾಗೂ ಅವರ ಸಹೋದರರು ಇಬ್ಬರಿಗೆ ಒತ್ತಾಯ ಮಾಡಿ ಜಾತಿ ನಿಂದನೆ ಅಂತಹ ಸುಳ್ಳು ದೂರು ಕೊಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಕೀಲರ ಮೂಲಕ ಬೇಲ್ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಕುಕನೂರು ಪಿಎಸ್ಐ ಧನಲಕ್ಷ್ಮೀ ಎಂಬುವವ ಮನೆಗೆ ತೆರಳಿ ದಬ್ಬಾಳಿಕೆ ನಡಸಿದ್ದಾರೆ, ಅಧಿಕಾರಿಗಳು ಕಾನೂನು ಮೀರಿ ನಡೆದುಕೊಳ್ಳಬಾರದು ಎಂದರು.
ಕುಕನೂರು ಪಿಎಸ್ಐ ವರ್ತನೆ ಮೀತಿ ಮೀರಿದೆ, ತಾಲೂಕಿನಲ್ಲಿ ಹಲವಾರು ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿವೆ

ಅಧಿಕಾರ ಶಾಶ್ವತವಲ್ಲ, ಶಾಸಕರ ಸಹೋದರೆಉ ಎಂದು ವಿರುಪಾಕ್ಷಪ್ಪ, ಶಿವಣ್ಣನ ವರ್ತನೆ ಸರಿಯಲ್ಲ ಎಂದರು.

ವರದಿ : ದೊಡ್ಡಬಸಪ್ಪ ಹಕಾರಿ tv8kannada ಯಲಬುರ್ಗ

Related Articles

Leave a Reply

Your email address will not be published. Required fields are marked *

Back to top button