ದೇಶ

ದೀಪಾವಳಿ ಹಬ್ಬದಂದು 100 ಟನ್ ನ್ಯಾನೋ ರಸಗೊಬ್ಬರವನ್ನು ಶ್ರೀಲಂಕಾಕ್ಕೆ ತಲುಪಿಸಿದ ಭಾರತ..!

ಶ್ರೀಲಂಕಾ(Sri Lanka)ವನ್ನು ಸಂಪೂರ್ಣವಾಗಿ ಸಾವಯವ ರಾಷ್ಟ್ರವನ್ನಾಗಿ ಪರಿವರ್ತಿಸಲು ಅಲ್ಲಿನ ಅಧ್ಯಕ್ಷ ಗೋಟಬಯ ರಾಜಪಕ್ಸೆ(Gotabaya Rajapaksa) ಹಠಾತ್‌ ಹೆಜ್ಜೆ ಇಟ್ಟರು. ಅಂದಿನಿಂದ ದ್ವೀಪ(Island Country) ರಾಷ್ಟ್ರವು ಬೆಳೆ ಉತ್ಪಾದನೆ ಮತ್ತು ರಸಗೊಬ್ಬರ ಬಳಕೆಗೆ ಸಂಬಂಧಿಸಿದಂತೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಈ ಹಿನ್ನೆಲೆ ರಾಷ್ಟ್ರದ ಅಧ್ಯಕ್ಷರು ಹಸಿರು ಮಂಡಳಿಯನ್ನು ಸ್ಥಾಪಿಸಲು ಕಾರಣವಾಯಿತು. ಅಲ್ಲದೆ, ರಾಸಾಯನಿಕ ಗೊಬ್ಬರ(Chemical Fertilizers)ಗಳನ್ನು ನಿಷೇಧಿಸಿತು ಮತ್ತು 2020ರ ಉತ್ಪಾದನೆಯ ಮಟ್ಟವನ್ನು ಮುಂದುವರಿಸಲು ವಿಫಲವಾದ ನಂತರ ಅವರ ಮಾತನ್ನು ಹಿಂತೆಗೆದುಕೊಂಡು ಪೊಟ್ಯಾಷಿಯಂ ಕ್ಲೋರೈಡ್‌ (KCL) ಮತ್ತು ಸಾರಜನಕ ನ್ಯಾನೋ ಗೊಬ್ಬರ(Nano Fertilizer)ಗಳಂತಹ ರಾಸಾಯನಿಕ ಗೊಬ್ಬರಗಳನ್ನು ತನ್ನ ಕೃಷಿ ಕ್ಷೇತ್ರವನ್ನು ತೃಪ್ತಿಪಡಿಸಲು ಭಾರತ ಮತ್ತು ಪ್ರಪಂಚದ ಇತರ ಭಾಗಗಳಿಂದ ತುರ್ತಾಗಿ ಆಮದು ಮಾಡಿಕೊಳ್ಳಲಾಯಿತು.

ಕೊಲಂಬೋಗೆ ತೆರಳಿದ ರಸಗೊಬ್ಬರ ಹೊತ್ತ ವಿಮಾನಗಳು

100 ಟನ್ ನ್ಯಾನೋ ನೈಟ್ರೋಜನ್ ದ್ರವ ರಸಗೊಬ್ಬರಗಳನ್ನು ಹೊತ್ತ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಗುರುವಾರ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಬಂದಿಳಿದಿವೆ. ಈ ಸಂಬಂಧ ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ಟ್ವೀಟ್‌ ಮೂಲಕ ಮಾಹಿತಿ ನೀಡಿದೆ. ನ್ಯಾನೋ ರಸಗೊಬ್ಬರಗಳನ್ನು ಏರ್‌ಲಿಫ್ಟಿಂಗ್ ಮಾಡುವಲ್ಲಿ ತುರ್ತು ಬೆಂಬಲಕ್ಕಾಗಿ ಶ್ರೀಲಂಕಾ ಸರ್ಕಾರದ ಕರೆಗೆ ಪ್ರತಿಕ್ರಿಯೆಯಾಗಿ ವಿತರಣೆಯಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಹೈಕಮಿಷನ್​ ಟ್ವೀಟ್

“#ದೀಪಾವಳಿಯ ದಿನದಂದು, ಬೆಳಕಿನ ಹಬ್ಬ, #ಭಾರತೀಯ ವಾಯುಪಡೆಯು ಮತ್ತೊಮ್ಮೆ #ಶ್ರೀಲಂಕಾಕ್ಕೆ ಭರವಸೆಯ ಕಿರಣವನ್ನು ತಂದಿತು. #ಭಾರತದಿಂದ ನ್ಯಾನೋ ಗೊಬ್ಬರಗಳನ್ನು ಏರ್‌ಲಿಫ್ಟಿಂಗ್ ಮಾಡಲು ತುರ್ತು ಬೆಂಬಲಕ್ಕಾಗಿ GoSL ನ ಕರೆಗೆ ಸ್ಪಂದಿಸುತ್ತಾ, 2 @IAF_MCC ವಿಮಾನಗಳು 100 ಟನ್‌ಗಳ ಉತ್ಪನ್ನವನ್ನು ಹೊತ್ತು ಇಂದು #ಕೊಲಂಬೋಗೆ ಬಂದಿವೆ ಎಂದು ಶ್ರೀಲಂಕಾದ ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button