ಇತ್ತೀಚಿನ ಸುದ್ದಿ
ಸೆಂಟ್ ಫ್ರಾನ್ಸಿಸ್ ಐಸಿಎಸ್ಇ ಶಾಲೆಯಲ್ಲಿ ಉದ್ಯಾನವನ ಉದ್ಘಾಟನೆ

ಚಾಮರಾಜನಗರ: ಸಮೀಪದ ರಾಮಸಮುದ್ರದಲ್ಲಿ ಇರುವ ಸಂತ ಫ್ರಾನ್ಸಿಸ್ ಐಸಿಎಸ್ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಫ್ರಾನ್ಸಿಸಿಯನ್ ಫ್ಯಾಂಟಸಿಯ ಉದ್ಯಾನವನವನ್ನು ಬೆಂಗಳೂರು ಪ್ರಾಂತ್ಯಾಧಿಕಾರಿ ರೆವರೆಂಡ್.ಬ್ರದರ್ ಕ್ಷೇವಿಯರ್ ಅಲೆಗ್ಸಾಂಡರ್ ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು .

ನಂತರ ಮಾತನಾಡಿದ ಅವರು ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ ಅಲ್ಲದೆ ಉತ್ತಮ ಬೋಧಕರನ್ನು ಹೊಂದಿದ್ದು, ಮಕ್ಕಳಿಗೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಶಾಲಾ ಆವರಣದಲ್ಲಿ ಉದ್ಯಾನವನವನ್ನು ನಿರ್ಮಿಸಲಾಗಿದೆ, ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಂಡು ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ಶಾಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಡಳಿತ ಅಧಿಕಾರಿ ರೆವರೆಂಡ್ ಬ್ರದರ್. ಬಾಲಸ್ವಾಮಿ, ಪ್ರಿನ್ಸಿಪಾಲ್ ಪ್ರಭಾಕರ್ ಇದ್ದರು.
ವರದಿ: ಇರಸವಾಡಿ ಸಿದ್ದಪ್ಪಾಜಿ tv8kannada ಚಾಮರಾಜನಗರ